ಸುದ್ದಿಮೂಲ ವಾರ್ತೆ
ದಾಬಸ್ ಪೇಟೆ, ನ. 09 :ಸೋಂಪುರದ ಅಗಳಕುಪ್ಪೆ ರಸ್ತೆ ಮಳೆ ಬಂದಾಗ ಚರಂಡಿಯಂತಾಗುತ್ತಿದ್ದು, ರಾಜಕಾಲುವೆಗಳ ಒತ್ತುವರಿಯಿಂದ ನೀರು ಸರಾಗವಾಗಿ ಹರಿದು ಹೋಗಲು ಆಗದಿರುವುದಿಂದ ಸದ್ಯ ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಜನರಿಗೆ ರೋಗ ರುಜಿನಗಳು ಹಾಗೂ ಸಾಂಕ್ರಾಮಿಕ ಕಾಯಿಲೆಗಳು ಬರುತ್ತಿವೆ.
ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ನೀರು ನಿಂತು ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಸೇರಿ ವಾಸನೆ ಬರುತ್ತಿದೆ. ಸದ್ಯ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಇದೇ ಮಾರ್ಗವಾಗಿ ಧಾರ್ಮಿಕ ಸ್ಥಳವಾದ ಸಿದ್ದರಬೆಟ್ಟ ಸೇರಿದಂತೆ ತುಮಕೂರು ಜಿಲ್ಲೆಯ ಹೊನ್ನುಡಿಕೆ, ಹರಳೂರುಗಳಿಗೂ ಈ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದು ಇದನ್ನು ಅವಲಂಬಿಸಿರುವ ಸಾರ್ವಜನಿಕರು ಹಿಡಿ ಶಾಪ ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೆಲಮಂಗಲ ಶಾಸಕ ಗಣೇಶ ಹಬ್ಬದ ದಿನ ಈ ರಸ್ತೆಗೆ ಕಾಮಾಗಾರಿಗೆ ಸುಮಾರು 6 ಕೋಟಿ ವೆಚ್ಚದಲ್ಲಿ ಕಾಮಾಗಾರಿಗೆ ಶಾಸಕರು ಗುದ್ದಲಿ ಪೂಜೆ ನೇರವೇರಿಸಿದರು. ಆದರೆ, ಮೂರು ತಿಂಗಳಾದರೂ ಈ ರಸ್ತೆಗೆ ಕಾಮಾಗಾರಿ ಮಾಡಲು ಇನ್ನೂ ಸಮಯ ಸಾಕಾಗಿಲ್ಲ. ಆದರೆ ಇದರಿಂದ ರಸ್ತೆಯಲ್ಲಿ ನೀರು ನಿಂತಿದೆ.
ನೆಲಮಂಗಲ ಶಾಸಕ ಎಸ್.ಶ್ರೀನಿವಾಸ್ ಮಾತನಾಡಿ, ಗುತ್ತಿಗೆದಾರ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಇನ್ನೂಂದು ವಾರ ಗಡುವು ನೀಡಿ ಲೋಕೋಪಯೋಗಿ ಇಲಾಖೆಯಿಂದ ಬೇರೆ ಟೆಂಡರ್ ಮಾಡಲು ಸೂಚಿಸಲಾಗುವುದು ಎಂದರು.
ಸ್ಥಳೀಯ ನಿವಾಸಿ ಎಚ್.ಬಿ.ನಾಗಭೂಷಣ್ ದಾಬಸ್ ಪೇಟೆಯ ಅಗಳಕುಪ್ಪೆ ರಸ್ತೆ ಉದ್ಟಾಟನೆ ಮಾಡಿದರೂ ಕಾಮಾಗಾರಿ ಪ್ರಾರಂಭ ವಾಗುತ್ತಿಲ್ಲಾ ಎಂದು ಸಿಎಂಗೆ ಪತ್ರ ಬರೆದಿದ್ದೆ. ಅದು ಆ ಇಲಾಖೆಗೆ ತಿಳಿಸಲಾಗುವುದು ಎಂದು ಬರೆದಿದ್ದಾರೆ ಎಂದು ತಿಳಿಸಿದ್ದಾರೆ.