ಸುದ್ದಿಮೂಲ ವಾರ್ತೆ ರಾಯಚೂರು,ಡಿ.05:
ಕನ್ನಡ ಭಾಷೆ ವಿಜ್ಞಾನ, ತಂತ್ರಜ್ಞಾನದ ಸವಾಲುಗಳನ್ನು ಎದುರಿಸಿ ಇಂದಿನ ವಿದ್ಯಾಾರ್ಥಿಗಳು ಬೆಳೆಯಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಾಧ್ಯಾಾಪಕರು ಹಾಗೂ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನ್ನಡ ಅಧ್ಯಯನ ವಿಭಾಗದ ಕನ್ನಡ ಸಾಹಿತ್ಯ ಸಂಘದ 2025-26ನೇ ಸಾಲಿನ ಕಾರ್ಯ ಚಟುವಟಿಕೆಗಳ ಉದ್ಘಾಾಟನಾ ಸಮಾರಂಭದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವಿದ್ಯಾಾರ್ಥಿಗಳು ಬದುಕನ್ನು ಹೋರಾಟದ ಮೂಲಕ ಕಟ್ಟಿಿಕೊಳ್ಳಬೇಕು, ಅದಕ್ಕೆೆ ಸುಲಭವಾದ ಮಾರ್ಗವೆಂದರೆ ನಿಮ್ಮಲ್ಲಿರುವ ಪ್ರಯತ್ನವೇ ದೊಡ್ಡ ಶಕ್ತಿಿ. ವಿದ್ಯಾಾರ್ಥಿಗಳು ಭತ್ತ ಚೀಲಗಳಾಗಬಾರದು, ಭತ್ತದ ಗದ್ದೆಗಳಾಗಬೇಕು. ಸಮಾಜವನ್ನು ಹೇಗೆ ಗ್ರಹಿಸಬೇಕು ಎನ್ನುವುದರ ಬಗ್ಗೆೆ ಇಂದಿನ ಯುವಕರಿಗೆ ತಿಳವಳಿಕೆ ಅವಶ್ಯಕವಾಗಿದೆ. ಒಳ ಹರಿವು, ಎಚ್ಚರ ಇಲ್ಲದೆ ಸಮಾಜದೊಂದಿಗೆ ಸಂವಹನ ಮಾಡಲು ಸಾಧ್ಯವಿಲ್ಲದ ಸಂಕೀರ್ಣದ ಕಾಲಘಟ್ಟದಲ್ಲಿ ನಾವೆಲ್ಲರೂ ಇದ್ದೇವೆ. ಇದನ್ನು ಸುಧಾರಿಸಲು ತಾಂತ್ರಿಿಕ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯ ಹೊಟ್ಟೆೆ ತುಂಬಿಸುವುದಿಲ್ಲ, ಇದರ ಜೊತೆಗೆ ತಂತ್ರಜ್ಞಾನ, ಕಂಪ್ಯೂೂಟರ್ ಜ್ಞಾನ ಅವಶ್ಯಕವಾಗಿ ಕಲಿಯಬೇಕು ಎಂದು ವಿದ್ಯಾಾರ್ಥಿಗಳಿಗೆ ಕಿವಿ ಮಾತು ಹೇಳಿದರು.
2024ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ’ ಪ್ರಶಸ್ತಿಿ ಪುರಸ್ಕೃತ ಹಂಪಿ ಕನ್ನಡ ವಿಶ್ವವಿದ್ಯಾಾಲಯದ ಅಧ್ಯಯನಾಂಗ ನಿರ್ದೇಶಕ ಡಾ. ಅಮರೇಶ ಯತಗಲ್ ಅವರು ಸನ್ಮಾಾನ ಸ್ವೀಕರಿಸಿ ಮಾತನಾಡಿ ಪದವಿ ಮತ್ತು ಪ್ರಶಸ್ತಿಿಗಳು ಸುಲಭವಾಗಿ ಸಿಗುವುದಿಲ್ಲ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದಲ್ಲಿ ತೊಡಗಬೇಕು. ಜಾನಪದ ಸಾಹಿತ್ಯದಲ್ಲಿ ಬದುಕಿದೆ ಎನ್ನುವ ಸತ್ಯವನ್ನು ನಾವೆಲ್ಲರೂ ಮರೆತ್ತಿಿದ್ದೆವೆ. ನಮ್ಮ ಸಂಸ್ಕೃತಿಯ ಜೀವಂತ ಸಾಹಿತ್ಯ ಅದು ಬದುಕಿನ ಸತ್ಯದ ಸಾಹಿತ್ಯ. ಜನಸಾಮಾನ್ಯರ ಬಾಯಿಯಿಂದ ಬಂದಿರಬಹುದು ಆದರೆ ಅದಕ್ಕೆೆ ಒಂದು ಮೌಲ್ಯವಿದೆ ಎಂಬುದನ್ನು ಮರೆಯಬಾರದು, ಇದನ್ನು ನೆನಪಿನಲ್ಲಿಟ್ಟುಕೊಂಡು ಸಾಹಿತ್ಯ ಮತ್ತು ಚರಿತ್ರೆೆ ಇವೆರಡನ್ನು ಮೇಳೈಸಿ ಸಂಶೋಧನೆಯಲ್ಲಿ ತೊಡಗಬೇಕು ಹಾಗೂ ಇಂತಹ ಪ್ರಶಸ್ತಿಿಗಳು ನನ್ನ ಜವಾಬ್ದಾಾದಾರಿ ಮತ್ತಷ್ಟು