ಸುದ್ದಿಮೂಲ ವಾರ್ತೆ ಸಿಂಧನೂರು, ಸೆ.28:
ಸಿಂಧನೂರು ದಸರಾ ಉತ್ಸವ ಅಂಗವಾಗಿ ಪ್ರಸಕ್ತ ವರ್ಷ ವಿಶೇಷವಾಗಿ ಹೆಲಿಕ್ಯಾಾಪ್ಟರ್ ಮೂಲಕ ಬಾನಂಗಳದಿಂದ ಸಿಂಧನೂರು ವೀಕ್ಷಣೆಗೆ ಅವಕಾಶ ಕಲ್ಪಿಿಸಲಾಗಿದ್ದು, ಹೆಲಿಪ್ಯಾಾಡ್ನಲ್ಲಿ ಪೂಜೆ ಸಲ್ಲಿಸುವ ಮೂಲಕ ತಹಶೀಲ್ದಾಾರ್ ಅರುಣ್ ಎಚ್.ದೇಸಾಯಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಹೆಲಿಕ್ಯಾಾಪ್ಟರ್ ಮೂಲಕ ಕ್ಷೇತ್ರ ವೀಕ್ಷಣೆಗೆ ಒಬ್ಬರಿಗೆ ರೂ.4500 ನಿಗದಿ ಪಡಿಸಲಾಗಿದೆ. ಒಮ್ಮೆೆ ಪ್ರಯಾಣಿಸಲು ಆರು ಜನರಿಗೆ ಅವಕಾಶವಿದೆ. ಈಗಾಗಲೇ ಅನೇಕರು ಹೆಸರು ನೋಂದಾಯಿಸಿಕೊಂಡಿದ್ದು, ಇದರ ಸದುಪಯೋಗ ಪಡೆಯಬಹುದು ಎಂದು ಮನವಿ ಮಾಡಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಆರ್ಡಿಸಿಸಿ ಬ್ಯಾಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಮುಖಂಡರಾದ ಆರ್.ಸಿ.ಪಾಟೀಲ್, ಬಸವರಾಜ ಸಾಹುಕಾರ ಕುರುಕುಂದಾ, ವೀರೇಶ ಹಟ್ಟಿಿ, ಸುರೇಶ ಜಾದವ್, ವೀರೇಶ ಶಿಳ್ಳಿಿ, ಕ್ರಾಾಂತಿಕುಮಾರ, ಲಿಂಗಾಧರ್ ಗುರುಸ್ವಾಾಮಿ, ಬಾಬರ್ ಪಟೇಲ್ ಸೇರಿದಂತೆ ದಸರಾ ಉತ್ಸವ ಸಮಿತಿಯ ಸದಸ್ಯರು, ಸಾರ್ವಜನಿಕರು ಇದ್ದರು.
ಹೆಲಿಕಾಪ್ಟರ್ ಮೂಲಕ ಬಾನಂಗಳದಿಂದ ವೀಕ್ಷಣೆಗೆ ಚಾಲನೆ
