ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಡಿ.04:
ಮಹಿಳೆ ಈ ನೆಲದ ಸಾಕಾರಮೂರ್ತಿಯಾಗಿ ಕುಟುಂಭದ ಸಲುವಾಗಿ ಹಗಲಿರುಳು ದುಡಿಯುತ್ತಾಾಳೆ. ಆದರೆ ಅಂತಹ ಮಹಿಳೆಗೆ ತೊಂದರೆ ಎದುರಾಗಿ ಹಕ್ಕುಗಳಿಗೆ ಚ್ಯುತಿಯಾದಾಗ ಡಾ. ಅಂಬೇಡ್ಕರ ಅವರು ಸಂವಿಧಾನದಲ್ಲಿ ನೀಡಿದ ಮಹಿಳೆಯರ ಕಾನೂನು ಬಳಸಲು ಮುಂದಾಗಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದ್ರಿಿ ಹೇಳಿದರು.
ಅವರು ಪುರಸಭೆ ವ್ಯಾಾಪ್ತಿಿಯ ಕಸಬಾ ಲಿಂಗಸಗೂರು ಗ್ರಾಾಮದ ಕುಪ್ಪಿಿಭೀಮ ದೇವರ ಜಾತ್ರಾಾ ಮಹೋತ್ಸವ ನಿಮಿತ್ಯ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು ಗಂಡಸರ ದುಶ್ಚಟಗಳಿಂದ ಅನೇಕ ಮನೆಗಳು ಒಡೆದು ಹೋಗಿವೆ. ಮಹಿಳೆಯರು ಮಕ್ಕಳು ಬೀದಿಪಾಲಾಗಿದ್ದಾಾರೆ. ಮಹಿಳೆಯರು ಬಹಳಷ್ಟು ತಾಳ್ಮೆೆ ಉಳ್ಳವರು ಸಂಕಷ್ಟ ಎದುರಾದಾಗ ಹೇಳುತ್ತಾಾರೆ ಕೇಳುತ್ತಾಾರೆ. ಆದರೆ ಸಹನೆ ಮೀರಿದಾಗ ಅವರು ಕಾನೂನು ಸಂಘರ್ಷಕ್ಕೆೆ ಮುಂದಾಗ ಬೇಕಾಗುತ್ತದೆ. ಯಾವುದೇ ಮನೆಯಲ್ಲಿ ಮಹಿಳೆ ದೌರ್ಜನ್ಯಕ್ಕೆೆ ಒಳಗಾದ ವೇಳೆ ದೌರ್ಜನ್ಯ ಕಾಯ್ದೆೆ ಅಡಿ ಪೊಲೀಸ್ ಠಾಣೆ ಮೆಟ್ಟಿಿಲೇರಬೇಕು, ಮಹಿಳೆಯರಿಗೆ ಪೊಲೀಸ್ ಠಾಣೆ ತವರು ಮನೆ ಇದ್ದಂತೆ ಠಾಣೆ ಮೆಟ್ಟಿಿಲೇರಿದರೆ ಯಾವುದೇ ಪಾಪ ಬರುವುದಿಲ್ಲ ಆರಕ್ಷಕರು ನಮ್ಮ ರಕ್ಷಣೆ ಹೊಣೆ ಹೊತ್ತವರು 112ಕ್ಕೆೆ ಕರೆ ಮಾಡಿದರೆ 10 ನಿಮಿಷದಲ್ಲಿ ಪೊಲೀಸರು ನಿಮ್ಮ ಬಳಿ ಬರುತ್ತಾಾರೆ. ಸರಕಾರ ಅಂದರೆ ಅಪ್ಪ ಅಮ್ಮ ನೀವು ಸರಕಾರದ ಸೌಲಭ್ಯ ಪಡೆಯಬೇಕು, ತಂದೆ ಇರದ ಅಬಲೆ ಮಹಿಳೆಯ ಮಕ್ಕಳ ನೆರವಿಗೆ ಸರಕಾರ ಪೋಷಕತ್ವ ಯೋಜನೆಯಡಿ 18ವರ್ಷದವರೆಗೆ 4ಸಾವಿರ ರೂ ಪ್ರತಿ ತಿಂಗಳು ವಿದ್ಯಾಾರ್ಜನೆಗೆ ಅವರ ಖಾತೆಗೆ ನೀಡಲಾಗುತ್ತಿಿದೆ ಇಂತಹ ಮಹಿಳಾ ಸಬಲಿಕರಣದ ಸದುಪಯೋಗ ಪಡೆಯಬೇಕೆಂದರು.
