ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.4 : ಮಾಧ್ಯಮ ಲೋಕದಲ್ಲಿ ಲೇಖನಿ ಎಂಬ ಅಸ್ತ್ರ ಹೆಚ್ಚು ಹರಿತವಾಗಿದ್ದು, ಅದರ ಸದುಪಯೋಗವಾಗಬೇಕು ಎಂದು ವೈದ್ಯ ಡಾ. ಆಂಜಿನಪ್ಪ ತಿಳಿಸಿದರು.
ಹೊಸಕೋಟೆ ನಗರದ ಪರಿವೀಕ್ಷಣಾ ಮಂದಿರದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ
ಸಂಪಾದಕರು ಮತ್ತು ವರದಿಗಾರರ ಸಂಘ, ತಾಲೂಕು ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವರದಿಗಾರರು ಸತ್ಯಾಸತ್ಯತೆಯಿಂದ ವರದಿ ಮಾಡಬೇಕು. ಸಮಾಜದಲ್ಲಿ ಪತ್ರಿಕೋದ್ಯಮ ನಾಲ್ಕನೇ ಅಂಗವಾಗಿದ್ದು, ನಿಮ್ಮ ಸೇವೆ ಅಮೋಘವಾದುದ್ದು, ನಾನು ನನ್ನ ವೃತ್ತಿಯಲ್ಲಿ 35 ಸಾವಿರ ಅಪರೇಷನ್ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದು, ಒಂದೇ ರಾತ್ರಿ 10 ಜನರ ಹೊಟ್ಟೆಯಲ್ಲಿದ್ದ ಗುಂಡುಗಳನ್ನು ತೆಗದಿದ್ದು, ಅದೂ ಕೂಡ ಸಾಧನೆಗೆ ಗರಿ ಮೂಡಿಸಿದೆ. ಮಾಧ್ಯಮ ವರದಿಗಾರರು ಸಮಾಜ ಸುಧಾರಣೆ ಜೊತೆಗೆ ಸಮಾಜ ಸೇವೆಯ ರೀತಿಯಲ್ಲಿ ಕೆಲಸ ಮಾಡುತಿದ್ದು, ನೈಜ ಪತ್ರಕರ್ತರ ನೆರವಿಗೆ ಸರ್ಕಾರ ಇನ್ನೂ ಹೆಚ್ಚಿನ ಭದ್ರತೆ ನೀಡಬೇಕಿದೆ . ವರದಿಗಾರರಿಗೆ ವೈದ್ಯಕೀಯವಾಗಿ ಸಹಾಯ ಬೇಕಿದ್ದರೆ ನೀಡಲು ಸದಾ ಸಿದ್ದನಿದ್ದೇನೆ ಎಂದು ವಿಶ್ವಾನ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಪತ್ರಕರ್ತರು ವೃತ್ತಿ ಧರ್ಮದಲ್ಲಿ ಪೆನ್ನು ಕತ್ತಿಗಿಂತ ಹರಿತವಾದುದ್ದು. ಆದ್ದರಿಂದ ಕಣ್ಣಾರೆ ಕಂಡು ಕಾಣದಂತೆ ಹೋಗಬಾರದು. ಅದನ್ನು ಪ್ರಶ್ನಿಸಿ ಅದನ್ನು ವಸ್ತು ನಿಷ್ಠೆಯಿಂದ ಬರೆದರೆ ಅದಕ್ಕೂಂದು ಅರ್ಥ ಬರುತ್ತದೆ ಎಂದರು.
ಕರ್ನಾಟಕ ಸಂಪಾದಕ ಹಾಗೂ ವರದಿಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಟಿ. ನಾಗರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ವಲಯದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ನೈಜ ಪತ್ರಕರ್ತರ ಘನತೆಗೆ ಕುಂದುಂಟಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಂಪಾದಕರು ಹಾಗೂ ವರದಿಗಾರರ ರಾಜ್ಯ ಉಪಾಧ್ಯಕ್ಷ ಟಿ. ನಾಗರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಂ. ರಾಮೇಗೌಡ, ಪ್ರಧಾನಕಾರ್ಯದರ್ಶಿ ನಟರಾಜ್, ತಾಲೂಕು ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ತೇಜಸ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.