ಸುದ್ದಿಮೂಲ ವಾರ್ತೆ ಬೆಂಗಳೂರು, ಅ.05:
ಕನ್ನಡ ಖ್ಯಾಾತ ಕತೆಗಾರ ಡಾ. ಮೊಗಳ್ಳಿಿ ಗಣೇಶ್ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಾಗಿತ್ತು.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿಿದ್ದ ಡಾ. ಮೊಗಳ್ಳಿಿ ಗಣೇಶ್ ಅವರನ್ನು ಚಿಕಿತ್ಸೆೆಗೆ ಆಸ್ಪತ್ರೆೆಗೆ ದಾಖಲಿಸಲಾಗಿತ್ತು ಚಿಕಿತ್ಸೆೆ ಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರು ಪತ್ನಿಿ, ಮೂವರು ಪುತ್ರಿಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಗಣೇಶ್ 1963ರ ಜುಲೈ 1ರಂದು ಚನ್ನಪಟ್ಟಣ ತಾಲೂಕಿನ ಸಂತೇಮೊಗೇನಹಳ್ಳಿಿಯಲ್ಲಿ ಜನಿಸಿದರು. ಗಣೇಶ್, ಕನ್ನಡದ ಪ್ರಮುಖ ಕಥೆಗಾರ, ಪ್ರಬಂಧಕಾರ, ಕಾದಂಬರಿಕಾರ ಹಾಗೂ ವೈಚಾರಿಕ ಚಿಂತಕರಾಗಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾಾಲಯ ಜನಪದ ಅಧ್ಯಯನ ವಿಭಾಗದಲ್ಲಿ ಪ್ರಾಾಧ್ಯಾಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಬುಗುರಿ, ಮಣ್ಣು, ಅತ್ತೆೆ, ಭೂಮಿ, ಡಾ. ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ ಸೇರಿದಂತೆ ಹಲವು ಕಥಾ ಸಂಕಲನಗಳು, ಕಾದಂಬರಿಗಳು, ಪ್ರಬಂಧಗಳು, ವಿಮರ್ಶಾ ಕೃತಿಗಳನ್ನು ಅವರು ರಚಿಸಿದ್ದಾರೆ.
ಡಾ. ಮೊಗಳ್ಳಿಿ ಗಣೇಶ್ ಅವರಿಗೆ ಡಾ. ಬೆಸಗರಹಳ್ಳಿಿ ರಾಮಣ್ಣ ಪ್ರಶಸ್ತಿಿ, ಮಾಸ್ತಿಿ ಕಥಾ ಪ್ರಶಸ್ತಿಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಿ ಸೇರಿದಂತೆ ಹಲವು ಪ್ರಶಸ್ತಿಿಗಳು ಸಂದಿವೆ.
ಕನ್ನಡದ ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ ಮತ್ತು ದಲಿತ ಕಾವ್ಯ ಚಳವಳಿಯ ಪ್ರಮುಖ ಧ್ವನಿಯಾಗಿದ್ದ ಡಾ. ಮೊಗಳ್ಳಿಿ ಗಣೇಶ್ ನಿಧನದಿಂದ ಕನ್ನಡದ ಪ್ರಗತಿಪರ ಸಾಹಿತ್ಯ ಲೋಕವು ತನ್ನ ಅತ್ಯಂತ ಪ್ರಭಾವಿ ಧ್ವನಿಯನ್ನು ಕಳೆದುಕೊಂಡಂತಾಗಿದೆ.
ಮೊಗಳ್ಳಿಿ ಗಣೇಶ್ ನಿಧನ ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಆಘಾತವನ್ನುಂಟುಮಾಡಿದ್ದು, ಅನೇಕ ಸಾಹಿತಿಗಳು ಮತ್ತು ಓದುಗರು ಶೋಕ ವ್ಯಕ್ತಪಡಿಸಿದ್ದಾರೆ.
ಹಳ್ಳಿಿಯ ಸರಳ ಜೀವನದ ಅನುಭವಗಳು ಅವರ ಸಾಹಿತ್ಯದಲ್ಲಿ ಮಣ್ಣಿಿನ ವಾಸನೆಯನ್ನು ತುಂಬಿದವು. ಪ್ರಾಾಥಮಿಕ ಶಿಕ್ಷಣವನ್ನು ಹಳ್ಳಿಿಯಲ್ಲೇ ಪಡೆದ ಅವರು, ಮೈಸೂರು ವಿಶ್ವವಿದ್ಯಾಾಲಯದಲ್ಲಿ ಪದವಿ ಮತ್ತು ಸ್ನಾಾತಕೋತ್ತರ ಪದವಿ ಪೂರೈಸಿದರು. ನಂತರ ಜಾನಪದ ಅಧ್ಯಯನದಲ್ಲಿ ಡಾಕ್ಟರೇಟ್ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಾಲಯದಲ್ಲಿ ಪ್ರಾಾಧ್ಯಾಾಪಕರಾಗಿ ಸೇರಿ, ಕೊನೆಗೆ ವಿಭಾಗದ ಮುಖ್ಯಸ್ಥರಾದರು. ಅವರ ಸಂಶೋಧನಾ ಕೃತಿ ಆದಿಮ’ ಜಾನಪದ ಚಿಂತನೆಯಲ್ಲಿ ಮಹತ್ವದ ಕೊಡುಗೆಯಾಗಿದೆ.
