ಸುದ್ದಿಮೂಲ ವಾರ್ತೆ ಸಿಂಧನೂರು, ಜ.05:
ಸಿಂಧನೂರು ಜಿಲ್ಲೆೆ ರಚನೆ ಕುರಿತಂತೆ ಅಕ್ಕ-ಪಕ್ಕದ ತಾಲೂಕುಗಳನ್ನು ಸಂಪರ್ಕಿಸಲು ಹಾಗೂ ಹೋರಾಟ ರೂಪಿಸಲು ಸಮಿತಿ ರಚನೆಗೆ ಸಂಬಂಧಿಸಿದಂತೆ ಜ-8 ರಂದು ನಗರದ ಟೌನ್ಹಾಲ್ನಲ್ಲಿ ಬೆಳಗ್ಗೆೆ 11 ಗಂಟೆಗೆ ಸಭೆ ಕರೆಯಲಾಗಿದೆ ಎಂದು ಡಾ.ಬಿ.ಎನ್.ಪಾಟೀಲ್ ತಿಳಿಸಿದರು.
ಸೋಮವಾರ ನಗರದ ಪತ್ರಿಿಕಾ ಭವನದಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಿ ನಡೆಸಿ ಉದ್ದೇಶಿಸಿ ಮಾತನಾಡಿದರು. ಸಿಂಧನೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಕೇಂದ್ರ ಸ್ಥಾಾನದಲ್ಲಿದ್ದು, ಸಾರಿಗೆ- ಸಂಪರ್ಕ-ಸಂವಹನಕ್ಕೆೆ ಬಹಳಷ್ಟು ಅನುಕೂಲತೆ ಹೊಂದಿದೆ. ಸಿಂಧನೂರು, ಲಿಂಗಸುಗೂರು, ಮಸ್ಕಿಿ ಸೇರಿದಂತೆ ಇತರೆ ಸಮೀಪದ ತಾಲೂಕುಗಳನ್ನು ಒಳಗೊಂಡು ಜಿಲ್ಲೆೆ ರಚಿಸಿದರೆ ಅಭಿವೃದ್ಧಿಿ ಸೇರಿದಂತೆ ಇನ್ನಿಿತರೆ ಕೆಲಸ ಕಾರ್ಯಗಳು ಸುಗಮವಾಗಲಿವೆ. ಈ ನಿಟ್ಟಿಿನಲ್ಲಿ ಲಿಂಗಸುಗೂರು, ಮಸ್ಕಿಿ ಸೇರಿದಂತೆ ಇನ್ನಿಿತರೆ ತಾಲೂಕು ಹಾಗೂ ಪಟ್ಟಣ ಪ್ರದೇಶದವರಿಗೆ ಸಿಂಧನೂರು ಜಿಲ್ಲಾಾ ಕೇಂದ್ರವಾದರೆ ಜನಸಾಮಾನ್ಯರು ಸೇರಿದಂತೆ ಆಡಳಿತಕ್ಕೆೆ ಏನೆಲ್ಲಾಾ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಪಕ್ಷಾತೀತ ಹೋರಾಟ ರೂಪಿಸುವ ಹಿನ್ನೆೆಲೆಯಲ್ಲಿ ಅಂದು ಕರೆದಿರುವ ಬೃಹತ್ ಸಭೆಯಲ್ಲಿ ಎಲ್ಲಾಾ ಸಂಘ-ಸಂಸ್ಥೆೆ, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಯುವ ಮುಖಂಡರು, ರಾಜಕೀಯ ಪ್ರತಿನಿಧಿಗಳು ಹಾಗೂ ವಿದ್ಯಾಾರ್ಥಿ ಯುವಜನರು, ಮಹಿಳೆಯರು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಬೇಕು ಎಂದ ಬಿ.ಎನ್.ಪಾಟೀಲ್ ಅವರು ಜನಾಭಿಪ್ರಾಾಯದ ಸಂಗ್ರಹದ ಮೂಲಕ ಜಿಲ್ಲಾಾ ರಚನೆ ಹೋರಾಟದ ಕುರಿತು ರೂಪು-ರೇಷೆ ತಯಾರಿಸಲಾಗುವುದು ಅಂದು ಹೋರಾಟ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