ದೇವರು ಧರ್ಮ ಎಂದರೆ ಮಾನವೀಯತೆ ಕರುಣೆ ಪ್ರೀೀತಿ ಎಂದರ್ಥ ಹೆಣ್ಣು ಅಭಿವೃದ್ದಿಯ ಸಂಕೇತ ಅದಕ್ಕಾಾಗಿ ಪ್ರತಿ ಮಹಿಳೆಯು ಶಿಕ್ಷಣವಂತರಾಗಬೇಕು ಅಂದಾಗ ಮಾತ್ರ ನಾವು ಕೂಡಾ ಅಂದು ಕೊಂಡದ್ದನ್ನು ಸಾಧಿಸಬಹುದು. ರಾಯಚೂರಲ್ಲಿ ಬಾಲ್ಯ ವಿವಾಹ ನಿಲ್ಲಬೇಕು, ನಿಮ್ಮ ಹೆಣ್ಣು ಮಗುವಿಗೆ ಬಂಗಾರ ಒಡವೆ ಹಣ ಬೇಕಿಲ್ಲ ಶಿಕ್ಷಣ ನೀಡಿ ಮಹಿಳೆಯರು ಮೊಬೈಲ್ನಲ್ಲಿ ಬರುವ ಜಾಲತಾಣದಿಂದ ದೂರವಿರಬೇಕು, ದೇಶದಲ್ಲಿ ಜಾಲತಾಣ ಸಹವಾಸದಿಂದ ಮಹಿಳೆಯರು ನಾಪತ್ತೆೆಯಾಗುತ್ತಿಿರುವುದು ಆತಂಕದ ವಿಚಾರ ಇಂದಿನ ಯುವಕರು ಕುಡಿತ ಗಾಂಜಾ, ಡ್ರಗ್ಸ ಸೇರಿ ದುಶೃಟಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕು, ಬಡವರಿಗೆ, ನಿರ್ಗತಿಕರಿಗೆ ಶೋಷಣೆಗೆ ಒಳಗಾದವರಿಗೆ ನ್ಯಾಾಯ ಒದಗಿಸುವ ನನ್ನ ಕೆಲಸ ದಯವೇ ಧರ್ಮದ ಮೂಲವಯ್ಯ ಎಂಬಂತೆ ಪ್ರತಿಯೋರ್ವರು ಪರೋಪಕಾರ ಜೀವನ ಮಾಡಬೇಕೆಂದರು.
ಉಪನ್ಯಾಾಸಕಿ ಈರಮ್ಮ ಹಿರೇಮಠ ಮಸ್ಕಿಿ ವಿಶೇಷ ಉಪನ್ಯಾಾಸ ನೀಡಿದರು. ಶಾಸಕ ಮಾನಪ್ಪ ವಜ್ಜಲ ಹಾಗೂ ತಹಸೀಲ್ದಾಾರ ಕು. ಸತ್ಯಮ್ಮ ಮಾತನಾಡಿದರು. ಬಿಇಓ ಸುಜಾತ ಹೂನೂರು, ಸಿಡಿಪಿಓ ನಾಗರತ್ನ, ಸೇರಿ ಮಹಿಳಾ ಅಧಿಕಾರಿಗಳು ಮಹಿಳೆಯರಿದ್ದರು. ಸಂತೆಕೆಲ್ಲೂರು ಗುರುಬಸವ ಸ್ವಾಾಮಿಜಿ ಸಾನಿಧ್ಯವಹಿಸಿದ್ದರು. ಮಾಣಿಕೆಶ್ವರಿಮಠದ ನಂದಿಕೇಶ್ವರಿ ಅಮ್ಮನವರು ವೇದಿಕೆಯಲ್ಲಿದ್ದ ಮಹಿಳೆಯರಿಗೆ ಸಾಂಕೇತಿಕವಾಗಿ ಉಡಿ ತುಂಬಿದರು. ವೇದಿಕೆಯಲ್ಲಿ ಸಜ್ಜಲಗುಡ್ಡದ ದೊಡ್ಡಬಸವಾರ್ಯ ಶರಣರು, ಶಿವಕುಮಾರ ಶ್ರೀಗಳು, ಬಸವಪ್ರಸಾದ ಶರಣರು ಮುಖಂಡ ಸಿದ್ದು ಬಂಡಿ ಸೇರಿದಂತೆ ಗಣ್ಯರು ಉಪಸ್ಥೀತರಿದ್ದರು.
ಮಹಿಳೆಯರು ತೊಂದರೆಯಾದರೆ ಡಾ.ಬಿ.ಆರ್ಅಂಬೇಡ್ಕರ್ ನೀಡಿದ ಕಾನೂನು ಬಳಸಬೇಕು: ಡಾ. ನಾಗಲಕ್ಷ್ಮಿ ಚೌದ್ರಿ

