ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ. 4: ತಾಲೂಕಿನಲ್ಲಿ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯ ಅಡಿಯಲ್ಲಿ 29 ಲಕ್ಷ ರೂಗಳ ಕಾಮಗಾರಿಗಳಿಗೆ ನಗರಸಭೆಯಿಂದ ನಗರದ ವಿವಿಧ ವಾರ್ಡ್ ಳಲ್ಲಿ ಕುಡಿಯುವ ನೀರಿನ ಯೋಜನೆ, ಕೊಳವೆಬಾವಿ ನಿರ್ಮಾಣಕ್ಕೆ ನಗರ ಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿನ ಬೈಪಾಸ್ ರಸ್ತೆಯಲ್ಲಿರುವ ಖಬರ ಸ್ಥಾನ್, ಅಂಬೇಡ್ಕರ್ ಭವನ, ಒಕ್ಕಲಿಗರ ಭವನದ ಹತ್ತಿರ ಹಾಗೂ ವಿವಿಧ ವಾರ್ಡಗಳಲ್ಲಿ ನೀರಿನ ಕೊಳವೆಬಾವಿ ಕೊರೆಯುವುದು ಮತ್ತು ಪಂಪ್ ಮೋಟರ್ ಅಳವಡಿಸುವ ಸಾಮಗ್ರಿಗಳನ್ನು ಈ ಯೋಜನೆಯಲ್ಲಿ ಬಳಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಮುರಳಿ. ಸುಧಾಕರ್.15ನೇ ವಾರ್ಡಿನ ನಗರಸಭೆ ಸದಸ್ಯೆ ವಸಂತ ಬಾಲಕೃಷ್ಣ, ಮುಖಂಡರಾದ ಎಸ್ ಎಂ ರಮೇಶ್, ಬಾಲಕೃಷ್ಣ. ಸಾರ್ವಜನಿಕರು ಉಪಸ್ಥಿತರಿದ್ದರು.