ಸಿಂಧನೂರು ನಗರಕ್ಕೆೆ ತಾವರಗೇರಾ, ಕಾರಟಗಿ ಪಟ್ಟಣಗಳು ಸಮೀಪದಲ್ಲಿವೆ. ಅವರನ್ನೂ ಕೂಡ ಜಿಲ್ಲಾಾ ರಚನೆಗೆ ಕುರಿತಂತೆ ಸಂಪರ್ಕಿಸಬಹುದಾಗಿದೆ. ಕಾರಟಗಿ ಮತ್ತು ತಾವರಗೇರಾ ಪಟ್ಟಣ ಅತ್ಯಂತ ಸಮೀಪದಲ್ಲಿರುವುದರಿಂದ ಅವರೂ ಸಹ ಸಿಂಧನೂರು ಜಿಲ್ಲೆೆ ರಚನೆಗೆ ಕುರಿತಂತೆ ಕೈಜೋಡಿಸುವ ಸಾಧ್ಯತೆ ಹೆಚ್ಚಿಿದೆ. ಈ ನಿಟ್ಟಿಿನಲ್ಲಿ ಸಂಘ-ಸಂಸ್ಥೆೆಗಳವರು, ರಾಜಕೀಯ ಮುಖಂಡರು, ಕನ್ನಡಪರ ಸಂಘಟನೆಗಳು, ಜನಪರ ಸಂಘಟನೆಗಳು, ವೃತ್ತಿಿಪರ ಸಂಘಟನೆಗಳು ಜವಾಬ್ದಾಾರಿ ವಹಿಸಿಕೊಂಡು ಜಿಲ್ಲಾಾ ರಚನೆಗೆ ಶ್ರಮಿಸಬೇಕಿದೆ ಎಂದು ಪಾಟೀಲ್ ಮನವಿ ಮಾಡಿದರು.
ಶಾಸಕ ಹಂಪನಗೌಡ ಬಾದರ್ಲಿ ಅವರು ಕ್ಷೇತ್ರದ ಅಭಿವೃದ್ಧಿಿ ದೃಷ್ಟಿಿಯಿಂದ ಈಗಾಗಲೇ ಜಿಲ್ಲಾಾ ಕೋರ್ಟ್, ಸುಡಾ ಕಚೇರಿ, ಜಿಲ್ಲಾಾ ಆಸ್ಪತ್ರೆೆ ಸೇರಿದಂತೆ ಹಲವು ಕಚೇರಿಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾಾರೆ. ಇನ್ನೇನು ಕೆಲ ದಿನಗಳಲ್ಲಿ ಆರ್ಟಿಒ ಕಚೇರಿ ಸೇರಿದಂತೆ ಇನ್ನಿಿತರೆ ಕಾರ್ಯಾಲಯಗಳು ಆರಂಭಗೊಳ್ಳಲಿವೆ. ಜಿಲ್ಲಾಾ ಕೇಂದ್ರವಾಗಬೇಕಾದ 130 ರಿಂದ 140 ಜಿಲ್ಲಾಾ ಕಚೇರಿಗಳ ಅವಶ್ಯಕತೆ ಇದೆ. ಈ ನಿಟ್ಟಿಿನಲ್ಲಿ ಶಾಸಕರು ಶಕ್ತಿಿಮೀರಿ ಪ್ರಯತ್ನಿಿಸುತ್ತಿಿದ್ದಾಾರೆ ಎಂದು ಬಿ.ಎನ್.ಪಾಟೀಲ್ ವಿವರಿಸಿದರು.
ಈ ಸಂದರ್ಭದಲ್ಲಿ ಸುಡಾ ಸದಸ್ಯ ವೈ.ನರೇಂದ್ರನಾಥ, ಪಿಕಾರ್ಡ್ ಬ್ಯಾಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಜಮಾಅತೆ ಇಸ್ಲಾಾಮಿ ಹಿಂದ್ನ ಅಧ್ಯಕ್ಷ ಹುಸೇನ್ಸಾಬ್, ಪತ್ರಕರ್ತರ ಸಂಘದ ಅಧ್ಯಕ್ಷ ಶರಣಪ್ಪ ಗೋನಾಳ, ಕಸಾಪ ಅಧ್ಯಕ್ಷ ಎಚ್.ಎ್.ಮಸ್ಕಿಿ, ಪಂಪಯ್ಯ ಸಾಲಿಮಠ, ಕನ್ನಡಪರ ಸಂಘಟನೆಗಳ ಮುಖಂಡ ದಾವಲ್ಸಾಬ್ ದೊಡ್ಮನಿ, ಸುರೇಶ ಸೇರಿದಂತೆ ಇನ್ನಿಿತರರಿದ್ದರು.
ಸಿಂಧನೂರು ಜಿಲ್ಲಾ ಕೇಂದ್ರ ಸ್ಥಾಪನೆ ಸಮಿತಿ ರಚಿಸಲು ಜ.8 ರಂದು ಸಭೆ – ಡಾ.ಬಿ.ಎನ್.ಪಾಟೀಲ್

