ಮಾಲೂರು, ಮೇ 12: ಸಮಾಜದಲ್ಲಿನ ಪ್ರತಿಯೊಬ್ಬ ಪ್ರಜೆಯ ಅರೋಗ್ಯ ರಕ್ಷಣೆಗಾಗಿ ದಾದಿಯರ ಧೈರ್ಯ ಮತ್ತು ತ್ಯಾಗ ಶ್ಲಾಘನೀಯವಾದದ್ದು ಎಂದು ವೈದ್ಯಾಧಿಕಾರಿ ಡಾ. ವಸಂತ್ ಕುಮಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಧುನಿಕ ಶುಶ್ರೂಷಕ ಸಂಸ್ಥಾಪಕರಲ್ಲಿ ಒಬ್ಬರಾದ ಫ್ಲಾರೇನ್ಸ್ ನೈoಟಿಂಗೇಲ್ ರವರ ಜನಮದಿನದ ಪ್ರಯುಕ್ತ ಪ್ರತಿ ವರ್ಷ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಇಡೀ ವಿಶ್ವವೇ ಆಚರಣೆ ಮಾಡುತ್ತದೆ. ದಾದಿಯರು ತಮ್ಮ ವೃತ್ತಿಯ ಜತೆಗೆ ಅವರ ಧೈರ್ಯ ತ್ಯಾಗ, ಈ ಸಮಾಜಕ್ಕೆ ಕೊಡುಗೆಯಾಗಿದೆ ಎಂದು ಹೇಳಿದರು.
ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೋನಾ ಸಮಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಬೇರೆಯವರ ಜೀವಗಳನ್ನು ಉಳಿಸಲು ಮಾಡಿರುವ ಸೇವೆ ಶ್ಲಾಘನೀಯವಾದದ್ದು. ತುರ್ತು ಸಮಯದಲ್ಲಿ ದಾದಿಯರ ಕರ್ತವ್ಯ ನಿಷ್ಠೆ ಅತ್ಯಂತ ಅಮೂಲ್ಯವಾದದ್ದು ಎಂದರು.
ಈ ಸಂದರ್ಭದಲ್ಲಿ ಮೆಟ್ರನ್ ಸರಸ್ವತಮ್ಮ, ಶುಶ್ರುಷಕ ಅಧಿಕಾರಿಗಳಾದ ರಾಜೇಶ್ವರಿ, ಛಾಯಾದೇವಿ,
ರೇಣುಕಾ, ಮಂಜುಳಾ, ಪ್ರಿಯದರ್ಶಿನಿ, ಶಿಲ್ಪ, ರೂಪಶ್ರೀ, ಶ್ರೀನಿವಾಸ ಮೂರ್ತಿ, ಪ್ರವೀಣ್, ರಘು, ಮಮತಾ, ಪ್ರಿಯಾಂಕಾ, ಸೌಮ್ಯ, ವಿಜಯಮ್ಮ, ಚಂದ್ರಕಲಾ ಸೇರಿದಂತೆ ಇನ್ನಿತರರು ಇದ್ದರು.