ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.09:
ರಾಜ್ಯ ಕಾಂಗ್ರೆೆಸ್ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡದೇ ರೈತ ವಿರೋಧಿ ನಿಲುವು ಅನುಸರಿಸುತ್ತಿಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ರೈತರೊಂದಿಗೆ ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸುವರ್ಣ ವಿಧಾನಸೌಧಕ್ಕೆೆ ಮುತ್ತಿಿಗೆ ಹಾಕಲು ಯತ್ನಿಿಸಿದ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆೆ ಪಡೆದರು.
ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಮೈದಾನದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ನಾಯಕರು, ಕಾಂಗ್ರೆೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಭ್ರಷ್ಟ ಸರ್ಕಾರ ತೊಲಗುವವರೆಗೂ ಬಿಜೆಪಿ ಹೋರಾಟ ಮಾಡಲಿದೆ ಎಂದು ಘೋಷಿಸಿ ರಣಕಹಳೆ ಮೊಳಗಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋೋಶ ವ್ಯಕ್ತಪಡಿಸಿದರಲ್ಲದೇ ಹಸಿರು ಟಾವೆಲ್ಗಳನ್ನು ಗಾಳಿಯಲ್ಲಿ ತಿರುಗಿಸಿ ಎಚ್ಚರಿಕೆ ಸಂದೇಶ ರವಾನಿಸಿದರು. ಇದೇ ವೇದಿಕೆಯಿಂದ ಸುಮಾರು 2 ಕಿ.ಮೀ. ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸುವರ್ಣ ವಿಧಾನಸೌಧದತ್ತ ತೆರಳುತ್ತಿಿದ್ದರು. ಈ ಸಂದರ್ಭದಲ್ಲಿ ಹಲಗಾ ಸಮೀಪ ಬರುತ್ತಿಿದ್ದಂತೆ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆೆಯಲ್ಲಿ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿಿದರು. ಈ ವೇಳೆ ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ಎ.ಎಸ್. ಪಾಟೀಲ ನಡಹಳ್ಳಿಿ, ಅಭಯ ಪಾಟೀಲ, ಎಂ.ಪಿ. ರೇಣುಕಾಚಾರ್ಯ ಸೇರಿ ಹಲವು ಪ್ರಮುಖರನ್ನು ವಶಕ್ಕೆೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.
2,500 ರೈತರ ಆತ್ಮಹತ್ಯೆೆ:
ಇದಕ್ಕೂ ಮೊದಲು ನಡೆದ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ಕಳೆದ ಎರಡೂವರೇ ವರ್ಷದಲ್ಲಿ ಎರಡೂವರೆ ಸಾವಿರ ರೈತರು ಆತ್ಮಹತ್ಯೆೆ ಮಾಡಿಕೊಂಡಿದ್ದಾರೆ. 30ಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಆತ್ಮಹತ್ಯೆೆಗೆ ಶರಣಾಗಿದ್ದಾರೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಅವೈಜ್ಞಾನಿಕ ಬೆಳೆ ಪರಿಹಾರ ಘೋಷಿಸಿ ರೈತರ ಗಾಯದ ಮೇಲೆ ಬರೆ ಎಳೆದಿದೆ. ಕನಿಷ್ಠ ಪಕ್ಷ ಆತ್ಮಹತ್ಯೆೆ ಮಾಡಿಕೊಂಡ ರೈತರ ಕುಟುಂಬಸ್ಥರನ್ನು ಭೇಟಿ ಮಾಡಲು ಇವರಿಗೆ ಆಗಿಲ್ಲ. ಸಚಿವರು ಎಸಿ ರೂಮ್ನಲ್ಲಿ ಕುಳಿತು ಮಜಾ ಮಾಡುತ್ತಿಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದ ಪರಿಹಾರ ಎನ್ನುವ ಕಾಂಗ್ರೆೆಸ್ ಸರ್ಕಾರಕ್ಕೆೆ ನಾಚಿಕೆಯಾಗಬೇಕು. ಕರ್ನಾಟಕ ಅತೀ ಹೆಚ್ಚು ಕಬ್ಬು ಬೆಳೆಯುವ ರಾಜ್ಯ. 35 ಸಾವಿರದಿಂದ 40 ಸಾವಿರ ಕೋಟಿ ಆದಾಯ ಸರ್ಕಾರಕ್ಕೆೆ ಬರುತ್ತದೆ. ಆದರೆ ಪ್ರತಿ ಟನ್ಗೆ 50ರೂ. ಪರಿಹಾರ ಘೋಷಿಸಿದರು. 54 ಲಕ್ಷ ಟನ್ ಮೆಟ್ರಿಿಕ್ ಟನ್ ಮೆಕ್ಕೆೆಜೋಳ ಬೆಳೆಯುತ್ತಾಾರೆ. ಆದರೂ ಖರೀದಿ ಕೇಂದ್ರ ತೆರೆಯಲಿಲ್ಲ. ಶೈತ್ಯಾಾಗಾರಗಳು ಮೆಕ್ಕೆೆಜೋಳ ಹಿಡಿದಿಟ್ಟುಕೊಳ್ಳುವ ಶಕ್ತಿಿ ರೈತರಿಗಿಲ್ಲ. ಹೀಗಾಗಿ 2,400 ರೂ. ಕೇಂದ್ರ ದರ ನಿಗದಿ ಮಾಡಿದೆ 1500-1600ಗೆ ಕ್ವಿಿಂಟಾಲ್ಗೆ ದಲ್ಲಾಳಿಗಳಿಗೆ ಕೊಡುವಂತೆ ಮಾಡಿತು.
