ಸುದ್ದಿಮೂಲ ವಾರ್ತೆ ಮಾನ್ವಿ, ಡಿ.05:
ವಿದ್ಯಾಾರ್ಥಿಗಳು ವೈಜ್ಞಾನಿಕ ಅಭ್ಯಾಾಸ ಕ್ರಮ ಅಳವಡಿಸಿಕೊಳ್ಳುವಂತೆ ಸಿರುಗುಪ್ಪದ ಶಸ ವೈದ್ಯ ಡಾ.ಮಧುಸೂದನ್ ಸಲಹೆ ನೀಡಿದರು.
ಶುಕ್ರವಾರ ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕಾ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಮಾಧ್ಯಮ ಸಮಿತಿ, ಸೈಜನಾ ೌಂಡೇಶನ್ – ಭಾರತೀಯ ವೈದ್ಯಕೀಯ ಸಂಘ ಸಿರುಗುಪ್ಪ, ಸಂಯುಕ್ತಾಾಶ್ರಯದಲ್ಲಿ ನಡೆದ ನೆನಪಿಗೆ ವ್ಯಾಾಯಾಮ ಮತ್ತು ಸೋತು ಗೆದ್ದ ಸಾಧಕರಿವರು ಎಂಬ ವಿಷಯದ ಅಡಿ ವಿದ್ಯಾಾರ್ಥಿಗಳಿಗೆ ಹಮ್ಮಿಿಕೊಂಡಿದ್ದ ಪ್ರೇೇರಣಾ ತರಗತಿಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಾಸ ನೀಡಿ ಮಾತನಾಡುತ್ತಿಿದ್ದರು
ತರಗತಿಯ ಎಲ್ಲಾ ವಿದ್ಯಾಾರ್ಥಿಗಳಿಗೆ ಶೇ. 80 ರಷ್ಟು ಅಂಕ ಪಡೆಯುವ ಸಾಮರ್ಥ್ಯ ಇದ್ದರೂ ಅವರು ಸರಿಯಾದ ರೀತಿಯಲ್ಲಿ ಓದುವ ಅಭ್ಯಾಾಸವನ್ನು ರೂಢಿಸಿಕೊಳ್ಳದೆ ಇರುವುದರಿಂದ ಕಡಿಮೆ ಅಂಕ ಪಡೆಯುತ್ತಿಿದ್ದಾರೆ. ಪ್ರತಿ ಅಭ್ಯಾಾಸದ ನಡುವೆ ವಿಶ್ರಾಾಂತಿಯನ್ನು ಪಡೆದು ಕೆಲವು ಚಟುವಟಿಕೆಗಳನ್ನು ನಡೆಸುವುದರಿಂದ ನಾವು ಅಭ್ಯಾಾಸ ನಡೆಸಿದ ವಿಷಯಗಳು ನೆನಪಿನಲ್ಲಿ ಉಳಿಯುವುದಕ್ಕೆೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಕ್ಷೇತ್ರದ ಅಭಿವೃದ್ದಿಯ ಜೊತೆಗೆ ನಾಡಿನ ನೆಲ, ಜಲ, ಭಾಷೆ, ರಕ್ಷಣೆಗಾಗಿ ನಿರಂತರ ಹೋರಾಟ ಮಾಡುತ್ತಾಾ ಬಂದಿದೆ ಎಂದರು.
ಹಾಸ್ಯ ಕಲಾವಿದ ನರಸಿಂಹ ಮೂರ್ತಿ ಹಾಸ್ಯ ಪ್ರಸಂಗಗಳ ಮೂಲಕ ವಿದ್ಯಾಾರ್ಥಿಗಳನ್ನು ನಗೆಗಡಲಿನಲ್ಲಿ ತೇಲಿಸಿದರು. ಬಳ್ಳಾಾರಿಯ ವಿಜ್ಞಾನ ಶಿಕ್ಷಕ ಎಸ್.ಎಂ.ಹಿರೇಮಠ ವಿಜ್ಞಾನ ಗೀತೆಗಳನ್ನು ಹಾಡಿದರು. ಪಕ್ಷಿ ಪ್ರೇೇಮಿ ಸಲ್ಲಾವುದ್ದೀನ್ ಪಕ್ಷಿಗಳ ಕುರಿತು ವಿದ್ಯಾಾರ್ಥಿಗಳಿಗೆ ವಿಶೇಷ ಉಪನ್ಯಾಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಪಿ.ಎಸ್.ವಿ.ಎಸ್.ಅಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆೆಯ ಪ್ರಾಾಚಾರ್ಯ ಡಾ.ಜೀವನೇಶ್ವರಯ್ಯ, ನೇತಾಜಿ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಕೆ.ಈ.ನರಸಿಂಹ, ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ತಾಲೂಕಾ ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿಿ, ಕೆ.ರವಿವರ್ಮ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಅರುಣ್ ಚಂದಾ, ಮಾಧ್ಯಮ ಸಮಿತಿ ಅಧ್ಯಕ್ಷ ರಾಜಶೇಖರಸ್ವಾಾಮಿ, ಎಂ.ಬಿ.ಸಿದ್ರಾಾಮಯ್ಯಸ್ವಾಾಮಿ, ಕಿಡಿಗಣ್ಣಯ್ಯಸ್ವಾಾಮಿ, ಚನ್ನಬಸವಸ್ವಾಾಮಿ ಉಪಸ್ಥಿಿತರಿದ್ದರು.
ವಿದ್ಯಾರ್ಥಿಗಳು ವೈಜ್ಞಾನಿಕ ಅಭ್ಯಾಸ ಕ್ರಮ ಅಳವಡಿಸಿಕೊಳ್ಳಲು ಡಾ.ಮಧುಸೂದನ್ ಸಲಹೆ

