ಸುದ್ದಿಮೂಲ ವಾರ್ತೆ ಬೀದರ್, ಜ.29:
ಪ್ರಾಾದೇಶಿಕ ಅಸಮತೋಲನ ಹೋಗಲಾಡಿಸಲು 371ಜೆ ತಿದ್ದುಪಡಿ ತರಲಾಗಿದ್ದು, ಇದಕ್ಕಾಾಗಿ ವೈಜಿನಾಥ ಪಾಟೀಲರಿಂದ ಹಿಡಿದು ಸಾಕಷ್ಟು ಜನಪ್ರತಿನಿಧಿಗಳು ಹೋರಾಟ ಮಾಡಿದ್ದರು. ಆದರೆ 371ಜೆ ಇಂದು ಸಮರ್ಪಕ ಜಾರಿಯಾಗುತ್ತಿಿಲ್ಲ. ಈ ಕುರಿತು ವಿದ್ಯಾಾರ್ಥಿಗಳು ಹಾಗೂ ಬೋಧಕರು ಹೋರಾಟ ಮಾಡುವ ಅಗತ್ಯವಿದೆ ಎಂದು ಕಲಬುರಗಿಯ ಡಾ. ಬಿ.ಆರ್.ಅಂಬೇಡ್ಕರ್ ಮಹಾವಿದ್ಯಾಾಲಯದ ನಿವೃತ್ತ ಪ್ರಾಾಚಾರ್ಯ ಡಾ. ಬಸವರಾಜ ಕಮಕನೂರ ತಿಳಿಸಿದರು.
ಬೀದರ ವಿಶ್ವವಿದ್ಯಾಾಲಯ ಬೀದರ ಹಾಗೂ ಕಲಂ 371ಜೆ ಸಮಗ್ರ ಅನುಷ್ಠಾಾನ ಹೋರಾಟ ಸಮಿತಿ ಕಲ್ಯಾಾಣ ಕರ್ನಾಟಕ ಇವರ ಸಂಯುಕ್ತಾಾಶ್ರಯದಲ್ಲಿ ವಿಶ್ವವಿದ್ಯಾಾಲಯದ ಸಭಾಂಗಣದಲ್ಲಿ ಆಯೋಜಿಸಿದ ಕಲಂ 371ಜೆ ತಿದ್ದುಪಡಿ ದಿನಾಚರಣೆ ಹಾಗೂ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಾಸ ನೀಡುತ್ತ ಮಾತನಾಡಿದರು.
ಇಂದು ಕಲ್ಯಾಾಣ ಕರ್ನಾಟಕ ಭಾಗದಲ್ಲಿ ತಲಾದಾಯ ಕಡಿಮೆಯಿದೆ. ಸಾಯುವವರ ಸಂಖ್ಯೆೆಯೂ ಹೆಚ್ಚಾಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದೆ. 74 ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತಿದ್ದಾರೆ. ಪ್ರತೀ ಹತ್ತು ಸಾವಿರ ಜನರಿಗೆ ಒಬ್ಬ ವೈದ್ಯ ಬೇಕು. ಆದರೆ 40 ಸಾವಿರ ಜನರಿಗೆ ಒಬ್ಬ ವೈದ್ಯರಿದ್ದಾರೆ. ಮಾನವ ಅಭಿವೃದ್ಧಿಿ ಸೂಚ್ಯಂಕದಲ್ಲಿ ಬೀದರ ಜಿಲ್ಲೆ 22ನೇ ಸ್ಥಾಾನದಲ್ಲಿದೆ. ನಂಜುಂಡಪ್ಪ ವರದಿ ಪ್ರಕಾರ ಕೆ.ಎ.ಎಸ್. ಅಧಿಕಾರಿಗಳ ಸಂಖ್ಯೆೆ ಕೇವಲ 2 ಪ್ರತಿಶತವಿದೆ. ಹೀಗಾಗಿ ಈ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲಾಗುತ್ತಿಿಲ್ಲ. ಇದಕ್ಕೆೆಲ್ಲ ಕಾರಣ ನಮ್ಮಲ್ಲಿರುವ ಹೋರಾಟದ ಕಿಚ್ಚು ಮರೆಯಾಗಿದೆ. ವಿದ್ಯಾಾರ್ಥಿಗಳು ಈ ಕುರಿತು ಗಂಭೀರವಾಗಿ ಚಿಂತಿಸಿ ಹೋರಾಟದ ಮೂಲಕ 371ಜೆ ಕಲಂ ತಿದ್ದುಪಡಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಬೀದರ ವಿಶ್ವವಿದ್ಯಾಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ, ಕಲಂ 371ಜೆ ಸಮಗ್ರ ಅನುಷ್ಠಾಾನ ಹೋರಾಟ ಸಮಿತಿ ಅಧ್ಯಕ್ಷ ಅಶೋಕ ಮಾನೂರೆ, ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಸಮಿತಿಯ ಗೌರವಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಬೀದರ ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊ.ಬಿ.ಎಸ್.ಬಿರಾದಾರ ವಹಿಸಿದ್ದರು. ವೇದಿಕೆ ಮೇಲೆ ಬೀದರ ವಿ.ವಿ.ಯ ರೆಜಿಸ್ಟ್ರಾಾರ್ ಪ್ರೊೊ. ಪರಮೇಶ್ವರ ನಾಯಕ್, ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಪ್ರೊೊ. ಶಿವನಾಥ ಪಾಟೀಲ, ಪ್ರೊೊ. ವಿಠಲದಾಸ ಪ್ಯಾಾಗೆ, ಅರ್ಜುನ ಕನಕ, ಅಬ್ದುಲ್ ಸತ್ತಾಾರ್, ಕು.ವೈಷ್ಣವಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿಿತರಿದ್ದರು.
ಕಲಂ 371ಜೆ ಸಮಗ್ರ ಅನುಷ್ಠಾಾನ ವಿಚಾರ ಸಂಕಿರಣ ಸೌಲಭ್ಯಗಳಿಗಾಗಿ ಹೋರಾಟದ ಅಗತ್ಯವಿದೆ: ಡಾ. ಬಸವರಾಜ ಕಮಕನೂರ

