ಸುದ್ದಿಮೂಲ ವಾರ್ತೆ ಮಾನ್ವಿ, ಜ.17:
26 ಪಂಗಡಗಳನ್ನು ಹೊಂದಿದ ಈಡಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 6 ನೇ ತಾರೀಖಿನಂದು ಚಿತ್ತಾಾಪೂರದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಿ ಪೀಠ ಕರದಾಳನಿಂದ ಬೆಂಗಳೂರುವರೆಗೆ 41 ದಿನಗಳ 700 ಕಿ.ಮೀ ಐತಿಹಾಸಿಕ ಪಾದಯಾತ್ರೆೆ ಹಮ್ಮಿಿಕೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಿ ಪೀಠದ ಪೀಠಾಧಿಪತಿ ಡಾ.ಶ್ರೀ ಪ್ರಣವಾನಂದ ಸ್ವಾಾಮೀಜಿ ತಿಳಿಸಿದರು.
ಶನಿವಾರ ಪಾದಯಾತ್ರೆೆ ಮೂಲಕ ಮಾನ್ವಿಿಗೆ ಆಗಮಿಸಿದ ಅವರು ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿಿದ್ದರು.
700 ಕಿ.ಮೀ 41 ದಿನಗಳ ಪಾದಯಾತ್ರೆೆಯು ೆ.2 ರಂದು ಬೆಂಗಳೂರಿನ ಫ್ರೀೀಡಂ ಪಾರ್ಕಿನಲ್ಲಿ ಸಮಾವೇಶಗೊಳ್ಳುವುದು. ಈ ಸಮಾವೇಶದಲ್ಲಿ ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಿಗಳಿಗೆ ಮನವಿ ಸಲ್ಲಿಸಲಾಗುವುದು. ಪ್ರಮುಖ ಬೇಡಿಕೆಗಳಾದ ನಮ್ಮ ಸಮುದಾಯವನ್ನು ಈಗಿರುವ 2 ಎ ಯಿಂದ ಎಸ್.ಟಿ ಮೀಸಲಾತಿ ನೀಡುವುದಕ್ಕೆೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆೆ ಶಿಾರಸ್ಸು ಮಾಡಬೇಕು, ನಮ್ಮ ಸಮುದಾಯದ ಕುಲ ಕಸುಬಾಗಿರುವ ಸೇಂದಿ ಇಳಿಸುವುದನ್ನು ಉಡುಪಿ, ಮಂಗಳೂರಿನಂತೆ ಎಲ್ಲಾ ಜಿಲ್ಲೆಗಳಲ್ಲಿ ಅನುಮತಿ ನೀಡಬೇಕು, ಕುಲ ಕಸುಬು ಕಳೆದು ಕೊಂಡಿರುವ ಕಲ್ಯಾಾಣ ಕರ್ನಾಟಕದ ಸಂತ್ರಸ್ತ ಈಡಿಗ ಸಮುದಾಯದ ಪ್ರತಿ ಕುಟುಂಬಕ್ಕೆೆ 5 ಎಕರೆ ಕೃಷಿ ಜಮೀನು ಮಂಜೂರು ಮಾಡಬೇಕು, ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ದಿ ನಿಗಮಕ್ಕೆೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು, ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿ ಸ್ಥಾಾಪಿಸಬೇಕು, ಈಡಿಗ ಸಮಾಜದ ಶ್ರದ್ದಾ ಕೇಂದ್ರವಾದ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾಾನಕ್ಕೆೆ ಸೂಕ್ತವಾದ ಭದ್ರತೆಯನ್ನು ನೀಡಿ ಅಗತ್ಯ ಭೂಮಿ ಮಂಜೂರು ಮಾಡಬೇಕು, ಮದ್ಯ ಮಾರಾಟದಲ್ಲಿ ಸಮುದಾಯದ 26 ಪಂಗಡಗಳಿಗೆ ಶೇ. 