ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂನ್ 7 : ನಾರಾಯಣ ನೇತ್ರಾಲಯ ಆಸ್ಪತ್ರೆಗೆ ಡಾ.ರೋಹಿತ್ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಜೂನ್ 1 ರಿಂದ ಡಾ.ರೋಹಿತ್ ಶೆಟ್ಟಿ ಅವರು ಆಸ್ಪತ್ರೆಯ ಅಧ್ಯಕ್ಷ ಸ್ಥಾನವನ್ನು ಮುನ್ನಡೆಸುತ್ತಿದ್ದಾರೆ.
1982 ರಿಂದ ಡಾ.ಕೆ.ಭುಜಂಗಶೆಟ್ಟಿ ಅವರು ನಾರಾಯಣ ನೇತ್ರಾಲಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದರು. ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಸ್ಥಾನವನ್ನು ಡಾ.ರೋಹಿತ್ ಶೆಟ್ಟಿ ತುಂಬಲಿದ್ದು, ನಿರಂತರ ಸೇವೆಯನ್ನು ಮುಂದುವರೆಸುವುದಾಗಿ ಪ್ರಕಟಣೆ ತಿಳಿಸಿದೆ.