ಸುದ್ದಿಮೂಲ ವಾರ್ತೆ ರಾಯಚೂರು, ಡಿ.02:
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಡಿಸೆಂಬರ್ 3ರಂದು ಬೆಳಿಗ್ಗೆೆ 11ಕ್ಕೆೆ ಜಿಲ್ಲೆಯ ಲಿಂಗಸುಗೂರು ನಗರಕ್ಕೆೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವರು.
ಮಧ್ಯಾಾಹ್ನ 2 ಗಂಟೆಗೆ ಹಟ್ಟಿಿ ಚಿನ್ನದ ಗಣಿ ಪ್ರದೇಶಕ್ಕೆೆ ಆಗಮಿಸಿ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ನಡೆಸುವರು. ಸಂಜೆ 4 ಗಂಟೆಗೆ ಲಿಂಗಸಗೂರು ಪೊಲೀಸ್ ಠಾಣೆಗೆ ಭೇಟಿ ನೀಡುವರು. ಬಳಿಕ ಲಿಂಗಸುಗೂರಿನ ಸಮಾಜ ಕಲ್ಯಾಾಣ ಇಲಾಖೆಯ ಪದವಿ ಮಟ್ಟದ ಬಾಲಕಿಯರ ವಸತಿ ನಿಲಯಕ್ಕೆೆ ಭೇಟಿ ನೀಡುವರು.

