ಸುದ್ದಿಮೂಲ ವಾರ್ತೆ
ರಾಯಚೂರು,ಜೂ.11:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ನೀಡಿ ಚಾಲನೆ ನೀಡಿದರು.
ರಾಯಚೂರಿನ ಕೇಂದ್ರೀಯ ಬಸ್ ನಿಲ್ದಾಣದ ಲ್ಲಿ ವಿವಿಧ ತಾಲೂಕು ಕೇಂದ್ರಗಳಿಗೆ ತೆರಳುವ ಬಸ್ ಗಳ ಅಲಂಕಾರ ಮಾಡಿದ್ದು ಆ ಬಸ್ ಗಳಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಚಿವರು ಚಾಲನೆ ನೀಡಿ ಮಾತನಾಡಿದ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ರಾಜ್ಯಾದ್ಯಂತ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣೆಯಲ್ಲಿ ಮಾಡಿದ ವಾಗ್ದಾನದಂತೆ ಆಶೀರ್ವಾದ ಮಾಡಿದರೆ ಐದು ಗ್ಯಾರೆಂಟಿ ಘೋಷಣೆ ಜಾರಿ ಭರವಸೆ ನೀಡಿದ್ದೆವು.
ಈ ಪೈಕಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟೊದ್ದೇವೆ. ಅದರ ಖರ್ಚು ರಾಜ್ಯ ಸರ್ಕಾರ ನಿಗಮ ಕ್ಕೆ ಭರಿಸಲಿದೆ ಎಂದರು.
ಸಾರಿಗೆ ನೌಕರರು ಮಹಿಳೆಯರಿಗೆ ಗೌರವ ಕೊಡಬೇಕು, ಟಿಕೆಟ್ ಇಲ್ಲ ಎಂದು ಅನುಚಿತ ವರ್ತನೆ ಮಾಡಿದರೆ ಶಿಸ್ತು ಕ್ರಮ ವಹಿಸಲಿದ್ದೇವೆ.
ಜುಲೈ ನಿಂದ 10ಕೆಜಿ ಅಕ್ಕಿ, ಆಗಸ್ಟ್ ಉಚಿತ ವಿದ್ಯುತ್ ಪೂರೈಕೆ, ಆಗಸ್ಟ್ ್ರ್ರ್ರ್ಮಮನೆಯ ಯಜಮಾನಿಗೆ 2 ಸಾವಿರ ಗೃಹ ಲಕ್ಷ್ಮಿ ನೀಡುತ್ತೇವೆ. ಕೌಶಲ್ಯಾಭಿವೃದ್ದಿ ಇಲಾಖೆಯಡಿ ಸುಮಾರು 4 ಲಕ್ಷ ವಿದ್ಯಾರ್ಥಿಗಳಿಗೆ 3 ಸಾವಿರ ಯುವ ನಿಧಿ ಅಡಿ ವೇತನ ಸಿಗಲಿದೆ. ಈ ಐದು ಗ್ಯಾರಂಟಿ ಕಾಂಗ್ರೆಸ್ ನೀಡಲಿದೆ.
ರಾಯಚೂರಿಗೆ ಏಮ್ಸ್, ಬೀದರ್ ಗೆ ಐಐಟಿ ನೀಡುವುದು ನಿಶ್ಚಿತ ಎಂದು ಭರವಸೆ ನೀಡಿದರು.
ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಇವತ್ತು ಮಹಿಳೆಯರ ಸಂಭ್ರಮ ದಿನ, ಮಹಿಳೆಯರ ಏಳ್ಗೆಗೆ ಸಿಎಂ, ಡಿಸಿಎಂ ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಶಕ್ತಿ ಯೋಜನೆ ಮೂಲಕ ಜಿಲ್ಲೆಯ ಮತ್ತು ರಾಜ್ಯದೊಳಗೆ ಉಚಿತವಾಗಿ ಸಂಚಾರ ಮಾಡಬಹುದು.
ಏಮ್ಸ್ ಗೆ ವೈದ್ಯಕೀಯ ಸಚಿವರಾಗಿದ್ದು ಅನುಕೂಲ ಆಗಿದೆ. ಅವರು ನಮಗೆ ಬಲ ತರಲಿದ್ದಾರೆ. ನುಡಿದಂತೆ ನಡೆಯುತ್ತಿದ್ದೇವೆ. ಶೇ.೫೦% ರಷ್ಟು ಆಸನ ವ್ಯವಸ್ಥೆ ಇದೆ. ಕಿರಿಕಿರಿ ಮಾಡಬಾರದು.ಉಚಿತ ಎಂದೇಳಿ ಸಿಬ್ಬಂದಿ ನಿರ್ಲಕ್ಷಿಸಿದರೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ಪಾಟೀಲ ಇಟಗಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎ.ವಸಂತಕುಮಾರ್, ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ, ಸಿಇಓ ಶಶಿಧರ ಕುರೇರ್, ವಿಭಾಗಿಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಂ.ಎಸ್., ಕಾಂಗ್ರೆಸ್ ಮುಖಂಡರಾದ ಅಂಬಣ್ಣ, ಶಂಶಾಲಂ, ನಾಗವೇಣಿ ಇತರರಿದ್ದರು.