ಸುದ್ದಿಮೂಲ ವಾರ್ತೆ ಬೀದರ, ಜ.24:
ಮಾಹಿತಿ ಬೆರಳ ತುದಿಯಲ್ಲಿ ಸಿಗುವ ಕಾಲವಾಗಿದ್ದರೂ, ಆಳವಾದ ತಿಳುವಳಿಕೆ ಮತ್ತು ವ್ಯಕ್ತಿಿತ್ವ ವಿಕಾಸಕ್ಕೆೆ ಪುಸ್ತಕ ಓದುವಿಕೆಯೇ ನಿಜವಾದ ಮಾರ್ಗವೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆೆ ತಿಳಿಸಿದರು.
ಶನಿವಾರ ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಆಯೋಜಿಸಲಾದ 3 ದಿನಗಳ ರಾಜ್ಯ ಮಟ್ಟದ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕಗಳು ನಮ್ಮ ಚಿಂತನೆಗೆ ದಿಕ್ಕು ನೀಡುತ್ತವೆ, ಮನಸ್ಸಿಿಗೆ ಶಿಸ್ತನ್ನು ಕೊಡುತ್ತವೆ ಮತ್ತು ಬದುಕಿನ ಮೌಲ್ಯಗಳನ್ನು ಅರಿಯುವ ದೃಷ್ಟಿಿಯನ್ನು ವಿಸ್ತರಿಸುತ್ತವೆ. ಯುವ ಪೀಳಿಗೆ ಹೆಚ್ಚು ಸಮಯವನ್ನು ಮೊಬೈಲ್ ಮತ್ತು ಪರದೆಗಳ ಮುಂದೆ ಕಳೆಯುತ್ತಿಿರುವ ಸಂದರ್ಭದಲ್ಲಿ, ದಿನವೂ ಸ್ವಲ್ಪ ಸಮಯವನ್ನು ಓದಿಗೆ ಮೀಸಲಿಡುವ ಅಭ್ಯಾಾಸ ಬೆಳೆಸಿಕೊಳ್ಳಬೇಕು. ಓದುವ ಸಂಸ್ಕೃತಿ ಬೆಳೆದರೆ ಜ್ಞಾನಸಂಪನ್ನ ಮತ್ತು ಜವಾಬ್ದಾಾರಿಯುತ ಸಮಾಜ ನಿರ್ಮಾಣ ಸಾಧ್ಯವೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಳಿಗೆಗಳನ್ನು ವೀಕ್ಷಿಸಿ, ವಚನ ಸಾಹಿತ್ಯ, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಸ್ವಾಾಮಿ ವಿವೇಕಾನಂದ, ಭಗವದ್ಗೀತಾ, ಕುವೆಂಪು ಸೇರಿದಂತೆ ಹಲವಾರು ಮಹನೀಯರ ಕೃತಿಗಳನ್ನು ಖರೀದಿಸಿ ಪುಸ್ತಕ ಸಂಸ್ಕೃತಿಗೆ ಪ್ರೋೋತ್ಸಾಾಹ ನೀಡಿದರು.
ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ಶೈಲೇಂದ್ರ ಬೆಲ್ದಾಾಳೆ, ಭಾಲ್ಕಿಿ ಹಿರೇಮಠ ಸಂಸ್ಥಾಾನದ ಡಾ. ಬಸವಲಿಂಗ ಪಟ್ಟದೇವರು, ಗುರು ಬಸವ ಪಟ್ಟದೇವರು, ಕನ್ನಡ ಸಾಹಿತ್ಯ ಪರಿಷತ್ತಿಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿಿ, ಗುರುನಾಥ ರಾಜಗೀರಾ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ಪುಸ್ತಕ ಸಂತೆಗೆ ಚಾಲನೆ ಯುವ ಜನತೆ ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ – ಸಚಿವ ಈಶ್ವರ ಬಿ.ಖಂಡ್ರೆ

