ಸುದ್ದಿಮೂಲ ವಾರ್ತೆ ಮುದಗಲ್, ಡಿ.28:
ತಾಲೂಕಿನಲ್ಲಿ ಕಾಂಗ್ರೆೆಸ್ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಸಂಘಟನೆ ಮೂಲಕ ಮುಂದಾಗಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಡಿಎಸ್ ಹೂಲಗೇರಿ ಶನಿವಾರ ಹೇಳಿದರು.
ಪಟ್ಟಣದ ಹೂಲಗೇರಿ ನಿವಾಸದಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಜರುಗಿದ ಮುದಗಲ್ ಬ್ಲಾಾಕ್ ಅಲ್ಪಾಾಸಂಖ್ಯಾಾತ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು ಪಕ್ಷ ಬಲವರ್ಧನೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ವಿರೋಧಿಗಳ ಹೇಳಿಕೆಗಳಿಗೆ ಕಿವಿಗೊಡಬೇಡಿ. ಮುಂಬರುವ ಚುನಾವಣೆಗಳಿಗೆ ಸ್ಪರ್ಧಾಕಾಂಕ್ಷಿಗಳು ಬ್ಲಾಾಕ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬೇಕು. ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆೆ ತನ್ನದೇ ಆದ ಇತಿಹಾಸವಿದೆ.
ನನಗೆ ಈ ಹಿಂದೆ ಯಾವ ರೀತಿಯ ಬೆಂಬಲ ನೀಡಿದ್ದೀರಿ, ಅದೇ ರೀತಿ ಮುಂದೆಯೂ ಬೆಂಬಲ ನೀಡಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗೋಣ ಎಂದು ಹೇಳಿದರು.
ಮುದಗಲ್ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾಾರನಂದಿಹಾಳ, ರಾಹುಲ್ ಗಾಂಧಿ ಬ್ರಿಿಗೇಡ್ ರಾಜ್ಯ ಕಾರ್ಯದರ್ಶಿ ಎಸ್ಆರ್ ರಸೂಲ್, ಶೇಖದಾವೂದ್, ಡಾ. ರಹೀಂ ಪಾಟೀಲ್, ಕೆಡಿಪಿ ಸದಸ್ಯ ರಾಘವೇಂದ್ರ ಕುದುರಿ, ಅಲ್ಪ ಸಂಖ್ಯಾಾತರ ಘಟಕದ ಜಿಲ್ಲಾಧ್ಯಕ್ಷ ಸೈ. ಯಾಜ್ ಹುಸೇನ್ ಮಾತನಾಡಿದರು,
ನೂತನ ಅಧ್ಯಕ್ಷ ಅಬ್ದುಲ್ ಗೂರ್ ಖಾನ, ಪುರಸಭೆ ಮಾಜಿ ಉಪಾಧ್ಯಕ್ಷ ಅಜಮೀರ್ ಬೆಳ್ಳಿಿಕಟ್, ನ್ಯಾಾಮತ್ ಖಾದ್ರಿಿ, ಸೈಯ್ಯದ್ಸಾಬ, ನಾಗರಾಜ ದೇದಾರ, ಯುತ್ ಕಾಂಗ್ರೆೆಸ್ ಅಧ್ಯಕ್ಷ ಅಬ್ದುಲ್ ಖದಿರ್, ಪ್ರಚಾರ ಸಮಿತಿ ಅಧ್ಯಕ್ಷ ಅರುಣಕುಮಾರ ಯರ್ದಿಹಾಳ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಜೆಲ್ಲಿ, ತಸ್ಮೀಂ ಹೈಮದ್ ಮುಲ್ಲಾ, ಅಮರಯ್ಯ ಹಿರೇಮಠ ಬ್ಯಾಾಲಿಹಾಳ, ಮುನ್ನರ್ ಖಾನ್, ಲಕ್ಷ್ಮೇಗಳಮನಿ, ರಘುವೀರ ಮೇಗಳಮನಿ, ಬುಡ್ಡಾಾಸಾಬ, ಮಹಿಬೂಬಸಾಬ, ಖಾಜಾಹುಸೇನ್ ಹಾಗೂ ಇತರರು ಇದ್ದರು.
ಪಕ್ಷ ಸಂಘಟನೆಗೆ ಮುಂದಾಗಿ- ಡಿಎಸ್ ಹೂಲಗೇರಿ

