ಸುದ್ದಿಮೂಲವಾರ್ತೆ
ಕೊಪ್ಪಳ ಜು 05: ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು ಜುಲೈ ತಿಂಗಳಲ್ಲಿ ತಳಮಟ್ಟಕ್ಕೆ ಕುಸಿದಿದೆ. ಈ ಬಾರಿ ನೀರಾವರಿಗೆ ನೀರು ನೀಡುವ ಬಗ್ಗೆ ಅನಿಶ್ಚಿತತೆ ಹೊಂದಲಾಗಿದೆ. ಈ ಮಧ್ಯೆ ಜಲಾಶಯನ್ನೆ ಆಶ್ರಯಿಸಿರುವ ಜಿಲ್ಲೆಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಏಳುವ ಮುನ್ಸೂಚನೆ ಇದೆ.
ಕರ್ನಾಟಕ, ಆಂಧ್ರ ಹಾಗು ತೆಲಂಗಾಣದ ರೈತರ ಜೀವ ನಾಡಿಯಾಗಿರುವ ತುಂಗಭದ್ರಾ ಜಲಾಶಯವು ಈ ಬಾರಿ ಭರ್ತಿಯಾಗುವ ಲಕ್ಷಣ ಇನ್ನೂ ಕಾಣುತ್ತಿಲ್ಲ. ಸಮಾನ್ಯವಾಗಿ ಜುಲೈ ಮೊದಲು ವಾರ ಜಲಾಶಯದಲ್ಲಿ ಅರ್ಧದಷ್ಟಾದರೂ ನೀರು ಬರುತ್ತಿತ್ತು. ಆದರೆ ಜುಲೈ ಮೊದಲು ವಾರ ಜಲಾಶಚಿiÀುದಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಈಗ ಜಲಾಶಚಿiÀುದಲ್ಲಿ ಕೇವಲ 3.056 ಟಿಎಂಸಿ ನೀರು ಸಂಗ್ರಹವಾಗಿದೆ.
1633 ಅಡಿ ಎತ್ತರ ನೀರು ನಿಲ್ಲುವ ಜಲಾಶಯದಲ್ಲಿ ಕಳೆದ ವರ್ಷ 1614 ಅಡಿ ನೀರು ನಿಂತಿತ್ತು. ಆದರೆ ಈ ಬಾರಿ 1576 ಅಡಿ ನೀರಿದೆ. ಕಳೆದ ವರ್ಷ ಈ ದಿನಕ್ಕೆ 48.18 ಟಿಎಂಸಿ ನೀರು ಜಲಾಶಯದಲ್ಲಿತ್ತು. ಆದರೆ ಈಗ ಕೇವಲ 3.056 ಟಿಎಂಸಿ ನೀರಿದೆ. 2016 ರ ನಂತರ ಇದೇ ಅವಧಿಯಲ್ಲಿ ಜಲಾಶಯ ನೀರಿನ ಮಟ್ಟ ತಳ ಮಟ್ಟಕ್ಕೀರೋದು ಎನ್ನಲಾಗಿದೆ.
ಈಗಿರುವ ನೀರಿನಲ್ಲಿ 2 ಟಿಎಂಸಿ ನೀರು ಡೆಡ್ ಸ್ಟೋರೇಜ್, 0.2ಟಿಎಂಸಿ ಆವಿಯಾಗುವ ನೀರು, ಉಳಿದ 0.8 ಟಿಎಂಸಿ ಆಂಧ್ರ ಹಾಗು ತೆಲಂಗಾಣದ ಪಾಲಿದೆ. ಈ ಎರಡೂ ರಾಜ್ಯಗಳು ತಮಗೆ ಅವಶ್ಯಕತೆ ಇದ್ದಾಗ ನೀರು ಪಡೆಯಬಹುದು. ಇದರಿಂದಾಗಿ ಜಲಾಶಯದಿಂದ ಕುಡಿವ ನೀರು ಅವಲಂಬಿಸಿರುವ ಬಳ್ಳಾರಿ. ವಿಜಯನಗರ, ಕೊಪ್ಪಳ ಹಾಗು ರಾಯಚೂರು ಜಿಲ್ಲೆಯ ಜನತೆ ಮುಂದಿನ ದಿನಗಳಲ್ಲಿ ಕುಡಿವ ನೀರಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷ ಜಲಾಶಯವು ಜುಲೈ 12 ರಂದು ಭರ್ತಿಯಾಗಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡಲಾಗಿತ್ತು. ಜುಲೈ 21 ರಿಂದ ರೈತರಿಗೆ ಕಾಲುವೆ ಮುಖಾಂತರ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ರೈತರಿಗೆ ಯಾವಾಗ ನೀರು ನೀಡುವುದು ಎಂಬುವುದು ನಿಶ್ಚಿಯವಾಗಿಲ್ಲ. ಜಲಾಶಯದಲ್ಲಿ ಕನಿಷ್ಠ 45 ಟಿಎಂಸಿ ನೀರು ಸಂಗ್ರಹ. ಜಲಾಶಯಕ್ಕೆ ಕನಿಷ್ಠ 5 ಸಾವಿರ ಕ್ಯೂಸೆಕ್ ಒಳಹರಿವು ಇರಬೇಕು. ಆಗ ಐಸಿಸಿ ಸಭೆ ಕರೆದು ರೈತರ ಭೂಮಿಗೆ ನೀರು ಬಿಡುವ ಕುರಿತು ನಿರ್ಧಾರ ಮಾಡಲಿದ್ದಾರೆ. ಆದರೆ ಈ ವರ್ಷ ಜಲಾಶಯದಲ್ಲಿ ನೀರಿನ ಮಟ್ಟದ ಪಾತಾಳ ಬಿಟ್ಟು ಬಾರದ ಹಿನ್ನೆಲೆಯಲ್ಲಿ ಯಾವಾಗ ನೀರು ಕಾಲುವೆ ಹರಿಸಲಾಗುವುದು ಎಂಬುವುದನ್ನು ಹೇಳಲು ಬರುತ್ತಿಲ್ಲ.
ಜೂನ ತಿಂಗಳಲ್ಲಿ ಆರಂಭವಾದ ಮುಂಗಾರು ಹಂಗಾಮು ಈಗ ಜುಲೈ ತಿಂಗಳು ಆರಂಭವಾದರೂ ಕೊಪ್ಪಳ ಜಿಲ್ಲೆ ಸ್ಭೆರಿದಂತೆ ಮಲೆನಾಡಿನಲ್ಲಿ ಮಳೆಯಾಗಿಲ್ಲ. ಚಿಕ್ಕಮಗಳೂರು. ಶಿವಮೊಗ್ಗ. ದಾವಣಗೆರಿಯಲ್ಲಿ ಮಳೆಯಾಗದೆ ಇರುವದರಿಂದ ನದಿಯಲ್ಲಿ ನೀರು ಬಂದಿಲ್ಲ. ಇದರಿಂದಾಗಿ ತುಂಗಭದ್ರಾ ನದಿಯನ್ನು ಆಶ್ರಯದವರು ಆತಂಕಗೊಂಡಿದ್ದಾರೆ.