ಬೆಂಗಳೂರು ಜನವರಿ 15: ಖ್ಯಾತ ಹೋಮಿಯೋಪತಿ ವೈದ್ಯ, ನಾಡೋಜ ಡಾ.ಬಿ.ಟಿ. ರುದ್ರೇಶ್ ಅವರ ಮತ್ತೊಂದು ಪುಸ್ತಕ “ಅಶ್ವಿನಿ ಸ್ಪರ್ಶ – ಹೋಮಿಯೋಪತಿ ಉತ್ಕರ್ಷ” ಬಿಡುಗಡೆಗೊಂಡಿತು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು.
ನಂತರ ಹೋಮಿಯೋಪತಿ ಮಹತ್ವದ ಕುರಿತು ಪುಸ್ತಕ ರಚನೆ ಮಾಡಿರುವುದಕ್ಕೆ ನಾಡೋಜ ರುದ್ರೇಶ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಡಾ.ಬಿ.ಟಿ. ರುದ್ರೇಶ್ ಹೋಮಿಯೋಪತಿ ವೈದ್ಯಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಹೋಮಿಯೋಪತಿ ಪದ್ಧತಿಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯಂತ ಜನಪ್ರಿಯ ಕನ್ನಡ ಧಾರಾವಾಹಿ ಮುಕ್ತ ಮುಕ್ತದಲ್ಲಿ ಹೋಮಿಯೋಪತಿ ವೈದ್ಯರಾಗಿ ಅವರ ಶ್ಲಾಘನೀಯ ಅಭಿನಯವು ಕನ್ನಡ ಮಾತನಾಡುವ ಜನರಲ್ಲಿ ಹೋಮಿಯೋಪತಿಗೆ ಹೊಸ ಗುರುತನ್ನು ನೀಡಿದೆ ಎಂದು ಶ್ಲಾಘಿಸಿದರು.