ಸುದ್ದಿಮೂಲ ವಾರ್ತೆ ಮುದಗಲ್, ಜ.22:
ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ಇದೇ ತಿಂಗಳು 24ರಂದು ಸನಾತನ ಹಿಂದೂ ಧರ್ಮ ಜಾಗೃತಿ ಸಮ್ಮೇಳನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಹಿರಿಯ ವೈದ್ಯರಾದ ಡಾ. ಗುರುರಾಜ ದೇಶಪಾಂಡೆ ಗುರುವಾರ ಪತ್ರಿಿಕೆಗೆ ತಿಳಿಸಿದರು.
ಸ್ಥಳೀಯ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸನಾತನ ಹಿಂದೂ ಧರ್ಮ ವೈಶಿಷ್ಟ್ಯಪೂರ್ಣವಾಗಿದೆ. ಆದರೆ ಇತ್ತೀಚೆಗೆ ಯುವಕರು ಪಾಶ್ಚಾಾತ್ಯ ಶೈಲಿಗಿ ಮಾರು ಹೋಗುತ್ತಿಿರುವುದು ಚಿಂತಾಜನಕ ಸಂಗತಿಯಾಗಿದೆ. ಸನಾತನ ಹಿಂದೂ ಸಂರಕ್ಷಣೆ ಮತ್ತು ಯುವಕರಲ್ಲಿ ದೇಶಪ್ರೇೇಮ ಬೆಳೆಸುವ ನಿಟ್ಟಿಿನಲ್ಲಿ ಇದೇ ತಿಂಗಳು 24ರಂದು ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ನಂದವಾಡಗಿ ಪೂಜ್ಯರಾದ ಅಭಿನವ ಚೆನ್ನಬಸವ ಶಿವಾಚಾರ್ಯರು, ವೀರಭದ್ರೇೇಶ್ವರ ದೇವಸ್ಥಾಾನದ ಅರ್ಚಕ ಸಿದ್ಧಯ್ಯಸ್ವಾಾಮಿ ಸಾಲಿಮಠ, ವಿಶೇಷ ಉಪನ್ಯಾಾಸಕರಾಗಿ ಟಿ. ಪ್ರಸನ್ನಾಾಜಿ ರವರು ಉಪಸ್ಥಿಿತರಿರುತ್ತಾಾರೆ. ಕಾರ್ಯಕ್ರಮಕ್ಕೆೆ ಹೆಚ್ಚಿಿ ನ ಸಂಖ್ಯೆೆಯಲ್ಲಿ ಜನರು ಭಾಗವಹಿಸಿ ಶೋಭೆ ತರುವಂತೆ ಮನವಿ ಮಾಡಿದರು.
ಪುರಸಭೆ ಮಾಜಿ ಸದಸ್ಯ ಗುಂಡಪ್ಪ ಗಂಗಾವತಿ, ಮಲ್ಲಪ್ಪ ಮಾಟೂರು, ಮಹಾಂತೇಶ ಅಕ್ಷತ್ತಿಿ, ರವಿಕುಮಾರ ಕಟ್ಟಿಿಮನಿ ಇದ್ದರು.

