ಸುದ್ದಿಮೂಲ ವಾರ್ತೆ ಸಿಂಧನೂರು, ಜ.13:
ಪಾಕಿಸ್ತಾಾನದ ಕಾಗೆ ಭಾರತಕ್ಕೆೆ ಬಂತು.. ಎಂಬ ಕಥನದಲ್ಲಿ ಮನುಷ್ಯರು ಗಡಿಗಳನ್ನು ಮೀರಿ ಬದುಕುವ ಅಗತ್ಯತೆಯ ಕುರಿತು ಕವಿ ಅಭಿವ್ಯಕ್ತಿಿಸುತ್ತಾಾರೆ. ಇಂದಿನ ದೇಶಪ್ರೇೇಮ ಕಲಕಬೇಕೆ ವಿನಹ ಕೆರಳಿಸಬಾರದು ಎಂದು ಸಾಹಿತಿ, ಗಜಲ್ ಕವಿ ಡಾ.ಶರ್ೀ ಹಸಮಕಲ್ ಅಭಿಪ್ರಾಾಯಪಟ್ಟರು.
ನಗರದ ನೋಬಲ್ ಪದವಿ ಮಹಾವಿದ್ಯಾಾಲಯದಲ್ಲಿ ಹಮ್ಮಿಿಕೊಂಡಿದ್ದ ಡಾ. ಮಲ್ಲಿಕಾರ್ಜುನ ಕಮತಗಿ ಅವರ ಕೃತಿ ‘ಜವಾರಿ ಜರ್ನಿ ’ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ವೋದಯದ ಆಶಯ ಹೊಂದಿದ ಕೃತಿಯು ಜನಮನ ಗೆಲ್ಲುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ದೇವರು, ಧರ್ಮ, ಜಾತಿ, ವರ್ಗ, ವರ್ಣ, ಆಹಾರ ಸಂಸ್ಕೃತಿಯನ್ನು ವ್ಯಾಾಖ್ಯಾಾನಿಸಿ ನಿರೂಪಿಸುವಲ್ಲಿಯೂ ಕೋಮು ಸಂಘರ್ಷ ಬಿತ್ತುವ ಮನಸ್ಸುಗಳು ಎದ್ದು ಕಾಣುತ್ತಿಿವೆ. ಇಂತಹ ಸಂದರ್ಭದಲ್ಲಿ ಕವಿ ಕಮತಗಿ ಯವರು ಕವಿ ತಮ್ಮ ಜವಾರಿ ಜರ್ನಿ ಅನುಭವದ ಬುತ್ತಿಿಯಲ್ಲಿ ಒಂದಿಷ್ಟು ನಗೆ ಒಂದಿಷ್ಟು ನಗ್ನ ಎಂಬ ಅಡಿಬರಹ ಇಟ್ಟಿಿದ್ದಾಾರೆ. ಇಲ್ಲಿ ನಗ್ನ ಎಂದರೆ ಕೇವಲ ಬಟ್ಟೆೆ ಬಿಚ್ಚೋೋದು ಮಾತ್ರವಲ್ಲ. ಪ್ರತಿಯೊಬ್ಬನ ಮನಸ್ಸಿಿನ ಮೋಹ ಕಳೆದುಕೊಳ್ಳುವುದು. ಆ ಮೂಲಕ ಸಂಬಂಧಗಳನ್ನು ಗಟ್ಟಿಿಗೊಳಿಸುವಿಕೆಯ ಕುರಿತು ಓದುಗರನ್ನು ಗೆಲ್ಲುತ್ತಾಾರೆ ಎಂದರು.
ತಾಯಿ ಮಗುವನ್ನು ಪೋಷಿಸುವುದು ಲೋಕದ ರೂಢಿ. ಆದರೆ ಮಗುವೇ ತಾಯಿಯನ್ನು ಪೋಷಿಸುವ ಜವಾಬ್ದಾಾರಿ. ಹಸಿವಿನ ಸಂವೇದನೆ ಕವಿ ಮಾನವೀಯತೆ ನೆಲೆಯಲ್ಲಿ ಚಿತ್ರಿಿಸಿದ್ದಾಾರೆ. ಜವಾರಿ ಜರ್ನಿ ಅನುಭವ ಕಥನಗಳಲ್ಲಿ ಬದುಕಿನ ಹತಾಶೆ, ನೋವು, ನಲಿವು, ಹಾಸ್ಯ, ಕಾರುಣ್ಯ ಎಲ್ಲವನ್ನೂ ಒಳಗೊಂಡಿದೆ ಎಂದು ಅಭಿಪ್ರಾಾಯಪಟ್ಟರು.
ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊೊ.ಸಿ.ಬಿ ಚಿಲ್ಕರಾಗಿ ಉದ್ಘಾಾಟಿಸಿದರು. ಡಾ.ಸಿದ್ದಯ್ಯ ಪುರಾಣಿಕ ಟ್ರಸ್ಟಿಿನ ಅಧ್ಯಕ್ಷ, ಮತ್ತು ಪಠ್ಯಪುಸ್ತಕ ಸಂಸ್ಥೆೆಯ ರಚನಾ ಸಭೆಯ ಸದಸ್ಯ ಅಜ್ಮೀರ್ ನಂದಾಪುರ ಕೃತಿ ಲೋಕಾರ್ಪಣೆ ಮಾಡಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಮಾತನಾಡಿದರು. ಲೇಖಕರ ತಂದೆ ಹೊಳೆಯಪ್ಪ ಕಮತಗಿ, ಸುರಪುರ ಕನ್ನಡ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ, ಜಾಲಹಳ್ಳಿಿಯ ಕೋಲ್ಕಾಾರ ್ಯಾಮಿಲಿ ಟ್ರಸ್ಟ್ ಪ್ರಕಾಶಕ, ರಾಘವೇಂದ್ರ ಕೋಲ್ಕಾಾರ ಉಪಸ್ಥಿಿತರಿದ್ದರು.
ಡಾ ಅರುಣ ಕುಮಾರ್ ಬೇರ್ಗಿ ಪ್ರಾಾಸ್ತಾಾವಿಕ ಮಾತನಾಡಿದರು. ಕವಿ ಡಾ. ಮಲ್ಲಿಕಾರ್ಜುನ ಕಮತಗಿ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾಾರ್ಥಿನಿ ಅಕ್ಕಮಹಾದೇವಿ ಪ್ರಾಾರ್ಥಿಸಿದರು. ಉಪನ್ಯಾಾಸಕ ರಾಮಣ್ಣ ಹಿರೇಬೇರ್ಗಿ ಸ್ವಾಾಗತಿಸಿದರು. ಉಪನ್ಯಾಾಸಕ ಬಸವರಾಜ್ ಚಿಗರಿ ವಂದಿಸಿದರು. ಉಪನ್ಯಾಾಸಕ ಈಶ್ವರ ಹಲಗಿ ನಿರೂಪಿಸಿದರು.
ಡಾ.ಮಲ್ಲಿಕಾರ್ಜುನ ಕಮತಗಿ ಅವರ ಕೃತಿ ಜವಾರಿ ಜರ್ನಿ ಲೋಕಾರ್ಪಣೆ ಪಾಕ್ನ ಕಾಗೆ ಭಾರತಕ್ಕೆ ಬಂತು.. ಗಡಿ ಮೀರಿದ ಬದುಕು – ಹಸಮಕಲ್

