ಸುದ್ದಿಮೂಲ ವಾರ್ತೆ ರಾಯಚೂರು, ನ.22:
ವಿದ್ಯಾಾರ್ಥಿಗಳು ಸವಾಲುಗಳನ್ನು ಹಾಗೂ ಅವುಗಳಿಂದ ಬರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಗುರಿ ತಲುಪಬೇಕೆಂದು ಜೀವ ಪರಿಸ್ಥಿಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸಲು ಕಿವಿಮಾತು ಹೇಳಿದರು.
ನಗರದ ಕೃಷಿ ವಿವಿ ಸಭಾಂಗಣದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ 17ನೇ ಸಂಸ್ಥಾಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಈ ಭೂಮಿ ಮೇಲೆ ಮಾನವನ ವಾಸ ಇರುವವರೆಗೂ ಕೃಷಿ ಕ್ಷೇತ್ರ ಇದ್ದೇ ಇರುತ್ತದೆ. ಹೀಗಾಗಿ ಕೃಷಿ ಮತ್ತು ಕೃಷಿ ತಾಂತ್ರಿಿಕ ಪದವಿ ಓದುತ್ತಿಿರುವ ವಿದ್ಯಾಾರ್ಥಿಗಳು ಅದೃಷ್ಟವಂತರು ಮತ್ತು ಈ ಕೃಷಿ ಕ್ಷೇತ್ರ ಮತ್ತು ಸಮಾಜವು ಅವುಗಳ ಬೆಳವಣಿಗೆಗೆ ಹಾಗೂ ಪ್ರಗತಿಗೆ ನಿಮ್ಮ ಕೊಡುಗೆಯನ್ನು ಬಯಸುತ್ತಿಿವೆ. ಆದ್ದರಿಂದ ಕೃಷಿವಿಜ್ಞಾನ, ಕೃಷಿಕೌಶಲ್ಯ ಹಾಗೂ ಸೇವಾ ಮನೋಭಾವನೆಯನ್ನು ಅಳವಡಿಸಿಕೊಂಡು ಸಮಾಜಕ್ಕೆೆ ಮಾದರಿಯಾಗಬೇಕೆಂದರು.
ಜೀವನದಲ್ಲಿ ತೊಂದರೆಗಳು ಸಹಜ. ಆದರೆ ಪ್ರಯತ್ನಪಟ್ಟರೆ ವಿಶ್ವವೇ ನಮ್ಮ ಮುಂದೆ ನಿಲ್ಲುವುದು. ಆದ್ದರಿಂದ ಕಲಿಯಲು ಸಾಕಷ್ಟು ವಿಷಯಗಳಿದ್ದು ಕಲಿಯಲು ಗ್ರಂಥಾಲಯವನ್ನೇ ನಿಮ್ಮ ದೇವಸ್ಥಾಾನವೆಂದು ನೀವು ಓದುವ ಪಠ್ಯವನ್ನೇ ಭಗವದ್ಗೀತೆ ಎಂದು ಭಾವಿಸಿದರೆ ಪ್ರತಿಲ ನಿಶ್ಚಿಿತ. ಬೇರೆಯವರ ಜೊತೆ ಸ್ಪರ್ಧೆಗೆ ಹೊಗದೆ ನಿಮ್ಮತನದಲ್ಲೇ ಸ್ಪರ್ಧೆ ಮಾಡಿ ವರ್ಷದಿಂದ ವರ್ಷಕ್ಕೆೆ ಸಕಾರಾತ್ಮಕ ಪ್ರಗತಿ ಹೊಂದುವುದೇ ವಿದ್ಯಾಾರ್ಥಿಗಳಲ್ಲಿನ ಜಾಣತನ ಎಂದು ವಿದ್ಯಾಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಮಾತನಾಡಿ, ಈ ವಿಶ್ವವಿದ್ಯಾಾಲಯದಲ್ಲಿ ವ್ಯಾಾಸಂಗ ಮಾಡಿರುವ ಅನೇಕ ವಿದ್ಯಾಾರ್ಥಿಗಳು ದೇಶ ಹಾಗೂ ರಾಜ್ಯವ್ಯಾಾಪಿಯಲ್ಲಿನ ಅನೇಕ ಸಂಸ್ಥೆೆ, ಸರ್ಕಾರಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾಾರೆ. ವಿಶ್ವವಿದ್ಯಾಾಲಯದಿಂದ ರೈತರ ಏಳಿಗೆಗೆ ಇದುವರೆಗೆ 55 ಹೊಸತಳಿ, 500 ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸಿದೆ ಎಂದರು.
ಈ ವಿಶ್ವವಿದ್ಯಾಾಲಯ ಇ-ಸ್ಯಾಾಪ್ ಮೂಲಕ ದೇಶದ ಇತರ ರಾಜ್ಯಗಳಿಗೆ ವ್ಯಾಾಪಿಸಿರುವುದು ಹೆಮ್ಮೆೆಯ ಸಂಗತಿಯಲ್ಲದೆ, ನಾಲ್ಕು ಸಂಶೋಧನೆಗಳಿಗೆ ಪೇಟೆಂಟ್ ಪಡೆಯಲಾಗಿದ್ದು ಶಿಕ್ಷಕರು, ವಿಜ್ಞಾನಿಗಳು ರೈತಸ್ನೇಹಿ ಇನ್ನೂ ಅನೇಕ ತಂತಜ್ಞಾನಗಳನ್ನು ಅಭಿವೃದ್ದಿ ಪಡಿಸಲು ಸಲಹೆ ನೀಡಿದರು.
ವ್ಯವಸ್ಥಾಾಪನಾ ಮಂಡಳಿಯ ಸದಸ್ಯ ಡಿ.ಮಲ್ಲಿಕಾರ್ಜುನ, ವಿಶ್ರಾಾಂತ ಕುಲಪತಿ ಡಾ.ಬಿ.ವಿ.ಪಾಟೀಲ, ನಿವೃತ್ತ ಡೀನ್ ಡಾ.ಸಿ.ವಿ.ಪಾಟೀಲ ಮಾತನಾಡಿದರು. ವಿಶ್ವ ವಿದ್ಯಾಾಲಯದ ಸಾಧನೆ ಕುರಿತ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಗುಡಿಹಾಳದ ಶಿವಕುಮಾರ ಅವರಿಗೆ ಕೃಷಿ ರತ್ನಘಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಉತ್ತಮ ವಿಜ್ಞಾನಿ, ಶಿಕ್ಷಕ ಪ್ರಶಸ್ತಿಿಗಳ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಮಂಡಳಿ ಸದಸ್ಯ ಮಲ್ಲೇಶ ಕೊಲ್ಮಿಿಘಿ,ಡಾ.ಜಾಗೃತಿ ದೇಶಮಾನೆ ಸೇರಿ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾಾರ್ಥಿಗಳು, ವಿಜ್ಞಾನಿಗಳು ರೈತರು ಇದ್ದರು.
ಕೃಷಿ ವಿವಿ ಸಂಸ್ಥಾಾಪನಾ ದಿನಾಚರಣೆ ಸವಾಲುಗಳ ಜೊತೆ ಅವಕಾಶ ಬಳಸಿ ಗುರಿ ತಲುಪಿ-ಡಾ.ಶ್ರೀನಿವಾಸ

