ಸುದ್ದಿಮೂಲ ವಾರ್ತೆ ರಾಯಚೂರು, ಅ.17
ರಾಯಚೂರು ನಗರದಲ್ಲಿ ನೂರಾರು ವರ್ಷ ವಾಸ ಇದ್ದವರಿಗೆ ಇ-ಖಾತಾ ನೀಡಲು ನೆಪ ಹೇಳಿ ಹೊಸ ಸಮಸ್ಯೆೆ ತಂದೊಡ್ಡಿಿದ್ದು ಸಾರ್ವಜನಿಕರಿಗೆ ಆಗುತ್ತಿಿರುವ ಇತರೆ ಸಮಸ್ಯೆೆಗಳ ಕುರಿತು ಪಾಲಿಕೆಯ ಬಿಜೆಪಿ ಸದಸ್ಯರೊಂದಿಗೆ ತೆರಳಿ ಆಯುಕ್ತರ ಗಮನಕ್ಕೆೆ ತಂದಿದ್ದು ಪರಿಹರಿಸುವ ಭರವಸೆ ನೀಡಿದ್ದಾಾರೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ತಿಳಿಸಿದ್ದಾಾರೆ.
ಇಂದು ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ತಮ್ಮ ನೇತೃತ್ವದಲ್ಲಿ ಸದಸ್ಯರೊಂದಿಗೆ ಆಯುಕ್ತ ಜುಬೀನ್ ಮಹೋಪಾತ್ರ ಅವರ ಭೇಟಿ ಮಾಡಿ ಸಭೆ ನಡೆಸಿದ್ದೇನೆ ಈಗಾಗಲೇ ನಗರದಲ್ಲಿ ಯಾವ ವಾರ್ಡ್ನಲ್ಲಿ ಏನೇನು ತೊಂದರೆ ಇದೆ. ಯಾವ ಸಮಸ್ಯೆೆ ಇದೆ ಎಂಬುದರ ಬಗ್ಗೆೆ ಮಾಹಿತಿ ನೀಡಲಾಗಿದೆ. ಸಮಸ್ಯೆೆ ಬಗೆಹರಿಸದೆ ಹೋದರೆ ಬಿಜೆಪಿಯಿಂದ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದೇನೆ ಎಂದು ಸುದ್ದಿಮೂಲಕ್ಕೆೆ ಮಾಹಿತಿ ನೀಡಿದರು.
ಅಲ್ಲದೆ, ಸಿಯಾತಲಾಬ್, ಕೋಟತಲಾರ್, ಬೇರೂನ್ಕಿಲ್ಲಾಾಘಿ, ಅಂದ್ರೂನ್ ಕಿಲ್ಲಾಾ ಇತರ ಹಳೆಯ ಬಡಾವಣೆಯಲ್ಲಿ ನೂರಾರು ವರ್ಷದಿಂದ ವಾಸ ಇದ್ದ ನಿವಾಸಿಗಳಿಗೆ ಇ-ಬಿ ಖಾತಾ ನೀಡಲು ರಾಜ್ಯದ ಎಲ್ಲೂ ಇಲ್ಲದ ಸಮಸ್ಯೆೆ ತಂದಿಟ್ಟಿಿದ್ದಾಾರೆ. ಹೀಗಾಗಿ, ಅದನ್ನು ಸರಿಪಡಿಸಬೇಕು ಅಲ್ಲದೆ, ಈಗ ಇರುವ 150ಕ್ಕೂ ಅಧಿಕ ಹಳೆಯ ಬಡಾವಣೆಗಳಲ್ಲಿನ ನಿವಾಸಿಗಳಿಗೆ ಖಾತಾ ನೀಡಬೇಕು. ದೂರುಗಳು ಬಂದಿದ್ದರೆ ವಾಸ್ತವವಾಗಿ ತೆರಳಿ ಅಧಿಕಾರಿ, ಸಿಬ್ಬಂದಿಗಳು ಅಕ್ಕ ಪಕ್ಕದ ನಿವಾಸಿಗಳಿಂದ ಮಾಹಿತಿ ಪಡೆದು ಇತ್ಯರ್ಥ ಪಡಿಸಬೇಕು. ಇಲ್ಲ ಸಲ್ಲದ ನೆಪ ಹೇಳಿ ಸಾಗ ಹಾಕುವುದು ಸಹಿಸುವುದಿಲ್ಲ. ತಾಂತ್ರಿಿಕ ಸಮಸ್ಯೆೆಗೆ ಸರ್ಕಾರದ ಗಮನಕ್ಕೂ ತರಲಾಗಿದೆ ಶೀಘ್ರವೆ ಇದಕ್ಕೊೊಂದು ಪರಿಹಾರ ಹುಡುಕುವುದಾಗಿ ಆಯುಕ್ತರು ತಿಳಿಸಿದ್ದಾಾರೆ ಎಂದರು.
ಅಲ್ಲದೆ, ಬೀದಿ ದೀಪಗಳ ನಿರ್ವಹಣೆಯಲ್ಲಾಾಗುತ್ತಿಿರುವ ಲೋಪಗಳ ಕುರಿತು ದೀಪಾವಳಿಯೊಳಗೆ ಮುಖ್ಯ ರಸ್ತೆೆಯಲ್ಲಿ ದೀಪಗಳ ಅಳವಡಿಸಲು ಸೂಚಿಸಲಾಗಿದೆ ಅಲ್ಲದೆ, ಕಸ ವಿಲೆವಾರಿಯ ವಾಹನಗಳಿದ್ದರೂ ಚಾಲಕರ ನೇಮಿಸಿಕೊಂಡಿಲ್ಲ ಇದರಿಂದ ತೊಂದರೆಯಾಗಿದ್ದರ ಬಗ್ಗೆೆಯೂ ಚರ್ಚಿಸಲಾಗಿದೆ. ನೇಮಕಾತಿಗೆ ಪ್ಯಾಾಕೇಜ್ ಟೆಂಡರ್ ಕರೆಯುವ ಭರವಸೆ ನೀಡಲಾಗಿದೆ. ಇನ್ನು ಮುಂದೆ ತಾನು 4-5 ದಿನಕ್ಕೊೊಮ್ಮೆೆ ಸಭೆ ಮಾಡುತ್ತಲೆ ಸಾಗುವೆ ಸಾಮಾನ್ಯ ಜನರಿಗೆ ಆಗುವ ತೊಂದರೆ ಪರಿಹರಿಸುವೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಸುದ್ದಿಮೂಲಕ್ಕೆೆ ತಿಳಿಸಿದರು.