ಹೆಚ್ಚಿಿಸಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಾನಿಲಯದ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ ಮಾತನಾಡಿ ಪ್ರಾಾಚೀನತೆ ಹೊಂದಿರುವ ಕನ್ನಡ ಭಾಷೆ ಬೆಳೆಸಲು ನಾವೆಲ್ಲರೂ ಪಣತೊಡಬೇಕಾಗಿದೆ. ಕನ್ನಡ ಭಾಷೆ ವೈವಿಧ್ಯಮಯವಾಗಿದೆ. ಪರಭಾಷೆ ಗೌರವಿಸುತ್ತಾಾ ಕನ್ನಡ ಭಾಷಾ ಸಾಹಿತ್ಯ ಪ್ರೀೀತಿ, ಕನ್ನಡದ ಅಭಿಮಾನ, ಸಾಂಸ್ಕೃತಿಕ ಪ್ರಜ್ಞೆಗಳನ್ನು ನಮ್ಮಲ್ಲಿ ಬಿತ್ತಿಿ ಬೆಳೆಸುತ್ತದೆ. ಈ ಸಾಹಿತ್ಯ ನಮ್ಮೆೆಲ್ಲರ ಬದುಕಿನ ಕೈಗನ್ನಡಿಯಾಗಿದೆ. ಸಾಹಿತ್ಯ ಆಯಾ ಕಾಲಮಾನಕ್ಕೆೆ ತಕ್ಕಂತೆ ರಚಿತವಾಗಿ ಪ್ರತಿಯೊಬ್ಬರನ್ನು ಬಡಿದೆಬ್ಬಿಿಸುತ್ತದೆ. ವಿಶ್ವವಿದ್ಯಾಾಲಯಗಳು ಪಾಠದ ಜೊತೆಗೆ ಬದುಕಿನ ತಿರುವುಗಳನ್ನು ಬದಲಾಯಿಸುವ ಕೇಂದ್ರಗಳಾಗಬೇಕು. ಅದರೊಂದಿಗೆ ಪಠ್ಯಗಳು ಬದಲಾಗಬೇಕು, ಕೌಶಲ್ಯಾಾಧಾರಿತವಾದ ಕೇಂದ್ರಗಳಾಗಿ ರೂಪುಗೊಳ್ಳಬೇಕು ಅಂದಾಗ ಮಾತ್ರ ವಿದ್ಯಾಾರ್ಥಿಗಳು ಹೆಚ್ಚು ಕ್ರಿಿಯಾಶೀಲರಾಗಲು ಸಹಾಯವಾಗುತ್ತದೆ. ಅವಕಾಶಗಳು ಹುಡುಕಿಕೊಂಡು ಬರುವಷ್ಟರ ಮಟ್ಟಿಿಗೆ ನಾವೆಲ್ಲರೂ ಬೆಳೆದು ನಿಲ್ಲಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾಾರ್ಥಿ ಕಲ್ಯಾಾಣಾಧಿಕಾರಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊೊ.ಪಾರ್ವತಿ ಸಿ.ಎಸ್. ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಉಪ ಕುಲಸಚಿವ ಡಾ.ಕೆ.ವೆಂಕಟೇಶ, ಹಣಕಾಸು ಅಧಿಕಾರಿ ಗಾಯಿತ್ರಿಿ, ಕಲಾ ನಿಕಾಯದ ಡೀನರು ಹಾಗೂ ಸಹ ಪ್ರಾಾಧ್ಯಾಾಪಕ ಡಾ.ಲತಾ.ಎಂ.ಎಸ್., ಹಳೆ ವಿದ್ಯಾಾರ್ಥಿ ಸಂಘದ ಅಧ್ಯಕ್ಷರು, ಉಪನ್ಯಾಾಸಕ ಡಾ.ಶಿವರಾಜ ಯತಗಲ್, ವಿಭಾಗದ ಸಂಯೋಜಕ ಡಾ.ಶರಣಪ್ಪ ಚಲವಾದಿ ವೇದಿಕೆಯಲ್ಲಿ ಉಪಸ್ಥಿಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ, ಹಾಗೂ ಡೀನ್ ಪ್ರೊೊ.ಪಿ.ಭಾಸ್ಕರ್, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾಾರ್ಥಿ ಭಾಗವಹಿಸಿದ್ದರು.
ಕನ್ನಡ ವಿಭಾಗದ ವಿದ್ಯಾಾರ್ಥಿ ಗೀತಾ ಹಾಗೂ ಸಂಗಡಿಗರು ಪ್ರಾಾರ್ಥಿಸಿದರು, ಪವನ್ ಕುಮಾರ ಸ್ವಾಾಗತಿಸಿದರು, ಶಿಲ್ಪಾಾ ನಿರೂಪಿಸಿದರು, ಎಸ್.ಬಿ ಪ್ರಕಾಶ್ ವಂದಿಸಿದರು.
ವಿದ್ಯಾಾರ್ಥಿಗಳು ಸಾಹಿತ್ಯದ ಜೊತೆಗೆ ತಾಂತ್ರಿಿಕ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು -ಡಾ. ವೆಂಕಟಗಿರಿ ದಳವಾಯಿ

