ಸುದ್ದಿಮೂಲ ವಾರ್ತೆ
ಬೆಂಗಳೂರು ಜೂ 29 : ಸಂಸ ರಂಗಪತ್ರಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕೆ.ಎನ್ ವಿಜಯಲಕ್ಷ್ಮಿ ನೆನಪಿನ ನಾಟಕೋತ್ಸವನ್ನು ಮೈಸೂರು ವಿವಿ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಕೃಷ್ಣ ಮನವಲ್ಲಿ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಉದ್ಘಾಟಿಸಿದರು.
ಜೂನ್ 28 ರಿಂದ 30 ರವರೆಗೆ 3 ದಿನಗಳು ನಯನದಲ್ಲಿ ನಾಟಕೋತ್ಸವ ನಡೆಯಲಿದೆ.ಜೂನ್ 28 ರಂದು ಸ್ಪೇನ್ ನಾಟಕಕಾರ ಲೋರ್ಕ ಅವರ ಬ್ಲಢ್ ವೆಡ್ಡಿಂಗ್ ನಾಟಕ ರಂಗಶಾಲಾ ತಂಡದಿಂದ ಪ್ರದರ್ಶನಗೊಂಡಿತು . ಜೂನ್ 29 ರ ಸಂಜೆ ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳಿಂದ ಚಮ್ಮಾರನ ಚಾಲಾಕಿ ಹೆಂಡಿತಿ ನಾಟಕವಿದೆ. ಜೂನ್ 30 ರಂದು ಸಂಜೆ ಕೆ.ಎನ್ ವಿಜಯಲಕ್ಷ್ಮಿ ಹೆಸರಿನಲ್ಲಿ ಉತ್ತಮ ಅನವಾದಕಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಖ್ಯಾತ ಅನುವಾದಕಿ, ಉಪನ್ಯಾಸಕಿಯಾಗಿದ್ದ ಕೆ.ಎನ್.ವಿಜಯಲಕ್ಷ್ಮಿ ಅವರು ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಮರ್ಶಕ ಕಿ.ರಂ.ನಾಗರಾಜ ಅವರ ಪತ್ನಿಯಾಗಿದ್ದ ಅವರು ಅನವಾದಿಸಿದ ನಾಟಕಗಳು ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಕಾರ್ಯಕ್ರಮ ದಲ್ಲಿ ಬೆಂಗಳೂರು ಉತ್ತರ ವಿವಿ ಕುಲಸಚಿವರಾದ ಡಾ.ಡಿ.ಡಾಮಿನಿಕ್ , ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ, ಸಂಸ ಥಿಯೇಟರ್ ನ ಸಂಸ ಸುರೇಶ್ ಉಪಸ್ಥಿತರಿದ್ದರು .