ಹೊಸಕೋಟೆ, ಜು 30 : ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಅಸ್ಪತ್ರೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವ ಆರೋಗ್ಯ ತಪಾಸಣೆ ಶಿಬಿರಗಳು ಮಧ್ಯಮ ವರ್ಗದ ಜನತೆಗೆ ವರದಾನ ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.
ಲಕ್ಕೊಂಡಹಳ್ಳಿ ಗ್ರಾ ಮ ಪಂಚಾಯತ್ ಹಾಗೂ ವೈದೇಹಿ ಅಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಸಿಗಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆಗಳು ಖಾಸಗೀಕರಣವಾಗಿದ್ದು, ಬಡಜನರಿಗೆ ಉಚಿತ
ಆರೋಗ್ಯ ಸೇವೆಗಳು ಸಿಗದೆ ಅಲೆದಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಡ್ಡಾಯವಾಗಿ ಸರ್ಕಾರವು ಆರೋಗ್ಯ ಸೇವಾ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು. ಇನ್ನಷ್ಟು ಉಚಿತ ಸೇವಾ ಯೋಜನೆಗಳು ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಬ್ಬ ವ್ಯಕ್ತಿ ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತುರ್ತು ಚಿಕಿತ್ಸೆಗಳನ್ನು ಪಡೆಯುವುದು ಸಹ ಮುಖ್ಯವಾಗಿದ್ದು, ಆರೋಗ್ಯ ವಿಚಾರವಾಗಿ ಯಾರು ಸಹ ಅಸಡ್ಡೆ ತೋರಬಾರದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಗ್ರಾಮೀಣ ಭಾಗದ ಜನತೆಯ ಆರೋಗ್ಯ
ದೃಷ್ಟಿಯಿಂದ ಇದು ಪ್ರಯೋಜನಕಾರಿಯಾಗಿದ್ದು, ಹೃದಯರೋಗ, ನರರೋಗ, ಕಿಡ್ನಿಯಲ್ಲಿ ಕಲ್ಲು, ಮೂತ್ರಕೋಶ ಸಂಬಂಧಿಸಿದ ಸಮಸ್ಯೆಗಳ, ಕ್ಯಾನ್ಸರ್ , ಮೂಳೆ ಸಮಸ್ಯೆ, ಸ್ರೀರೋಗ, ಕಿವಿ, ಮೂಗು, ಗಂಟಲು ರೋಗಗಳ ನುರಿತ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ ಎಂದರು.
ಗ್ರಾ.ಪಂ. ಅಧ್ಯಕ್ಷ ಬೈರೇಗೌಡ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನತೆ ಇದರ ಪ್ರಯೋಜನ
ಪಡೆಯುತ್ತಿದ್ದಾರೆ. ಉಚಿತ ತಪಾಸಣೆ, ಚಿಕಿತ್ಸೆ ಜೊತೆಯಲ್ಲಿ ಔಷದ ಹಾಗೂ ಮಾತ್ರೆಗಳನ್ನು
ನೀಡಲಾಗುತ್ತದೆ ಎಂದರು.
ಜಿ.ನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ಗ್ರಾ.ಪಂ.ಅಧ್ಯಕ್ಷ ಬೈರೇಗೌಡ, ಮಾಜಿ ಆಧ್ಯಕ್ಷ ರಾಧಾಕೃಷ್ಣ, ಉಪಾಧ್ಯಕ್ಷೆ ಮುನಿಯಮ್ಮ, ಲಲಿತಮ್ಮ,ಮಂಜುನಾಥ್, ಪಿಡಿಓ ಸುರೇಶ್ಕುಮಾರ್, ವೈದೇಹಿ ಅಸ್ಪತ್ರೆ ಡಾ.ವಿಶ್ವನಾಥ್,
ಸೋಮಸುಂದರ್, ಲಾರಿ ಕೃಷ್ಣಪ್ಪ, ಮುನಿನಂಜೇಗೌಡ, ನಾರಾಯಣಸ್ವಾಮಿ, ಶಿವರಾಜ್, ಭಾರತಿ
ದೇವರಾಜ್, ವಿನಯ್, ಹೇಮಣ್ಣ, ಹಸಿಗಾಳ ಜಗದೀಶ್, ಲಾರಿಕೃಷ್ಣಪ್ಪ, ಸೋಮಶೇಖರ್ ಇತರರು ಇದ್ದರು.