ಬುಗುರಿ’ ಕಥೆಯಲ್ಲಿ ಬಾಲಕನ ಮನಸ್ಥಿಿತಿ ಮತ್ತು ಕ್ರೂರ ಪ್ರಪಂಚದ ಆಘಾತವನ್ನು ಅಪೂರ್ವವಾಗಿ ಚಿತ್ರಿಿಸಿದ್ದಾರೆ. ಭತ್ತ’ ಕಥೆಯು ಹಸಿವು, ಅವಮಾನ ಮತ್ತು ದಸಂಸ ಹೋರಾಟದ ಹಿನ್ನೆೆಲೆಯಲ್ಲಿ ಸಾಹಿತ್ಯದ ಮೂಲಕ ಹರಡಿದೆ. ಇದು ಓದುಗರಲ್ಲಿ ಬಾಲ್ಯದ ನೆನಪುಗಳನ್ನು ಉದ್ದೀಪಿಸುವಂತಿದೆ. ಅವರ ಇತರ ಕಥಾ ಸಂಕಲನಗಳಾದ ಮಣ್ಣು’, ಅತ್ತೆೆ’, ಭೂಮಿ’, ಕನ್ನೆೆಮಳೆ’, ದೇವರ ದಾರಿ’ ಮತ್ತು ಮೊಗಳ್ಳಿಿ ಕಥೆಗಳು’ ದೇಸಿ ಜೀವನದ ಸೂಕ್ಷ್ಮತೆಗಳನ್ನು ಬಿಂಬಿಸುತ್ತವೆ. ದೇವರ ದಾರಿ’ಗೆ ಡಾ. ಬೆಸಗರಹಳ್ಳಿಿ ರಾಮಣ್ಣ ಪ್ರಶಸ್ತಿಿ ಲಭಿಸಿತು.
ಕಾವ್ಯ ಕ್ಷೇತ್ರದಲ್ಲಿ ದೇವಸ್ಮಶಾನ’ ಸಂಕಲನ ಮಹತ್ವದ್ದು. ಇದಕ್ಕೆೆ ಪು.ತಿ.ನ. ಕಾವ್ಯ ಪ್ರಶಸ್ತಿಿ ಲಭಿಸಿತು.ಈ ಕೃತಿಯು ಆಧುನಿಕ ಕಾವ್ಯದಲ್ಲಿ ಬೇಂದ್ರೆೆ ಮತ್ತು ಸಿದ್ದಲಿಂಗಯ್ಯ ನಡುವಿನ ಸೂಕ್ಷ್ಮ ಸಂಬಂಧವನ್ನು ಇದು ಬಿಚ್ಚಿಿಡುತ್ತದೆ. ಅವರ ಕಾವ್ಯ ಶಕ್ತಿಿ ಗದ್ಯದಲ್ಲಿ ವಿಸ್ತಾಾರಗೊಂಡಿದ್ದು, ಕನ್ನಡಕ್ಕೆೆ ಹೊಸ ಕಾವ್ಯ ಲೋಕ ಸೃಷ್ಟಿಿಸಬಹುದಿತ್ತು ಎಂದು ಸಾಹಿತ್ಯ ಪ್ರೇೇಮಿಗಳು ಅಭಿಪ್ರಾಾಯಪಡುತ್ತಾಾರೆ.
