ಸುದ್ದಿಮೂಲ ವಾರ್ತೆ ಮಾನ್ವಿ, ಜ.10:
ಮಾನ್ವಿಿ ಪಟ್ಟಣದ ನಗರೇಶ್ವರ ಅರ್ಯ ವೈಶ್ಯ ಸಂಘದ ವತಿಯಿಂದ ಮಾನ್ವಿಿಯಿಂದ ಮಂತ್ರಾಾಲಯದ ಶ್ರೀ ರಾಘವೇಂದ್ರ ಸ್ವಾಾಮಿಗಳ ಸನ್ನಿಿಧಾನದವರೆಗೆ ಆಯೋಜಿಸಲಾದ ಪಾದಯಾತ್ರೆೆಗೆ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಶನಿವಾರ ಬೆಳಿಗ್ಗೆೆ ನಗರೇಶ್ವರ ದೇವಸ್ಥಾಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು ತುಂಗಭದ್ರಾಾ ನದಿ ತೀರದ ಪುಣ್ಯ ಕ್ಷೇತ್ರವಾಗಿರುವ ಮಂತ್ರಾಾಲಯದ ಶ್ರೀ ರಾಘವೇಂದ್ರ ಸ್ವಾಾಮಿಗಳ ಮಠದ ದರ್ಶನಕ್ಕೆೆ ಬರುವ ಭಕ್ತರಿಗೆ ಶ್ರೀ ರಾಘವೇಂದ್ರಸ್ವಾಾಮಿಗಳು ಅನುಗ್ರಹವನ್ನು ನೀಡುತ್ತಿಿದ್ದಾರೆ. ಮಾನ್ವಿಿಯ ಶ್ರೀ ನಗರೇಶ್ವರ ಅರ್ಯ ವೈಶ್ಯ ಸಂಘದವರು 2ನೇ ವರ್ಷದ ಪಾದಯಾತ್ರೆೆಗೆ ಎಲ್ಲಾ ಸಮುದಾಯದ ಭಕ್ತರಿಗೆ ಅವಕಾಶ ಮಾಡಿಕೊಟ್ಟಿಿರುವುದರಿಂದ ಸಮುದಾಯಗಳ ನಡುವೆ ಸೌಹಾರ್ದತೆ, ಭಾವೈಕ್ಯತೆ, ವಿಶ್ವಾಾಸ ಮೂಡುವುದಕ್ಕೆೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಾಮಿಗಳು ಅನುಗ್ರಹ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ನಗರೇಶ್ವರ ಅರ್ಯ ವೈಶ್ಯ ಸಂಘದ ಅಧ್ಯಕ್ಷ ಆರ್.ಮುತ್ತುರಾಜಶೆಟ್ಟಿಿ, ಕಾರ್ಯದರ್ಶಿ ಬಿಚ್ಚಾಾಲಿ ಈರಣ್ಣ ಶೆಟ್ಟಿಿ , ಪುರಸಭೆ ಹಿರಿಯ ಸದಸ್ಯ ರಾಜಾ ಮಹೇಂದ್ರನಾಯಕ ಮುಂತಾದವರು ಉಪಸ್ಥಿಿತರಿದ್ದರು. ಈ ಪಾದಯಾತ್ರೆೆಯಲ್ಲಿ 700 ಕ್ಕೂ ಹೆಚ್ಚು ಸರ್ವ ಸಮುದಾಯಗಳ ಪಾದಯಾತ್ರಿಿಗಳು ಭಾಗವಹಿಸಿದ್ದರು.
ಮಾನ್ವಿಯಿಂದ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಪಾದಯಾತ್ರೆ, ಶ್ರೀಗಳಿಂದ ಚಾಲನೆ

