ಸುದ್ದಿಮೂಲ ವಾರ್ತೆ ಕವಿತಾಳ, ಡಿ.20:
ಸಮೀಪದ ಸೈದಾಪುರು ಗ್ರಾಾಮದಲ್ಲಿ ಎಳ್ಳ ಅಮಾವಾಸ್ಯೆೆ ಪ್ರಯುಕ್ತ ಶುಕ್ರವಾರ ಗ್ರಾಾಮ ದೇವತೆ ದುರ್ಗಾದೇವಿ ಉಚ್ಚ್ರಾಾಯ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆೆ ದೇವಸ್ಥಾಾನದಲ್ಲಿ ದುರ್ಗಾದೇವಿಗೆ ಕುಂಕುಮ ಅರ್ಚನೆ, ಮಹಾಮಂಗ ಳಾರತಿ ಸೇರಿದಂತೆ ಧಾರ್ಮಿಕವಾಗಿ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕೆಂಪಣ್ಣ ಪೂಜಾರಿ ಅವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಆಂಜನೇಯ ದೇವಸ್ಥಾಾನದಿಂದ ಪ್ರಮುಖ ರಸ್ತೆೆಗಳ ಮೂಲಕ ದುರ್ಗಾ ದೇವಿ ದೇವಸ್ಥಾಾನದವರಿಗೆ ಡೊಳ್ಳು ವಾದ್ಯಗಳೊಂದಿಗೆ ಕಳಸ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೌನೇಶ ಪೂಜಾರಿ, ಗ್ರಾಾಮ ಪಂಚಾಯಿತಿ ಮಾಜಿ ಸದಸ್ಯರಾದ ಬಸಪ್ಪ, ರಾಮಣ್ಣ, ಗುರುಬಸವ ನಾಯಕ, ಆಂಜನೇಯ, ಬರಮಯ್ಯ ಪೂಜಾರಿ, ಬಸವರಾಜ ಸಾಹುಕಾರ, ಸಾಬಪ್ಪಗೌಡ ಮಾಲಿ ಪಾಟೀಲ್, ಸಂಜೀವಪ್ಪ ನಾಯಕ, ಸಾಬಪ್ಪ ಬಾಗಲವಾಡ ಮತ್ತು ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.
ದುರ್ಗಾದೇವಿ ಉಚ್ಚ್ರಾಯ ಮಹೋತ್ಸವ ಸಂಪನ್ನ

