ಸುದ್ದಿಮೂಲ ವಾರ್ತೆ ಸಿಂಧನೂರು, ಜ.01:
ತಾಲೂಕಿನ ವಳಬಳ್ಳಾಾರಿ ವಿರಕ್ತಮಠದ ಡಾ.ಸಿದ್ದಲಿಂಗ ಮಹಾಸ್ವಾಾಮೀಜಿ ಅವರು ಇತ್ತೀಚೆಗೆ ಗೌವರ ಡಾಕ್ಟರೇಟ್ ಪಡೆದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಶ್ರೀಗಳಿಗೆ ಸನ್ಮಾಾನಿಸಿ ಗೌರವಿಸಿ, ಆಶೀರ್ವಾದ ಪಡೆದರು.
ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸಾಧನೆಗೆ ಶ್ರೀಗಳಿಗೆ ಬಳ್ಳಾಾರಿಯ ಕಿಷ್ಕಿಿಂದಾ ವಿಶ್ವವಿದ್ಯಾಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತ್ತು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಾಧಿಕಾರದ ಮಾಜಿ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಪ್ರಾಾಧಿಕಾರದ ಮಾಜಿ ಸದಸ್ಯರಾದ ಜಡಿಯಪ್ಪ, ರೇಣುಕಪ್ಪ ಹಾಗೂ ಇತರರು ಇದ್ದರು.
ಡಾ.ಸಿದ್ದಲಿಂಗ ಮಹಾಸ್ವಾಮಿಗಳಿಗೆ ಬಿಜೆಪಿ ಮುಖಂಡರಿಂದ ಸನ್ಮಾನ

