ಸುದ್ದಿಮೂಲ ವಾರ್ತೆ ಸಿಂಧನೂರು, ಜ.21:
ತಾಲೂಕಿನ ತುರ್ವಿಹಾಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆೆ ಸಾಮಾನ್ಯ ಕರ್ತವ್ಯ ವೈದ್ಯಾಾಧಿಕಾರಿಯಾಗಿ ಡಾ.ನಲ್ಲಾಾ ಶ್ರೀರಾಮ್ಕುಮಾರ ಅವರನ್ನು ನೇಮಕ ಮಾಡಿ ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಅಧಿಕಾರಿ ಆದೇಶಿಸಿದ್ದಾಾರೆ.
ಜಿಲ್ಲಾಾಧಿಕಾರಿಗಳ ಅನುಮೋದನೆ ಮೇರೆಗೆ ಖಾಲಿ ಇರುವ ಎಂಬಿಬಿಎಸ್ ಹುದ್ದೆೆಗೆ ಗುತ್ತಿಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಎಂಎಸ್ ಜನರಲ್ ಸರ್ಜನ್ ಆಗಿರುವ ಡಾ.ನಲ್ಲಾಾ ಶ್ರೀರಾಮ್ಕುಮಾರ ಧಾರವಾಡದ ಎಸ್ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್, ಸ್ನಾಾತಕೋತ್ತರ ಪದವಿಯನ್ನು ಗುಲ್ಬರ್ಗಾದ ಎಂಆರ್ಎಂಸಿ ವಿದ್ಯಾಾಲಯದಲ್ಲಿ ಪಡೆದಿದ್ದಾಾರೆ. ಡಾ.ಶ್ರೀರಾಮ್ ಅವರು ತುರ್ವಿಹಾಳ ಹತ್ತಿಿರದ ಮಲ್ಲದಗುಡ್ಡ ಗ್ರಾಾಮದವರಾಗಿದ್ದು, ಸ್ಥಳೀಯರಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆೆಗೆ ಬರುವ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎನ್ನುವ ಆಶಾಭಾವನೆ ಮೂಡಿದೆ.
ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಾ.ನಲ್ಲಾ ಶ್ರೀರಾಮ್ಕುಮಾರ ನೇಮಕ

