ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.07:
ಪ್ರಸಕ್ತ ವರ್ಷ ವಿವಿಧ ಇಲಾಖೆಗಳಿಗೆ ಅಭಿವೃದ್ಧಿಿ ಕಾಮಗಾರಿಗಳಿಗಾಗಿ ಬಿಡುಗಡೆಯಾದ ಯಾವುದೇ ಹಣ ಉಳಿಯದಂತೆ ಅನುದಾನವನ್ನು ನಿಗದಿತ ಅವಧಿಯೊಳಗೆ ಗುರಿ ಮುಟ್ಟುವ ಕಾರ್ಯ ತೀವ್ರಗತಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಾ ಪಂಚಾಯ್ತಿಿ ಮುಖ್ಯ ಲೆಕ್ಕಾಾಧಿಕಾರಿ ಡಾ.ವಿಜಯಶಂಕರ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯ್ತಿಿಯಿಂದ ಮಂಜೂರಾದ ಅನುದಾನವನ್ನು ಅಗತ್ಯಕ್ಕೆೆ ತಕ್ಕಂತೆ ಬಳಸಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು. ವಿನಾಕಾರಣ ವಿಳಂಬ ಸರಿಯಲ್ಲ. ತಾಪಂ ಇಲಾಖೆ ಆರೋಗ್ಯ ಇಲಾಖೆಗೆ ನೀಡಿರುವ 13ಲಕ್ಷರೂ. ಅನುದಾನ ಕಟ್ಟಡ ಮತ್ತು ಸಲಕರಣೆಗೆ ಖರೀದಿಗೆ ಬಳಕೆ ಮಾಡಬೇಕು. ತಾಲೂಕಿನ ಈಚನಾಳ, ನಾಗರಹಾಳ, ಸಜ್ಜಲಗುಡ್ಡ ಪ್ರಾಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಿಸಲಾಗಿದ್ದರೂ ದುರಸ್ತಿಿಗಾಗಿ ಪ್ರಸ್ತಾಾವನೆ ಸಲ್ಲಿಸಿರುವುದು ಸರಿಯಲ್ಲ ಸಿ.ಸಿ.ರಸ್ತೆೆಗೆ ಬಳಸಬೇಡಿ ಬೇರೆ ಅನುದಾನದಲ್ಲಿ ಮಾಡಬಹುದು ಕೂಡಲೇ ಕಾಮಗಾರಿ ಬದಲಿಸುವಂತೆ ಟಿಎಚ್ಒ ಡಾ.ಅಮರೇಶ ಪಾಟೀಲರಿಗೆ ತಾಕೀತು ಮಾಡಿದರು.
ಮುದಗಲ್ ಬಳಿ ಗೂಡ್ಸ್ ಗಾಡಿಯಲ್ಲಿ ಅವಧಿ ಮಿರಿದ ಕ್ಷೀರಭಾಗ್ಯ ಯೋಜನೆಗೆ ಕೆಎಂಎ್ ಹಾಲಿನ ಪಾಕೇಟ್ ಸಿಕ್ಕ ಬಗ್ಗೆೆ ವರದಿಯಾಗಿದೆ. ಇವು ಯಾವ ಶಾಲೆಗೆ ಸೇರಿದ್ದು ಏಕೆ ಬಳಕೆಯಾಗಿಲ್ಲ ಠಾಣೆಗೆ ದೂರು ನೀಡಿದರೂ ಏಕೆ ಮುತುವರ್ಜಿವಹಿಸಿಲ್ಲ ಎಂಬುದರ ಬಗ್ಗೆೆ ಸಮಗ್ರ ವರದಿ ಒಂದು ವಾರದಲ್ಲಿ ನಿಡುವಂತೆ ಬಿಇಓ ಹಾಗೂ ಅಕ್ಷರ ದಾಸೋಹ ಅಧಿಕಾರಿಗೆ ವಿಜಯ ಶಂಕರ ಸೂಚಿಸಿದರು.
