ಸುದ್ದಿಮೂಲ ವಾರ್ತೆ ಮಾನ್ವಿ, ೆ.10:
ಸಿಮೆಂಟ್, ಕಂಕರ್ ಮಿಕ್ಸಿಿಂಗ್ನ ಟಿಪ್ಪರ್ (ಹಜಾಕ್ಸ್) ಹಾಯ್ದು ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳವಾರ ಮಾನ್ವಿಿ ಪಟ್ಟಣದ ಮುಖ್ಯ ರಸ್ತೆೆಯಲ್ಲಿ ಜರುಗಿದೆ.
ಮೃತಪಟ್ಟ ವ್ಯಕ್ತಿಿಯನ್ನು ಮಾಡಗಿರಿ ಗ್ರಾಾಮದ ಚನ್ನಪ್ಪಗೌಡ (75) ಎಂದು ಗುರುತಿಸಲಾಗಿದ್ದು ಮಾನ್ವಿಿ ಪಟ್ಟಣದ ಚತುಷ್ಪಥ ರಸ್ತೆೆಯ ಚರಂಡಿ ನಿರ್ಮಿಸುವ ಸಲುವಾಗಿ ಸಿಮೆಂಟ್, ಕಂಕರ್ ಹಾಗೂ ಮರಳು ಮಿಶ್ರಣ ಮಾಡಿಕೊಂಡು ಪಟ್ಟಣದ ವಾಲ್ಮೀಕಿ ವೃತ್ತದ ಕಡೆಯಿಂದ ಬಸವ ವೃತ್ತದ ಮುಖ್ಯರಸ್ತೆೆಯ ಮಾರ್ಗವಾಗಿ ಬರುತ್ತಿಿದ್ದ ಇನ್ಪ್ರಾ ಕಂಪನಿಯ ಟಿಪ್ಪರ್ (ಹಜಾಕ್ಸ್ ಮಿಷನ್) ಕರ್ನಾಟಕ ಬ್ಯಾಾಂಕ್ ಮುಂದಿನ ಮುಖ್ಯ ರಸ್ತೆೆಯಲ್ಲಿ ಕರ್ನಾಟಕ ಬ್ಯಾಾಂಕಿನ ಹತ್ತಿಿರ ಹೋಗುತ್ತಿಿದ್ದ ಬೈಕ್ ಸವಾರ ಚನ್ನಪ್ಪಗೌಡ ಇವರ ಮೇಲೆ ಹಾಯ್ದ ಪರಿಣಾಮ ಸವಾರ ಚೆನ್ನಪ್ಪಗೌಡ ಸ್ಥಳದಲ್ಲೇ ಅಸು ನೀಗಿದ್ದಾನೆ.
ಟಿಪ್ಪರ್ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಟಿಪ್ಪರಿನ ಅತಿ ವೇಗ ಮತ್ತು ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿಿದೆ. ಚತುಷ್ಪಥ ರಸ್ತೆೆ, ಚರಂಡಿ ನಿರ್ಮಿಸುವ ಹಾಗೂ ನೀರಿನ ಪೈಪ್ಲೈನ್ ಹಾಕುವ ಕಂಪನಿಗಳ ಬೇಜವಾಬ್ದಾಾರಿಯಿಂದ ಪಟ್ಟಣದಲ್ಲಿ ಆಗಾಗ ಇಂತಹ ಘಟನೆಗಳು ಸಂಭವಿಸುತ್ತಿಿವೆ ಎಂದು ಸಾರ್ವಜನಿಕರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾರೆ.
ಚತುಷ್ಪಥ ರಸ್ತೆ ನಿರ್ಮಿಸುವ ಕಂಪನಿಯ ನಿರ್ಲಕ್ಷ್ಯ ಮಾನ್ವಿ: ಟಿಪ್ಪರ್ ಹಾಯ್ದು ಬೈಕ್ ಸವಾರ ಸ್ಥಳದಲ್ಲೇ ಸಾವು

