ಸುದ್ದಿಮೂಲ ವಾರ್ತೆ ರಾಯಚೂರು, ಸೆ.24:
ತೊಗರಿ, ಕಡಲೆ ಬೆಳೆಯ ವಿವಿಧ ಹಂತಗಳಲ್ಲಿ ಕಾಡುವ ರೋಗಗಳ ಬಗ್ಗೆೆ ಪರಿಹಾರದ ಮಾಹಿತಿ ನೀಡಲು ಕೃಷಿ ವ್ಯಾಾಸ್ ತಂತ್ರಾಾಂಶ ಬಹುಪಯೋಗಿಯಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಾಲಯದ ಕುಲಪತಿ ಡಾ.ಹನುಮಂತಪ್ಪ ಹೇಳಿದರು.
ರಾಯಚೂರಿನ ಕೃಷಿ ವಿಜ್ಞಾಾನ ಕೇಂದ್ರದಲ್ಲಿ ಎಸ್ಬಿಐ ಪೌಂಡೇಶನ್ ಅನುದಾನಿತ ಸಂಶೋಧನಾ ಯೋಜನೆ , ಇಕ್ರಿಿಸ್ಯಾಾಟ್ ಮತ್ತು ಅಗ್ರಿಿಬ್ರಿಿಡ್ಜ್ ಹೈದ್ರಾಾಬಾದ್ ಸಂಸ್ಠೆೆ ಒಡಂಬಡಿಕೆಯ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ 20 ತಾಲೂಕುಗಳ ಆಯ್ದ 4800 ರೈತರು ಭಾಗಿಯಾಗಲಿದ್ದಾಾರೆ. ಈ ಯೋಜನೆಯ ಉದ್ದೇಶ ರೈತರಿಗೆ ಪರಿಚಯಿಸಲು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದರು.
ಉಪಗ್ರಹದಿಂದ ರೈತರು ತಮ್ಮ ಮೊಬೈಲ್ನಲ್ಲಿ ’ಕೃಷಿ ವ್ಯಾಾಸ್ ಆ್ಯಪ್’ ಬಳಸಿ ತೊಗರಿ ಮತ್ತು ಕಡಲೆ ಬೆಳೆಯ ನೈಜ ಪರಿಸ್ಠಿಿತಿಯನ್ನು ಜಿಯೋಟ್ಯಾಾಗ್ ಮಾಡುವ ಮೂಲಕ ಸಂಗ್ರಹಿಸಿ ಬಾಧಿಸುವ ಕೀಟ, ರೋಗ ಮತ್ತು ಪೋಷಕಾಂಶ ನಿರ್ವಹಣೆ ಮಾಡಲು ಸೂಕ್ತ ಸಲಹೆ ನೀಡುವುದಾಗಿದೆ ಎಂದರು.
ಕೃಷಿಯಲ್ಲಿ ನೂತನ ತಂತ್ರಜ್ಞಾಾನ ಸುಧಾರಿತ ಬೀಜ, ಜೈವಿಕ ಗೊಬ್ಬರ ಅವಶ್ಯಕತೆಗನುಗುಣವಾಗಿ ಶಿಾರಸ್ಸು ಮಾಡಿದ ಗೊಬ್ಬರ ಮತ್ತು ಕೀಟನಾಶಕದ ಮಾಹಿತಿ ಮತ್ತು ಸರಕಾರದ ಸಬ್ಸಿಿಡಿ ಯೋಜನೆಗಳ ಬಗ್ಗೆೆ ತಿಳಿಯಲು ಬಹಳಷ್ಟು ಆ್ಯಪ್ಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಯೋಜನೆಯ ಸಂಯೋಜಕ ಡಾ. ಎ.ಜಿ. ಶ್ರೀನಿವಾಸ, ಮಾತನಾಡಿ ಈ ಯೋಜನೆಯು ಮೂರು ವರ್ಷಗಳ ಕಾಲವಧಿಯಲ್ಲಿ ರಾಯಚೂರು ಜಿಲ್ಲೆೆಯ ರಾಯಚೂರು, ಸಿರವಾರ ಮತ್ತು ದೇವದುರ್ಗ ತಾಲೂಕಗಳಲ್ಲಿ ಕೈಗೊಂಡಿದ್ದು ಪ್ರತಿ ತಾಲೂಕಿನಲ್ಲಿ ನಾಲ್ಕು ಹಳ್ಳಿಿಗಳಲ್ಲಿ 30 ರಂತೆ 360 ತೊಗರಿ ಮತ್ತು ಕಡಲೆ ಬೆಳೆಯುವ ರೈತರನ್ನು ಆಯ್ಕೆೆ ಮಾಡಲಾಗಿದೆ ಎಂದರು.
ಉಳಿಸಿದ್ದು ಗಳಿಸಿದ್ದಕ್ಕೆೆ ಸಮ ಎನ್ನುವ ಹಾಗೆ ಕೀಟನಾಶಕ, ಗೊಬ್ಬರ ಮತ್ತು ಇತರ ಪರಿಕರಗಳ ಮಿತ ಬಳಕೆಯಿಂದ ಖರ್ಚು ಕಡಿಮೆ ಮಾಡಿ ಇಳುವರಿ ಹೆಚ್ಚಿಿಸಿ ಆದಾಯ ದ್ವಿಿಗುಣಗೊಳಿಸುವುದು ಎಂದರು.
ಈ ಕಾರ್ಯಕ್ರಮದಲ್ಲಿ ಅಗ್ರಿಿಬ್ರಿಿಡ್ಜ್, ಹೈದರಾಬಾದ್ದ ನಿರ್ದೇಶಕ ಡಾ.ವಿಷ್ಣುವರ್ಧನ ರೆಡ್ಡಿಿ, ವಿವಿಯ ಸಹ ವಿಸ್ತರಣ ನಿರ್ದೇಶಕ ಡಾ.ಎ. ಆರ್.ಕುರುಬರ್, ಆದರ್ಶ ಮುರ್ರಿಿ, ಹಿರಿಯ ವಿಜ್ಞಾನಿ ಡಾ. ತಿಮ್ಮಣ್ಣ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿಿತರಿದ್ದರು.

