ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.28:
ನಿತ್ಯ ಅನ್ನ ದಾಸೋಹ ಕಾರ್ಯ ದೇವರಿಗೆ ಇಷ್ಟವಾಗಿದ್ದು. ಈ ನಿಟ್ಟಿಿನಲ್ಲಿ ಸರ್ಕಾರಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿ ರುವ ರೋಗಿಗಳಿಗೆ ಕಳೆದ ಎರಡು ವರ್ಷಗಳಿಂದ ಸಾಲಿಡಾರಿಟಿ ಯೂತ್ ಮೂವ್ಮೆೆಂಟ್ ನ ಆಶ್ರಯದಲ್ಲಿ ಉಚಿತ ಆಹಾರ ವಿತರಿಸುತ್ತಿಿರುವ ಜೈಹಿಂದ್ ಉಚಿತ ಆಹಾರ ಕೇಂದ್ರದ ದಾಸೋಹ ಕಾರ್ಯ ಮಾದರಿಯಾಗಿದೆ ಎಂದು ಜನನಿ ಆಸ್ಪತ್ರೆೆಯ ಮಕ್ಕಳ ತಜ್ಞ ಡಾ.ಚನ್ನಬಸವ ಗೊರೇಬಾಳ ಹೇಳಿದರು.
ಜೈ ಹಿಂದ್ ಉಚಿತ ಆಹಾರ ಕೇಂದ್ರದ ಸೇವಾ ಕಾರ್ಯಕ್ಕೆೆ ಎರಡು ವರ್ಷ ಪೂರೈಸಿದ ಹಿನ್ನೆೆಲೆಯಲ್ಲಿ ನಗರದ ಪಿಡಬ್ಲ್ಯೂಡಿ ಕ್ಯಾಾಂಪಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆೆ ಆವರಣದಲ್ಲಿ ಶನಿವಾರ ರಾತ್ರಿಿ ಹಮ್ಮಿಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿರಂತರ ಎರಡು ವರ್ಷಗಳ ಕಾಲ ದಾಸೋಹ ಸೇವೆ ಕೈಗೊಳ್ಳುವುದು ಸುಲಭದ ಮಾತಲ್ಲ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಂಕಷ್ಟದ ಪರಿಸ್ಥಿಿತಿಯನ್ನು ಅರಿತು, ಸಾಲಿಡಾರಿಟಿ ಯೂತ್ ಮೂವ್ಮೆೆಂಟ್ನವರ ಮಾನವೀಯತೆ ಹಾಗೂ ಸೇವಾಮನೋಭಾವದಿಂದ ಈ ಕಾರ್ಯ ನಡೆಸುತ್ತಿಿರುವುದು ಇತರೆ ಸಂಘಟನೆಗಳವರಿಗೆ ಮಾದರಿಯಾಗಿದೆ ಎಂದರು.
ಸಾಲಿಡಾರಿಟಿ ಯೂತ್ ಮೂವ್ಮೆೆಂಟ್ನ ಅಧ್ಯಕ್ಷ ಅಬುಲೈಸ್ ನಾಯಕ್ ಮಾತನಾಡಿ, ನಮ್ಮ ಸಂಘಟನೆ ಕಳೆದ 2 ವರ್ಷಗಳಿಂದ ನಿರಂತರವಾಗಿ ಸೇವಾಕಾರ್ಯ ಮಾಡಲು ದಾನಿಗಳು, ಸ್ವಯಂಸೇವಕರು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವರ ಸಹಾಯ, ಸಹಕಾರವಿದೆ ಎಂದು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಜೈ ಹಿಂದ್ ಉಚಿತ ಆಹಾರ ಕೇಂದ್ರದ ಸೇವೆ ಇನ್ನಷ್ಟು ವಿಸ್ತರಿಸಿ, ಹೆಚ್ಚು ಅಗತ್ಯವಿರುವ ಜನರಿಗೆ ತಲುಪಿಸುವ ಉದ್ದೇಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಾಮಿ ಹಿಂದ್ನ ಅಧ್ಯಕ್ಷ ಹುಸೇನ್ಸಾಬ್, ಮಿಲಾಪ್ ಶಾದಿಮಹಲ್ನ ಅಧ್ಯಕ್ಷ ಖಾಜಿ ಜಿಲಾನಿಸಾಬ್, ಮುಖಂಡರಾದ ಮೌಲಾನಾ ತಾಜಿಮುದ್ದೀನ್ ಸಾಬ್, ಬಸವರಾಜ ಬಾದರ್ಲಿ, ಸಿರಾಜ್, ಇಮ್ತಿಿಯಾಜ್ ಬೇಗ್ ಭಾಗವಹಿಸಿದ್ದರು. ಪ್ರಾಾಸ್ತಾಾವಿಕವಾಗಿ ಡಾ.ವಸೀಂ ಅಹ್ಮದ್ ಮಾತನಾಡಿದರು. ತನ್ವೀರ್ ನಿರೂಪಿಸಿದರು. ಇಸ್ಮಾಾಯಿಲ್, ನಯೀಮ್, ಮನ್ಸೂರ್, ಸನಾವುಲ್ಲಾ, ಖಾಜಾ, ಉಮರ್ ಮತ್ತು ಸಾಲಿಡಾರಿಟಿ ಯೂತ್ ಮೂವ್ಮೆೆಂಟ್ನ ಅನೇಕ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಉಪಸ್ಥಿಿತರಿದ್ದರು.
ನಿತ್ಯ ಅನ್ನದಾಸೋಹ ಕಾರ್ಯ ದೇವರಿಗಿಷ್ಟ : ಡಾ.ಚನ್ನಬಸವ

