ಸುದ್ದಿಮೂಲ ವಾರ್ತೆ ಜಾಲಹಳ್ಳಿ, ನ.30:
ಆರೋಗ್ಯ ಸಂಪತ್ತು ನಿಜವಾದ ಸಂಪತ್ತು ಎಂದು ಶಾಸಕಿ ಕರಿಯಮ್ಮ ಜಿ ನಾಯಕ ಹೇಳಿದರು,
ಅವರು ಇಂದು ಭಾನುವಾರ ಗ್ರಾಾಮದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಹೈಟೆಕ್ ಆ್ಯಂಬ್ಯುಲೆನ್ಸ್ ಗೆ ಹಸಿರು ಧ್ವಜ ತೋರಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿ ತಾಲೂಕಿನಲ್ಲಿ ಜಾಲಹಳ್ಳಿಿ ಭಾಗದ ಸಮುದಾಯ ಆರೋಗ್ಯ ಕೇಂದ್ರ ದೊಡ್ಡದಿದೆ, ಇಲ್ಲಿ ದಿನಾಲು ನೂರಾರು ರೋಗಿಗಳು ಚಿಕಿತ್ಸೆೆ ಗೆ ಬರುತ್ತಾಾರೆ, ಸುತ್ತಲೂ ಮೂವತ್ತು ಕಿಮೀ ದೂರದ ಹಳ್ಳಿಿಗಳ ಜನರಿಗೆ ತುರ್ತು ಚಿಕಿತ್ಸೆೆ ಕೊಡಿಸಲು ಮತ್ತು ಗರ್ಭಿಣಿ ಬಾಣಂತಿಯರ ಇತರೆ ಯಾವುದೇ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆೆಗೆ ಕರೆದುಕೊಂಡು ಹೋಗಲು ಇನ್ನೊೊಂದು ಅ್ಯಂಬ್ಯುಲೆನ್ಸ್ ಅವಶ್ಯಕತೆ ಇತ್ತು ಕಲ್ಯಾಾಣ ಕರ್ನಾಟಕದ ಅಭಿವೃದ್ಧಿಿ ನಿಗಮದಿಂದ 25 ಲಕ್ಷ ರೂಗಳ ಅನುದಾನದಲ್ಲಿ ಈ ಹೈಟೆಕ್ ಅ್ಯಂಬ್ಯುಲೆನ್ಸ್ ಒದಗಿಸಲಾಗಿದೆ ಎಂದು ಮಾತನಾಡಿದರು,
ಆರೋಗ್ಯ ಕೇಂದ್ರ ದ ವೈಧಾಯ್ಯಧಿಕಾರಿ ಡಾ. ಆರ್ ಎಸ್ ಹುಲಮನಿ ಮಾತನಾಡಿ ಈ ಅ್ಯಂಬ್ಯುಲೆನ್ಸ್ ನಲ್ಲಿ ಆಕ್ಸಿಿಜನ್, ರಕ್ತದ ಒತ್ತಡ ಪರೀಕ್ಷೆ, ಇಸಿಜಿ ಮಾಡುವುದು,ವಿಷ ಕುಡಿದ ರೋಗಿಗಳ ವಿಷ ಹೊರ ಹಾಕಿಸುವ ತಂತ್ರಜ್ಞಾನ ಸೇರಿದಂತೆ ಎಲ್ಲಾ ಸೌಲಭ್ಯಗಳ ಅಂಬ್ಯುಲೆನ್ಸ ಇದಾಗಿದೆ ಎಂದು ವಿವರಿಸಿದರು.
ಚಾಲನಾ ಸಂದರ್ಭದಲ್ಲಿ ತಾ ಪಂ ಮಾಜಿ ಸದಸ್ಯರಾದ ಗೋವಿಂದ ತಿಂಪೂರು, ಹುಸೇನಪ್ಪ ಗುತ್ತೆೆದಾರ, ಶಿವನಗೌಡ ಮಾಲಿ ಪಾಟೀಲ್, ರುದ್ರ ಗೌಡ,ಶಿವನ ಗೌಡ ಕಕ್ಕಲದೊಡ್ಡಿಿ,ರಂಗಪ್ಪ ಯರಕಮಟ್ಟಿಿ,ಪಿಎಸ್ಐ ವೈಶಾಲಿ ಜಳಕಿ ಸೇರಿದಂತೆ ಅನೇಕರು ಇದ್ದರು.

