ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ರದ್ದುಪಡಿಸಲಾದ ಮಹಾತ್ಮಾಾ ಗಾಂಧಿ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆ ಕುರಿತು ಚರ್ಚಿಸಲು ಕರ್ನಾಟಕ ಸರ್ಕಾರ ಕರೆದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೆ ಹೊರನಡೆದ ರಾಜ್ಯಪಾಲ ಥಾವರ ಚಂದ್ ಗೇಹ್ಲೋೋಟ್ ನಡೆ ಜನಪ್ರತಿನಿಧಿಗಳಿಗೆ, ರಾಜ್ಯದ ಜನರಿಗೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಮಾಧ್ಯಮ ವಕ್ತಾಾರ ಡಾ.ರಝಾಕ್ ಉಸ್ತಾಾದ್ ಖಂಡಿಸಿದ್ದಾಾರೆ.
ವಿಕಸಿತ ಭಾರತ ಗ್ಯಾಾರಂಟಿ ರೋಜಗಾರ್ ಅಜೀವಿಕಾ ಮಿಷನ್ (ಗ್ರಾಾಮೀಣ) ಯೋಜನೆ (ಬಿ-ಗ್ರಾಾಮ್ ಜಿ) ಏಕಪಕ್ಷೀಯವಾಗಿ ಜಾರಿಗೊಳಿಸಿರುವುದರ ಬಗ್ಗೆೆ ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸುತ್ತಿಿದೆ. ರಾಜ್ಯಪಾಲರು ಸಂವಿಧಾನದ ಆಶಯದಂತೆ ಜಂಟಿ ಸಧನವನ್ನು ಉದ್ದೇಶಿಸಿ ರಾಜ್ಯ ಸರಕಾರ ನೀಡಿದ ಭಾಷಣ ಓದಬೇಕಿತ್ತು, ಅದನ್ನು ಧಿಕ್ಕರಿಸಿ ಬಿಜೆಪಿ ಪಕ್ಷದ ಏಜೆಂಟ್ ರೀತಿ ವರ್ತಿಸಿ ಕೆಲವು ಸಾಲುಗಳನ್ನು ಓದಿ ಹೊರನಡೆದಿದ್ದು ತಮ್ಮ ಮೇಲಿನ ಸಂವಿಧಾನಿಕ ಹೊಣೆಯನ್ನು ಕಡೆಗಣಿಸಿದ್ದಲ್ಲದೆ, ಸಂವಿಧಾನದ ವಿಧಿ 176 ಹಾಗೂ 163ರಂತೆ ಸರಕಾರ ಸಿದ್ದಪಡಿಸಿದ ಭಾಷಣ ರಾಜ್ಯಪಾಲರು ಓದಲೇಬೇಕೆಂಬ ನಿಯಮ ಉಲ್ಲಂಘಿಸಿದ್ದಾಾರೆ ಎಂದು ದೂರಿದ್ದಾಾರೆ.
ರಾಜ್ಯಪಾಲರು ತಾವೇ ಒಂದು ಸರಕಾರವೆಂದು ಭಾವಿಸಿದ್ದಾಾರೆ.ಇದು ಜನರಿಂದ ಚುನಾಯಿತ ಸರ್ಕಾರ ಎಂಬುದನ್ನು ಅರಿಯಬೇಕು. ರಾಜ್ಯಪಾಲರಿಗೆ ನೀಡಿದ ಭಾಷಣದಲ್ಲಿ ಇತ್ತೀಚಿಗೆ ಮನರೇಗಾ ಕಾಯ್ದೆೆ ರದ್ದುಗೊಳಿಸಿದ ಕೇಂದ್ರ ಸರಕಾರದ ನೀತಿಯ ಬಗ್ಗೆೆ ಹಾಗೂ ಬಿ-ಗ್ರಾಾಮ್ ಜಿ ಯೋಜನೆ ಜಾರಿಗೊಳಿಸಿದ ರೀತಿಯ ಬಗ್ಗೆೆ ವಿರೋಧ ವ್ಯಕ್ತಪಡಿಸಲಾಗಿತ್ತು. ಈ ಭಾಷಣದ ಪ್ರತಿಯನ್ನು ಎಲ್ಲಾಾ ಶಾಸಕರಿಗೆ ನೀಡಲಾಗಿತ್ತು. ಓದದೇ ಎರಡು ಸಾಲುಗಳು ಓದಿ ಹೊರ ನಡೆದು ರಾಜ್ಯಪಾಲರು ಕೇಂದ್ರದ ನಿರ್ಧಾರದಂತೆ ನಡೆದುಕೊಂಡಂತೆ ಕಾಣುತ್ತಿಿದೆ. ರಾಜ್ಯಪಾಲರ ಇಂತಹ ನಡೆಯು ದೇಶದ ಒಕ್ಕೂಟ ವ್ಯವಸ್ಥೆೆಗೆ ಮಾರಕವಾಗಿದೆ ಎಂದು ಆಪಾದಿಸಿದ್ದಾಾರೆ.
ಇತ್ತೀಚಿಗೆ ಕೇಂದ್ರದ ವಿರೋಧ ಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿದ್ದು ತಮಿಳುನಾಡು, ತೆಲಂಗಾಣ, ಕೇರಳ, ಪಶ್ಚಿಿಮ ಬಂಗಾಳ, ಪಂಜಾಬ್ ಹಾಗೂ ಇತರೆ ಸರ್ಕಾರಗಳ ಗುರಿಯಾಗಿಸಿದ್ದು ಕೇಂದ್ರದ ಇಂತಹ ನಡೆಯನ್ನು ಕಾಂಗ್ರೆೆಸ್ ಪಕ್ಷ ಹಾಗೂ ಸಾರ್ವಜನಿಕರು ತೀವ್ರವಾಗಿ ವಿರೋಧಿಸುವುದಾಗಿ ಖಂಡಿಸಿದ್ದಾಾರೆ.
ಸರ್ಕಾರದ ಭಾಷಣ ಓದದೆ ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತನೆ – ಡಾ.ರಝಾಕ್