50 ರಷ್ಟು ಮೀಸಲಾತಿ ನೀಡಬೇಕು, ಕೋಟಿ ಚೆನ್ನಯ್ಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಾಣಕ್ಕೆೆ ಇಡುವುದಕ್ಕೆೆ ಕೇಂದ್ರಕ್ಕೆೆ ಶಿಾರಸ್ಸು ಮಾಡಬೇಕು, ಶರಣ ಕೋಟಿ ಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳಗಳ ಅಭಿವೃದ್ದಿಗೆ 100 ಕೋಟಿ ಅನುದಾನ ನೀಡಬೇಕು, ನಾರಾಯಣ ಗುರುಗಳ ಅಧ್ಯಯನ ಪೀಠವನ್ನು ವಿಶ್ವವಿದ್ಯಾಾಲಯಗಳಲ್ಲಿ ಸ್ಥಾಾಪಿಸಬೇಕು, ಹಾಗೂ ವಿಶ್ವವಿದ್ಯಾಾಲಯಕ್ಕೆೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಘೋಷಣೆ ಮಾಡಬೇಕು, ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯಂದು ಅವರ ಹೆಸರನ್ನು ಒಳಗೊಂಡ ರಾಜ್ಯ ಮಟ್ಟದ 5 ಲಕ್ಷ ನಗದು ಪುರಸ್ಕಾಾರ ಹೊಂದಿದ ಪ್ರಶಸ್ತಿಿಯನ್ನು ಸಮುದಾಯದ ಸಾಧಕರಿಗೆ ನೀಡಬೇಕು, ಉತ್ತರ ಕನ್ನಡ ಭಾಗದಲ್ಲಿನ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡಿರುವ ಹಾಗೂ ಮನೆಗಳನ್ನು ಕಟ್ಟಿಿಕೊಂಡಿರುವ ಸಮುದಾಯದವರಿಗೆ ಸಕ್ರಮ ಗೊಳಿಸಬೇಕು, ಶರಣರಾದ ಹೆಂಡದ ಮಾರಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು, ಶಿವಮೊಗ್ಗ ಜಿಲ್ಲೆಯ ಹೊಸನಗರ ಕ್ಷೇತ್ರವನ್ನು ವಿಧಾನಸಭಾ ಕ್ಷೇತ್ರವನ್ನಾಾಗಿಸಬೇಕು ಹಾಗೂ ಜಿಲ್ಲೆಯಲ್ಲಿನ ಮುಳುಗಡೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ವಸತಿ ಕಲ್ಪಿಿಸಿ ಕೃಷಿ ಜಮೀನು ನೀಡಬೇಕು, ರಾಜ್ಯದಲ್ಲಿ ಸಮುದಾಯದವರಿಗೆ ವಿವಿಧ ವಸತಿ ಯೋಜನೆಗಳಡಿಯಲ್ಲಿ 25 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು ಸಮುದಾಯದ ಟ್ರಸ್ಟ್ ವೊಂದಕ್ಕೆೆ ವೈದ್ಯ ಕಾಲೇಜು ಮಂಜೂರು ಮಾಡಬೇಕು, ರಾಜ್ಯದ ಶಿವಮೊಗ್ಗ, ಮಂಗಳೂರು, ಕಾರವಾರ, ಉಡುಪಿ, ಜಿಲ್ಲೆಯಲ್ಲಿ 5 ಎಕರೆ ಜಮೀನಿನಲ್ಲಿ ಐಎಎಸ್, ಕೆಎಎಸ್, ಐಪಿಎಸ್ ಸೇರಿದಂತೆ ಉನ್ನತ ಆಡಳಿತ ತರಬೇತಿ ಕೇಂದ್ರಗಳನ್ನು ಸ್ಥಾಾಪಿಸಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟು ಒತ್ತಾಾಯಿಸಲಾಗುವುದು ಎಂದು ಸ್ವಾಾಮೀಜಿಗಳು ತಿಳಿಸಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಈಡಿಗ ಸಮುದಾಯದ ಮುಖಂಡರಾದ ಶ್ರೀರಾಮುಲು ನೀರಮಾನ್ವಿಿ, ಲಕ್ಷ್ಮಣ ಮಾನ್ವಿಿ, ಹನುಮಂತ ವಲ್ಕಂದಿನ್ನಿಿ, ಚಂದ್ರಶೇಖರ, ಆಶೋಕ ಚಾಗಭಾವಿ, ಆಶೋಕ ಮುಸ್ಟೂರು, ಶರಣಬಸವ ನೀರಮಾನ್ವಿಿ, ಸತ್ಯಪ್ಪ ಮಾನ್ವಿಿ, ಗುರುರಾಜ ಜೂಕೂರು, ಎಸ್.ರಂಗನಾಥ, ವಿನೋದ, ದೇವಪ್ಪ ಸಾದಾಪುರ ಸೇರಿದಂತೆ ಇನ್ನಿಿತರರು ಇದ್ದರು.
ಈಡಿಗ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ 700 ಕಿ.ಮೀ ಐತಿಹಾಸಿಕ ಪಾದಯಾತ್ರೆೆ-ಡಾ.ಶ್ರೀ ಪ್ರಣವಾನಂದ ಸ್ವಾಾಮೀಜಿ

