ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.03:
ಜನರ ಆರೋಗ್ಯ ರಕ್ಷಣೆಯೇ ವೈದ್ಯರ ಕರ್ತವ್ಯ ಎಂಬ ನಿಟ್ಟಿಿನಲ್ಲಿ ಬೈಪಾಸ್ ರಸ್ತೆೆ, ಲಿಂಗಸೂಗೂರ ಪಟ್ಟಣದಲ್ಲಿರುವ ಸೋಹನ್ ಕುಮಾರ್ ಹಲ್ಲಿನ ದವಾಖಾನೆ ವತಿಯಿಂದ ‘‘ಜನರು, ಜನರಿಗಾಗಿ, ಜನರಿಗೋಸ್ಕರ ದಂತ ಸುರಕ್ಷಾ ಯೋಜನೆ’’ಯನ್ನು ಜಾರಿಗೆ ತರಲಾಗಿದೆ ಎಂದು ದಂತ ವೈದ್ಯ ಡಾ. ಜಗನ್ನಾಾಥ ತಿಳಿಸಿದರು.
ಪಟ್ಟಣದ ಪತ್ರಿಿಕಾ ಭವನದ ಪತ್ರಿಿಕಾ ಗೋಷ್ಠಿಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಅಂಗಕ್ಕೂರು ಹಾಗೂ ಲಿಂಗಸುಗೂರು ವ್ಯಾಾಪ್ತಿಿಯಲ್ಲಿ ದಂತವೈದ್ಯರಾಗಿ ಸೇವೆ ಸಲ್ಲಿಸುತ್ತಿಿದ್ದು, 2026ರ ಹೊಸ ವರ್ಷದ ಪ್ರಯುಕ್ತ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ದಂತಚಿಕಿತ್ಸೆೆ ಒದಗಿಸುವ ಉದ್ದೇಶದಿಂದ ಕೇವಲ 3999ರೂ. ಪಾವತಿಸಿ ದಂತಸುರಕ್ಷಾ ಕಾರ್ಡ್ ಪಡೆದುಕೊಂಡಲ್ಲಿ, ಸಾಮಾನ್ಯವಾಗಿ ಸಾವಿರಾರು ರೂಪಾಯಿ ವೆಚ್ಚವಾಗುವ ಹಲವು ದಂತಚಿಕಿತ್ಸೆೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ‘‘ಇನ್ನು ಹಲ್ಲುನೋವು ಇದ್ದರೂ ಹಣದ ಕೊರತೆಯಿಂದ ಚಿಕಿತ್ಸೆೆ ಮುಂದೂಡುವ ಪರಿಸ್ಥಿಿತಿ ಇರಬಾರದು. ಸರ್ಕಾರಿ ಆಸ್ಪತ್ರೆೆಗಳಲ್ಲಿಯೂ ಲಭ್ಯವಿಲ್ಲದ ಕೆಲ ಚಿಕಿತ್ಸೆೆಗಳು ಈಯೋಜನೆಯಲ್ಲಿ ಸೇರಿವೆ’’ ‘‘ಈಯೋಜನೆ ಜನರ ಆರೋಗ್ಯದ ಭದ್ರತೆಗೆ ದೊಡ್ಡ ಸಹಾಯವಾಗಲಿದೆ. ಎಲ್ಲರೂ ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು’’ ಎಂದು ಡಾ. ಜಗನ್ನಾಾಥ ಮನವಿ ಮಾಡಿದರು.
ಬಡ ಜನತೆಯ ದಂತ ಚಿಕಿತ್ಸೆಗೆ ಡಾ. ಜಗನ್ನಾಥ ವಿಶೇಷ ಕೊಡುಗೆ