ದಲಿತ ಕಾವ್ಯ ಮತ್ತು ಸಾಹಿತ್ಯಕ್ಕೆೆ ಅವರ ಕೊಡುಗೆ ಅಪಾರ. ಸಾಮಾಜಿಕ ಕೋಪ’ ಶಾಲೆಯ ಪ್ರತಿನಿಧಿಯಾಗಿ, ದಲಿತರ ದೌರ್ಜನ್ಯ ಮತ್ತು ಜಾಗತೀಕರಣದ ಪ್ರಭಾವಗಳನ್ನು ಕಾವ್ಯಾಾತ್ಮಕವಾಗಿ ವ್ಯಕ್ತಪಡಿಸಿದರು. ವೈಚಾರಿಕ ವಿಮರ್ಶೆಯಲ್ಲಿ ದಲಿತರು ಮತ್ತು ಜಾಗತೀಕರಣ’ (1998) ಮತ್ತು ತಕರಾರು’ ಕೃತಿಗಳು ಮಹತ್ವದ್ದು. ತಕರಾರು’ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಿ ಲಭಿಸಿತು. ಇದು ಬ್ರಾಾಹ್ಮಣ್ಯದ ವಿಮರ್ಶೆಯಾಗಿ, ಗೋವಿನ ಹಾಡು’ ಲೇಖನದ ಮೂಲಕ ಹಸು ಮತ್ತು ಹುಲಿಯ ರೂಪಕಗಳ ಮೂಲಕ ಸಾಮಾಜಿಕ ಅಸಮಾನತೆಯನ್ನು ಬಯಲುಮಾಡಿತು.
ನಾನೆಂಬುದು ಕಿಂಚಿತ್ತು’ ಆತ್ಮಕಥನದಲ್ಲಿ ದಲಿತ ಅನುಭವಗಳನ್ನು ಸಮಾಜ ವಿಮರ್ಶೆಯೊಂದಿಗೆ ಜೋಡಿಸಿ, ದಲಿತ ಚಳವಳಿಯನ್ನು ಬಲಪಡಿಸಿದರು. ಅವರ ಕೃತಿ ಜಾನಪದ ಚಿಂತನೆಯಲ್ಲಿ ಕನ್ನಡ ಜಾನಪದದ ದಿಕ್ಕನ್ನೇ ಬದಲಾಯಿಸಿದೆ. ದಲಿತ ಅನುಭವಗಳನ್ನು ದಿಗ್ಭ್ರಮೆ ಹುಟ್ಟಿಿಸುವಂತೆ ಚಿತ್ರಿಿಸಿದೆ. ಲಂಕೇಶ್ ಪತ್ರಿಿಕೆಯಲ್ಲಿ ಬರೆದ ವಿಮರ್ಶೆಗಳು ಮತ್ತು ಕಥೆಗಳು ಅವರನ್ನು ಪ್ರಸಿದ್ಧಿಿಗೆ ತಂದವು.
ಡಾ. ಮೊಗಳ್ಳಿಿ ಗಣೇಶ್ ಅವರ ನಿಧನ ಕನ್ನಡ ಸಾಹಿತ್ಯಕ್ಕೆೆ ತುಂಬಲಾರದ ನಷ್ಟ. ಅವರ ಕೃತಿಗಳು ದಲಿತ ಅಸ್ಮಿಿತೆ, ಸಾಮಾಜಿಕ ನ್ಯಾಾಯ ಮತ್ತು ದೇಸಿ ಚಿಂತನೆಯನ್ನು ಶಾಶ್ವತಗೊಳಿಸುತ್ತವೆ. ಸಾಹಿತ್ಯ ಅಕಾಡಮಿ ಪ್ರಶಸ್ತಿಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.
ಸಚಿವ ಶಿವರಾಜ್ ತಂಗಡಗಿ ಸಂತಾಪ
ಕನ್ನಡ ಸಾಹಿತ್ಯಕ್ಕೆೆ ಮೊಗಳ್ಳಿಿ ಗಣೇಶ ಅವರ ಕೊಡುಗೆ ಗಮನಾರ್ಹ. ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ಸೂರ್ಯನನ್ನು ಬಚ್ಚಿಿಡಬಹುದೆ’ ಮತ್ತು ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸಂತಾಪ ಸೂಚಿಸಿದ್ದಾರೆ.
ಮೊಗಳ್ಳಿಿ ಗಣೇಶ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರನನ್ನು ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಕನ್ನಡದ ಬಹುಮುಖ್ಯ ಕಥೆಗಾರರಾದ ಡಾ.ಮೊಗಳ್ಳಿಿ ಗಣೇಶ್ ಅವರು ಇಂದು ನಮ್ಮನ್ನು ಅಗಲಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು. ಇವರ ಅಗಲಿಕೆಯು ಕನ್ನಡ ಸಾಹಿತ್ಯ ಲೋಕಕ್ಕೆೆ ಇದು ಬಹುದೊಡ್ಡ ನಷ್ಟವಾಗಿದ್ದು ಈ ವೇಳೆ ಸಾಹಿತ್ಯ ಕ್ಷೇತ್ರಕ್ಕೆೆ ಅವರ ಕೊಡುಗೆಯನ್ನು ನೆನೆಯುವೆನು ಎಂದು ಸಚಿವ ಡಾ. ಮಹದೇವಪ್ಪ ಶೋಕ ವ್ಯಕ್ತಪಡಿಸಿದ್ದಾರೆ.

