ಸುದ್ದಿಮೂಲ ವಾರ್ತೆ ಹೊಸಪೇಟೆ (ಹಂಪಿ ಉತ್ಸವ), ೆ.13:
ವಿಜಯನಗರ ಅರಸ ಪ್ರೌೌಢದೇವರಾಯ ಯುದ್ಧ ಹಾಗೂ ಸಾಮ್ರಾಾಜ್ಯ ವಿಸ್ತರಣೆ ಜೊತೆಗೆ ತನ್ನ ಆಸ್ಥಾಾನದಲ್ಲಿ ಸಾಹಿತ್ಯ ಹಾಗೂ ಸಂಗೀತಕ್ಕೂ ಹೆಚ್ಚಿಿನ ಪ್ರಾಾಮುಖ್ಯತೆ ನೀಡಿದ್ದ. ನಾಡಿನ ವೀರಶೈವ ಸಾಹಿತ್ಯದ ಏಳಿಗೆಗೆ ಪ್ರೌೌ ಢದೇವರಾಯನ ಕೊಡುಗೆ ಅಪಾರ ಎಂದು ಲೇಖಕ ಡಾ.ಎಂ.ಎಂ.ಶಿವಪ್ರಕಾಶ್ ಅಭಿಪ್ರಾಾಯ ವ್ಯಕ್ತಪಡಿಸಿದರು.
ಹಂಪಿ ಉತ್ಸವ-2026ರ ಅಂಗವಾಗಿ ಹಂಪಿ ವಿರೂಪಾಕ್ಷ ದೇವಸ್ಥಾಾನದ ವೇದಿಕೆ ಯಲ್ಲಿ ಜರುಗಿದ ವಿಚಾರಗೋಷ್ಠಿಿಯಲ್ಲಿ ಪ್ರೌೌಢದೇವರಾಯನ ಕಾಲದ ಸಾಹಿತ್ಯ ಕುರಿತು ವಿಷಯ ಮಂಡನೆ ಮಾಡಿ ಮಾತನಾಡಿದ ಅವರು ಅರಸ ಪ್ರೌೌಢದೇವರಾಯ ಕವಿ ಚಾಮರಸ ಬರೆದ ಪ್ರಭುಲಿಂಗ ಲೀಲೆ ಗ್ರಂಥವನ್ನು ಆನೆಯ ಮೇಲಿರಿಸಿ ವಿರೂಪಾಕ್ಷ ರಥ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಗೌರವ ಸಮರ್ಪಿಸಿದ್ದನು. ಪ್ರೌೌಢದೇವರಾಯನ ಆಡಳಿತ ಕಾಲವನ್ನು ವೀರಶೈವ ಧಾರ್ಮಿಕ ಸಾಹಿತ್ಯದ ಪುರುತ್ಥಾಾನ ಯುಗ ಎಂದೇ ಪರಿಗಣಿಸಲಾಗಿದೆ. ಮೊದಲ ಹಾಗೂ ಎರಡನೇ ಶೂನ್ಯ ಸಂಪಾದನೆ ಗ್ರಂಥಗಳು, ಸ್ವತಂತ್ರ ಹಾಗೂ ಸ್ವರ ವಚನಗಳು, ತತ್ವ ಪ್ರತಿಪಾ ದನೆ ಗ್ರಂಥಗಳು, ಭೀಮ ಕವಿಯ ಬಸವಪುರಾಣ ಸೇರಿದಂತೆ ಅನೇಕ ಗ್ರಂಥಗಳು ಪ್ರೌೌಢದೇವರಾಯನ ಕಾಲದಲ್ಲಿ ರಚನೆಯಾಗಿವೆ. ದೇಶದ ಇತಿಹಾಸದಲ್ಲಿಯೇ ಗುಪ್ತರ ಕಾಲ ಹೊರತು ಪಡಿಸಿದರೆ, ಅತ್ಯಂತ ಹೆಚ್ಚಿಿನ ಸಮೃದ್ಧ ಸಾಹಿತ್ಯ ರಚನೆ ವಿಜಯನಗರ ಕಾಲದಲ್ಲಿ ಆಗಿದೆ. ಈ ಕಾಲದಲ್ಲಿ 101 ವೀರಶೈವ ವೀರಕ್ತರು ಹಂಪಿ ನೆಲ ದಲ್ಲಿ ಓಡಾಡಿದ್ದರು, ಸಮೃದ್ಧ ಶರಣ ಸಾಹಿತ್ಯ ರಚನೆಯಾಗಿತ್ತು ಎಂದು ಹೇಳಿದರು.
ವಿಜಯನಗರ ಕಾಲದ ಸಂವಹನ ವ್ಯವಸ್ಥೆೆ ಎಂಬ ವಿಷಯದ ಕುರಿತು ವಿಷಯ ಮಂಡಿಸಿದ ಪ್ರಾಾಧ್ಯಾಾಪಕ ಡಾ.ವೆಂಕನಗೌಡ ಪಾಟೀಲ್, ವಿಜಯನಗರ ಸಾಮ್ರಾಾಜ್ಯ ದ ಯಶಸ್ಸಿಿನ ಸಮರ್ಥ ಸಂವಹನ ವ್ಯವಸ್ಥೆೆ ಕಾರಣವಾಗಿತ್ತು. ದಕ್ಷಿಣದ ಕನ್ಯಾಾಕುಮಾರಿಯಿಂದ ಪಶ್ಚಿಿಮದ ಅರಬ್ಬೀ ಸಮುದ್ರ ಹಾಗೂ ಪೂರ್ವದ ಬಂಗಾಳ ಕೊಲ್ಲಿ ಯವರೆಗೆ ವಿಸ್ತರಿಸಿದ್ದ ಬೃಹತ್ ಮತ್ತು ಶಕ್ತಿಿಶಾಲಿ ಸಾಮ್ರಾಾಜ್ಯವಾಗಿ ಹೊರಹೊ ಮ್ಮಲು ಅತ್ಯುತ್ತಮ ಸಂವಹನ ವ್ಯವಸ್ಥೆೆಯೇ ಆಧಾರವಾಗಿತ್ತು ಎಂದರು.
