ಸುದ್ದಿಮೂಲ ವಾರ್ತೆ,
ಸಿಂಧನೂರು ಏ ೧೩ : ರಾಜ್ಯದಲ್ಲಿ ಮಾರಾಟವಾಗುತ್ತಿರುವ ಹೊರರಾಜ್ಯದ ಅಮುಲ್ ಹಾಲನ್ನು ತಿರಸ್ಕರಿಸಿ. ಅದನ್ನು ಅವರು ರಾಜಕೀಯ ವಾಪಸ್ ಕಳಿಸಿ ನಮ್ಮ ರಾಜ್ಯದ ನಂದಿನಿ ಹಾಲನ್ನು ಉಳಿಸಿ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಡಾ. ನಾಗವೇಣಿ ಪಾಟೀಲ್ ಅವರು ಹೇಳಿದರು.
ಅವರು ಕಾಂಗ್ರೆಸ್ ಮಹಿಳಾ ಘಟಕ ಪದಾಧಿಕಾರಿಗಳು ಜೊತೆ ನಂದಿನಿ ಹಾಲನ್ನು ಖರೀದಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ನಂದಿನಿ ಹಾಲಿನ ಬಗ್ಗೆ ಜನರನ್ನು ಜಾಗೃತಿ ಮೂಡಿಸಿದರು. ಹೊರ ರಾಜ್ಯದಲ್ಲಿ ತಯಾರಾಗುತ್ತಿರುವ ಅಮುಲ್ ಹಾಲನ್ನು ನಮ್ಮ ರಾಜ್ಯದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಬಿಜೆಪಿ ಸರಕಾರದ ನಿಲುವು ಖಂಡಿಸುತ್ತೇನೆ. ಎಂದು ಅವರು ರಾಜ್ಯದ ನಂದಿನಿ ಹಾಲನ್ನು ಖರೀದಿಸಿ ಎಂದು ಡಾ.ನಾಗವೇಣಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮಹಿಳಾ ಘಟಕದ ಪ್ರಮುಖ ಪದಾಧಿಕಾರಿಗಳಾದ ಪ್ರೇಮಲತಾ, ನವನೀತ ಆದೋನಿ, ಪಲ್ಲವಿ ಮತ್ತು ರೇಣುಕಾ ಇನ್ನು ಇತರರು ಸೇರಿದಂತೆ ಉಪಸ್ಥಿತರಿದ್ದರು