ಸುದ್ದಿಮೂಲ ವಾರ್ತೆ
ಬೆಂಗಳೂರು ಮೇ 13: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಮತ್ತು ಹಾಲಿ ಶಾಸಕ ಡಾ.ಕೆ. ಸುಧಾಕರ್ ಸೋಲನ್ನು ಅನುಭವಿಸಿದ್ದಾರೆ.
ಇಲ್ಲಿ ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಿದ್ದ, ಹೊಸ ಮುಖ ಪ್ರದೀಪ್ ಈಶ್ವರ್ ಅವರು ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.
ಡಾ.ಸುಧಾಕರ್ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿ ಇದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಸಹಿತ ಬಿಜೆಪಿಯ ಪ್ರಮುಖ ನಾಯಕರೆಲ್ಲರೂ ಇಲ್ಲಿ ಬಂದು ಪ್ರಚಾರ ಮಾಡಿದ್ದರು. ಆದರೂ ಸಹ ಸುಧಾಕರ್ ಸೋಲನ್ನು ಅನುಭವಿಸಿದ್ದಾರೆ.
ಪರಿಶ್ರಮ ನೀಟ್ ಅಕಾಡೆಮಿ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ನೀಟ್ ಪರೀಕ್ಷೆಗೆ ತರಬೇತುಗೊಳಿಸುವ ಸಂಸ್ಥೆ ಮೂಲಕ ಬೆಳಕಿಗೆ ಬಂದಿದ್ದ ಪ್ರದೀಪ್ ಈಶ್ವರ್ ಅವರನ್ನು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿತ್ತು.
ಮೂಲತಃ ಚಿಕ್ಕಬಳ್ಳಾಪುರ ಸಮೀಪದ ಪೇರೆಸಂದ್ರದ ಪ್ರದೀಪ್ ಈಶ್ವರ್ ಅವರ ಮಾತುಗಳು ಆರಂಭದಲ್ಲಿ ಜನರನ್ನು ಆಕರ್ಷಣೆ ಮಾಡಿದ್ದವು. ಸುಧಾಕರ್ ಅವರ ಭ್ರಷ್ಟಾಚಾರಗಳ ವಿರುದ್ಧ ಪ್ರದೀಪ್ ನಿರಂತರ ತಮ್ಮ ಪ್ರಚಾರ ಭಾಷಣದಲ್ಲಿ ಹೇಳುತ್ತಲೇ ಬಂದರು. ಇದು ಮತದಾರರ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದ್ದು, ಸುಧಾಕರ್ ಸೋಲುವ ಮೂಲಕ ಅವಮಾನ ಅನುಭವಿಸುವಂತಾಗಿದೆ.
chikkaballapur dr k sudhakar defet