ಸಾಮ್ರಾಾಜ್ಯದಾದ್ಯಂತ ಇದ್ದ ಸುಸಜ್ಜಿಿತ ರಸ್ತೆೆ ಸಂಪರ್ಕಗಳು, ಮಾಹಿತಿಯನ್ನು ವೇಗ ವಾಗಿ ರವಾನಿಸಲು ನೇಮಿಸಿದ್ದ ದೂತ ಮತ್ತು ಸಂದೇಶ ವ್ಯವಸ್ಥೆೆ, ವ್ಯಾಾಪಾರ ಮತ್ತು ವಹಿವಾಟು ಸುಗಮವಾಗಿ ನಡೆಯಲು ಪೂರಕವಾಗಿದ್ದ ಸಂವಹನ, ಸಾಮ್ರಾಾಜ್ಯದ ಆಂತರಿಕ ಭದ್ರತೆ ಮತ್ತು ಯುದ್ಧದ ಸಮಯದಲ್ಲಿ ಸೇನಾಪಡೆಗಳ ನಡುವಿನ ಸಂ ವಹನ, ಜನಸಾಮಾನ್ಯರ ನಡುವೆ ಸಂಸ್ಕೃತಿಯ ಪ್ರಸಾರಕ್ಕೆೆ ಇದ್ದ ಮಾಧ್ಯಮಗಳು ಸಾಮ್ರಾಾಜ್ಯ ಸುಗಮ ಆಡಳಿತಕ್ಕೆೆ ಸಹಕಾರಿಯಾಗಿದ್ದವು. ಈ ಸಂವಹನವು ವ್ಯವಸ್ಥಿಿ ತವಾಗಿ ಕಾರ್ಯನಿರ್ವಹಿಸುತ್ತಿಿತ್ತು. ಹಂಪಿಯ ಶಿಲ್ಪಕಲೆ, ಸಾಹಿತ್ಯ ಮತ್ತು ವೈಭವದ ಬಗ್ಗೆೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ. ಆದರೆ, ಇಷ್ಟೊೊಂದು ದೊಡ್ಡ ಸಾಮ್ರಾಾಜ್ಯವನ್ನು ಕಟ್ಟಿಿ ಬೆಳೆಸಲು ಬಳಸಿದ ತಾಂತ್ರಿಿಕ ಮತ್ತು ಆಡಳಿತಾತ್ಮಕ ಸಂವಹನ ಕ್ರಮಗಳ ಬಗ್ಗೆೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದು ಪ್ರಾಾಧ್ಯಾಾಪಕ ಡಾ.ವೆಂಕನಗೌಡ ಪಾಟೀಲ್ ಪ್ರತಿಪಾದಿಸಿದರು.
ವಿಚಾರ ಗೋಷ್ಠಿಿಯಲ್ಲಿ ಮಹಿಳಾ ಚಿಂತಕಿ ಅಕ್ಕನಾಗಮ್ಮ.ಟಿ.ಹೆಚ್.ಎಂ. ವಿಜಯನ ಗರ ಕಾಲದ ಮಹಿಳೆಯರ ಸ್ಥಿಿತಿಗತಿ’ಗಳ ಕುರಿತು ವಿಷಯ ಮಂಡಿಸಿದರು. ಲೇಖಕ ಶರಣಯ್ಯ ಎಸ್. ಹಿರೇಮಠ ಅವರು ಹಂಪಿಯ ಪವಿತ್ರತೆ ಉಳಿಸುವಲ್ಲಿ ಶ್ರೀ ಜಗದ್ಗುರು ಕೊಟ್ಟೂರುಸ್ವಾಾಮಿ ಮಠದ ಕೊಡುಗೆ’ ಕುರಿತು ಪ್ರಬಂಧ ಮಂಡಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಾಲಯದ ಕುಲಪತಿ ಡಾ. ಡಿ. ಪರಮಶಿವಮೂರ್ತಿ ವಿಚಾರಗೋಷ್ಠಿಿ ಉದ್ಘಾಾಟಿಸಿದರು. ಕೊಪ್ಪಳ ವಿಶ್ವವಿದ್ಯಾಾಲಯದ ಕುಲಪತಿ ಡಾ. ಎಸ್. ವಿ.ಹಾಣಿ ಅಧ್ಯಕ್ಷತೆ ವಹಿಸಲಿದ್ದರು. ಸಂಶೋಧಕ ಡಾ. ಜಾಜಿ ದೇವೇಂದ್ರಪ್ಪ ಆಶಯ ನುಡಿಗಳನ್ನಾಾಡಿದರು. ಕನ್ನಡ ಸಾಹಿತ್ಯ ಪರಿಷತ್ನ ಬಳ್ಳಾಾರಿ ಜಿಲ್ಲಾಧ್ಯಕ್ಷ ಡಾ. ನಿಷ್ಠಿಿ ರುದ್ರಪ್ಪ, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಡಾ.ಗುಂಡಿ ಮಾರುತಿ, ಕೊಪ್ಪಳ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲೀಸ್ ಪಾಟೀಲ್ ಉಪಸ್ಥಿಿತರಿದ್ದರು. ಕೆ.ಎಂ. ವೀರೇಶ್, ಹೆಚ್.ಎಂ.ವಿದ್ಯಾಾವತಿ ನಿರೂಪಣೆ ಮಾಡಿದರು.

