ಸುದ್ದಿಮೂಲ ವಾರ್ತೆ ರಾಯಚೂರು, ಜ.25:
ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ಹೋಗಲಾಡಿಸಲು ಮತ್ತು ಅವರ ಹಕ್ಕುಗಳ ಬಗ್ಗೆೆ ಜಾಗೃತಿ ಮೂಡಿಸಲು ಕೃಷಿ ವಿವಿ ಕುಲಸಚಿವ ಡಾ. ಜಗಜೀವನ್ ರಾಮ್ ಹೇಳಿದರು.
ಇಂದು ಅಲ್ ಕರಿಂ ಪಿಯು ಕಾಲೇಜ್ ಾರ್ ವಿಮೆನ್ ರಾಯಚೂರು ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಹಾಗೂ ಬೀಳ್ಕೊೊಡುಗೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಸಮಾಜದಲ್ಲಿ ಎದುರಿಸುತ್ತಿಿರುವ ಅಸಮಾನತೆ ಹೋಗಲಾಡಿಸಿ ಸಮಾನ ಶಿಕ್ಷಣ ಮತ್ತು ಅವಕಾಶಗಳನ್ನು ಕಲ್ಪಿಿಸಬೇಕು ಎಂದರು.
ಇಂಜಿನಿಯರ್ ಅಹಮ್ಮದ್ ವಾಜುದ್ದೀನ್ ಸಾಧಿಕ್ ಮಾತನಾಡಿ, ಹೆಣ್ಣೊೊಂದು ಕಲಿತರೆ ಶಾಲೆ ಒಂದು ತೆರೆದಂತೆ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಒಂದು ತಲೆ ಮಾರನ್ನೇ ಬೆಳಗಿಸಬಹುದು ಎಂದು ಹೇಳಿದರು.
ಕಾಲೇಜಿನ ಸಂಘಟನಾ ಕಾರ್ಯದರ್ಶಿ ಮೀರ್ ಮಹಮ್ಮದ್ ಶರ್ೀ ಅನ್ವರ್ ಮಾತನಾಡಿ, ಹೆಣ್ಣು ಮಕ್ಕಳು ಹೊರೆಯಲ್ಲ ಆಶೀರ್ವಾದ ಅವರಿಗೆ ಗಂಡು ಮಕ್ಕಳಷ್ಟೆೆ ಸಮಾನ ಅವಕಾಶಗಳು ಸಿಗಬೇಕು ಅವರಿಗೆ ಸುರಕ್ಷಿತ ಮತ್ತು ಸುಸ್ಥಿಿರ ಸಮಾಜ ನಿರ್ಮಿಸುವುದು ನಮ್ಮ ಜವಾಬ್ದಾಾರಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಉಪಾಧ್ಯಕ್ಷ ಮೊಹಮ್ಮದ್ ಇಕ್ಬಾಾಲ್, ಸರ್ಕಾರವು ಭೇಟಿ ಬಚಾವೋ ಭೇಟಿ ಪಡಾವೋ ಅಂತಹ ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿದೆ ಆದ್ದರಿಂದ ಹೆಣ್ಣು ಮಕ್ಕಳನ್ನು ಗೌರವಿಸಿ ಅವರ ಕನಸುಗಳಿಗೆ ಬೆಂಬಲ ನೀಡಿ ಅವರನ್ನು ದೇಶದ ಶಕ್ತಿಿಯನ್ನಾಾಗಿ ಮಾಡೋಣ ಹೆಣ್ಣು ಮಗು ಹೊರೆಯಲ್ಲ ಆಶೀರ್ವಾದ ಹೆಣ್ಣು ಮಗುವನ್ನು ಉಳಿಸಿ ದೇಶವನ್ನು ಬೆಳೆಸಿ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಾಚಾರ್ಯರಾದ ಶೇಕ್ ನಿಜಾಮುದ್ದೀನ್ ಪಟೇಲ್ ಉಪ ಪ್ರಾಾಚಾರ್ಯ ಕಲಿದ್ ಮೋಹಿದೀನ್, ಶಾಹಿಸ್ತ ಅಮ್ರಿಿನ್ ಉಪನ್ಯಾಾಸಕರು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾಾರ್ಥಿನಿಯರು ಉಪಸ್ಥಿಿತರಿದ್ದರು.

