ಶಕ್ತಿ ಯೋಜನೆಯನ್ನು ರದ್ದು ಪಡಿಸಿ. ಚಾಲಕರ ಪ್ರತಿಭಟನೆ
ಸುದ್ದಿಮೂಲವಾರ್ತೆ
ಕೊಪ್ಪಳ ಜು 10: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು ಜನರಿಗೆ ಅನುಕೂಲವಾಗಿದೆ. ಆದರೆ ಬಾಡಿಗೆ ವಾಹನ ಓಡಿಸುವವರ ಹೊಟ್ಟೆಗೆ ಹೊಡೆದಂತಾಗಿದೆ. ಈ ಹಿನ್ನಲೆಯಲ್ಲಿ ಶಕ್ತಿ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಇಂದು ವಾಹನ ಚಾಲಕ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ತಿಂಗಳು ಶಕ್ತಿ ಯೋಜನೆ ಜಾರಿಯಾದ ನಂತರ ಕ್ರೂಷರ್, ಕಾರುಗಳು, ಅಟೋ ಗಳಿಗೆ ದುಡಿಮೆ ಇಲ್ಲ. ವಾಹನಗಳನ್ನು ಬಾಡಿಗೆಯಲ್ಲಿ ಓಡಿಸಿ ಹೊಟ್ಟೆ ಹೊರೆಯುತ್ತಿದ್ದ ಚಾಲಕರು ಈಗ ನಿರಾಶ್ರಿತರಾಗಿದ್ದಾರೆ. ದುಡಿಮೆ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಈ ಮಧ್ಯೆ ವಾಹನ ಮಾಲೀಕರು ರೋಡ್ ಟ್ಯಾಕ್ಸ್ ಸೇರಿದಂತೆ ಇತರೆ ತೆರಿಗೆಯನ್ನು ಕಟ್ಟಬೇಕಾಗಿದೆ. ತೆರಿಗೆಯನ್ನು ಕಟ್ಟುವುದು ಕಷ್ಟವಾಗಿದೆ. ಈ ಹಿನ್ನೆಲೆ ತೆರಿಗೆ ಹಿಂಪಡೆಯಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಕೊಪ್ಪಳ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ.ಕಳಕಪ್ಪ ಸೂಡಿ. ಪ್ರಕಾಶ ಹಿರೇಮಠ. ಶಿವಣ್ಣ ಹನುಮಸಾಗರ, ಅಂಕುಶ, ಅಖಿರಸಾಬ.ಪ್ರಕಾಶ ದನ್ನೂರ. ನಾಗರಾಜ ಹಟ್ಟಿ ಸೇರಿ ಹಲವರಿದ್ದರು.