ಸಿಡಿಪಿಒ ನಾಗರತ್ನ ಮಾತನಾಡಿ, ಇತ್ತಿಿಚಿಗೆ ನಾನು ಅಧಿಕಾರ ವಹಿಸಿಕೊಂಡಿದ್ದು, ಈ ಹಿಂದ ಕಳುಹಿಸಿದ ಪ್ರಸ್ತಾಾವನೆಗಳಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ. ನರಕಲದಿನ್ನಿಿ, ಚಿತ್ತಾಾಪುರ, ಬ್ಯಾಾಲಿಹಾಳ, ಕನ್ನಾಾಪುರ ಹಟ್ಟಿಿ, ಆನೆಹೊಸೂರು, ಕಾಲಳೇರದೊಡ್ಡಿಿ, ಗೊಲ್ಲರದೊಡ್ಡಿಿ, ನಾಗರಹಾಳ, ಯರಜಂತಿ, ಗೌಡೂರು ತಾಂಡಾ, ಗುಡದನಾಳ ಅಂಗನವಾಡಿ ಕೇಂದ್ರಗಳಿಗೆ ಕಂಪೌಂಡ್ ನಿರ್ಮಾಣ, ಗೇಟ್ ಅಳವಡಿಕೆ ಕುರಿತು ಪ್ರಸ್ತಾಾವನೆ ಸಲ್ಲಿಸಲಾಗಿದೆ. ಮಾಚನೂರು ತಾಂಡಾ, ಯರಜಂತಿ ಅಂಗನವಾಡಿ ಕೇಂದ್ರಗಳ ಶೌಚಗೃಹ ನಿರ್ಮಾಣ ಕಾಮಗಾರಿ ಬದಲಾವಣೆ ಮಾಡಬೇಕಿದೆ. ಕಡ್ಡೋೋಣಿ, ಜಾಲಿಬೆಂಚಿ, ರೋಡಲಬಂಡಾ, ಕೇಂದ್ರಗಳಿಗೆ ನಿರ್ಮಿಸಲು ಪ್ರಸ್ತಾಾವನೆ ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಿಇಒ ಸುಜಾತಾ ಹೂನೂರು ಮಾತನಾಡಿ, ತಾಲೂಕಿನ ಗುಂತಗೋಳ, ಹಿರೇಹೆಸರೂರು, ಮಾಚನೂರು, ಬೆಂಚಲದೊಡ್ಡಿಿ, ಹಾಲಬಾವಿ, ಗೊಲಪಲ್ಲಿ, ರಾಮತ್ನಾಾಳ, ಹಲ್ಕಾಾವಟಗಿ, ನವಲಿ, ಉಳಿಮೇಶ್ವರ, ಹೂನೂರು, ರಾಯದುರ್ಗ, ಟಣಮನಕಲ್, ಬಾರಿಗಿಡದರದೊಡ್ಡಿಿ ಪ್ರಾಾಥಮಿಕ ಶಾಲೆಗಳಲ್ಲಿ ನೆಲಹಾಸು, ಕಿಟಕಿ, ಬಾಗಿಲುಗಳ ದುರಸ್ತಿಿಗಾಗಿ ಪ್ರಸ್ತಾಾವನೆ ಸಲ್ಲಿಸಲಾಗಿದೆ. ದೇವರಭೂಪುರ ಪ್ರಾಾಥಮಿಕ ಶಾಲೆ ದುರಸ್ತಿಿ ಕಾಮಗಾರಿ ಬದಲಾವಣೆ ಮಾಡಲು ತಿಳಿಸಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ಅನುದಾನದಲ್ಲಿ ಲಿಂಗಸುಗೂರು ರೈತಸಂಪರ್ಕ ಕೇಂದ್ರಕ್ಕೆೆ ಕಂಪೌಂಡ್ ಗೋಡೆ ನಿರ್ಮಿಸಲು ಪ್ರಸ್ತಾಾವನೆ ಸಲ್ಲಿಸಲಾಗಿತು. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು. ಸಮಾಜ ಕಲ್ಯಾಾಣ ಇಲಾಖೆಯಲ್ಲಿ ನ್ಯಾಾಯಾಲಯದ ಆದೇಶದ ಮೇರೆಗೆ ಹೊರಗುತ್ತಿಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿಗಳಿಗೆ ಎರಡು ದಿನದಲ್ಲಿ ವೇತನ ಪಾವತಿಸುವಂತೆ ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿಗೆ ಜಿಪಂ ಮುಖ್ಯ ಲೆಕ್ಕಾಾಧಿಕಾರಿ ಡಾ.ವಿಜಯಶಂಕರ ಸೂಚಿಸಿದರು. ವೇದಿಕೆಯಲ್ಲಿ ತಾಪಂ ಇಒ ಉಮೇಶ ಇದ್ದರು. ನಾನಾ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು.
ನಿಗದಿತ ಅವಧಿಯೊಳಗೆ ಸರ್ಕಾರದ ಅನುದಾನ ಸದ್ಭಳಕೆ ಮಾಡಲು ಅಧಿಕಾರಿಗಳಿಗೆ ಡಾ.ವಿಜಯ ಶಂಕರ ಸೂಚನೆ