ಕಲಬುರಗಿ ಜಿಲ್ಲೆಯಲ್ಲಿ 6.5 ಲಕ್ಷ ಟನ್ ತೊಗರಿ ಬೆಳೆಯುತ್ತಾಾರೆ. ಕೇವಲ 20 ಪ್ರತಿಶತ ಮಾತ್ರ ಉಳಿದಿದೆ. ಅಡಿಕೆಗೆ ಚುಕ್ಕೆೆ ರೋಗ ಬಂದಿದೆ. ಆದರೂ ರೈತರ ನೆರವಿಗೆ ಸರ್ಕಾರ ಬಂದಿಲ್ಲ. ಇಂಥ ಸಂದರ್ಭದಲ್ಲಿ ಯತೀಂದ್ರ ಐದು ವರ್ಷ ಅವರ ತಂದೆ ಸಿಎಂ ಆಗಿರುತ್ತಾಾರೆ ಎಂದಿದ್ದಾರೆ. ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿರುತ್ತಾಾರೆ ಮುಖ್ಯವಲ್ಲ. ಆ ಕುರ್ಚಿಯಲ್ಲಿ ಕುಳಿತಾಗ ರೈತರ ಸಂಕಷ್ಟಕ್ಕೆೆ ಸ್ಪಂದಿಸುವ ಕೆಲಸ ನಿಮ್ಮ ಅಪ್ಪ ಸಿದ್ದರಾಮಯ್ಯ ಅವರು ಮಾಡಿದ್ದಾರಾ ಎನ್ನುವುದು ಮುಖ್ಯ ಎಂದು ತಿರುಗೇಟು ಕೊಟ್ಟರು.
ರೈತರಿಗೆ ಸ್ಪಂದನೆ:
ಮುಖ್ಯಮಂತ್ರಿಿ ಹಾಗೂ ಸಚಿವರು ಈಗ ಹೆಲಿಕಾಪ್ಟರ್ನಲ್ಲಿ ಓಡಾಡುತ್ತಿಿದ್ದಾರೆ. ಏಕೆಂದರೆ ಜನ ಹೊಡೆಯುತ್ತಾಾರೆಂಬ ಭಯಕ್ಕೆೆ ಅದರಲ್ಲೇ ವೈಮಾನಿಕ ಸಮೀಕ್ಷೆ ಮಾಡಿದರು. ರಾಜ್ಯದಲ್ಲಿ ಎಲ್ಲೇ ರೈತ ಹೋರಾಟ ನಡೆದರೂ ಯಡಿಯೂರಪ್ಪ ಹೋಗುತ್ತಿಿದ್ದರು. ಹಗಲು ರಾತ್ರಿಿ ರೈತಪರ ಹೋರಾಟದಲ್ಲಿ ಪಾಲ್ಗೊೊಳ್ಳುತ್ತಿಿದ್ದರು. ರಾಜ್ಯದಲ್ಲಿ ರೈತರ ಹೋರಾಟವಾಗಲಿ, ರೈತರು ಎಲ್ಲೇ ಸಂಕಷ್ಟದಲ್ಲಿರಲಿ ಬಿಜೆಪಿಯ ವಿಜಯೇಂದ್ರ ಅಲ್ಲಿರುತ್ತಾಾರೆ ಎಂದು ವಿಜಯೇಂದ್ರ ಭರವಸೆ ನೀಡಿದರು.
ವಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ, ಕಾಂಗ್ರೆೆಸ್ ಸರ್ಕಾರಕ್ಕೆೆ ನಾಚಿಕೆ ಮಾನ ಮರ್ಯಾದೆ ಇದೆಯಾ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಬೆಳಗಾವಿ ವಿಮಾನ ನಿಲ್ದಾಾಣಕ್ಕೆೆ ಹೋಗುವಾಗ ಎಂಎಲ್ಸಿಿ ಚನ್ನರಾಜ ಹಟ್ಟಿಿಹೊಳಿ ಅವರು ನೀವು ಮುಖ್ಯಮಂತ್ರಿಿ ಅಲ್ಲ ಎಂದು ಹೇಳುತ್ತಾಾರೆ. ಸಿಎಂ ಡಿ.ಕೆ. ಶಿವಕುಮಾರ ಅವರ ಸ್ವಾಾಗತಕ್ಕೆೆ ವಿಮಾನ ನಿಲ್ದಾಾಣಕ್ಕೆೆ ಹೋಗುತ್ತಿಿದ್ದೇನೆ ಅಂತ ಟ್ವೀಟ್ ಮಾಡುತ್ತಾಾರೆ. ಸಿದ್ದರಾಮಯ್ಯ ಅವರೇ ಇದಕ್ಕಿಿಂತ ಬೇರೆ ಮಾರ್ಯಾದೆ ನಿಮಗೆ ಬೇಕಾ. ನಿಮಗೆ ಯೋಗ್ಯತೆ ಇದೆಯಾ ಎಂದು ಪ್ರಶ್ನಿಿಸಿದರು.
ಯಡಿಯೂರಪ್ಪ ಅವರು ಜಾರಿಗೆ ತಂದ ಯೋಜನೆಗಳನ್ನು ಕಡಿತ ಮಾಡಿದಿರಿ. ಬೆಳೆ ಪರಿಹಾರ ಕೊಡುತ್ತಿಿದ್ದೆವು. ಈ ಕಾಂಗ್ರೆೆಸ್ ಸರ್ಕಾರ ಬೆಳೆಹಾನಿಗಳಿಗೆ ಪರಿಹಾರ ಕೊಟ್ಟಿಿಲ್ಲ. ಕೇಂದ್ರ ಸರ್ಕಾರಕ್ಕೆೆ ಯಾವ ಮುಖ ಇಟ್ಟುಕೊಂಡು ಪರಿಹಾರ ಕೇಳುತ್ತಿಿರಿ. ಇದು ರೈತರ ಪರ ಹೋರಾಟ, ಇದರಲ್ಲಿ ಸ್ವಾಾರ್ಥ ಇಲ್ಲ. 5 ಲಕ್ಷ ಮನೆಗಳನ್ನು 95 ಸಾವಿರಕ್ಕೆೆ ಇಳಿಸಿದ್ದಾರೆ. ಏನಾದ್ರೂ ಕೇಳಿದ್ರೆೆ ಗ್ಯಾಾರಂಟಿ ಯೋಜನೆಗಳ ಬಗ್ಗೆೆ ಮಾತಾಡುತ್ತಾಾರೆ. ಖಜಾನೆ ಖಾಲಿ ಖಾಲಿ, ಕಾಂಗ್ರೆೆಸ್ ಜಾಲಿ ಜಾಲಿ ಎಂಬಂತಾಗಿದೆ. ಡಿಕೆಶಿ, ಸಿದ್ದರಾಮಯ್ಯ ಅವರು ಒದ್ದಾಡುತ್ತಿಿದ್ದಾರೆ. ಹೆಣ ಮುಂದೆ ಹೊರಬೇಕಾ, ಹಿಂದೆ ಹೊರಬೇಕಾ ಎಂಬ ವಿಚಾರದಲ್ಲಿದ್ದಾರೆ. ನಮ್ಮ ಹೋರಾಟಕ್ಕೆೆ ತಡೆಯಬೇಡಿ, ತೊಂದರೆ ಕೊಡಬೇಡಿ. ಇದು ಮನೆಗೆ ಹೋಗುವ ಸರ್ಕಾರ. ಈ ಸರ್ಕಾರ ತೊಲಗೋವರೆಗೂ ನಾವು ಹೋರಾಟ ಮಾಡುತ್ತೇವೆ. ಈ ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಇದು ಹೋಗುವ ಸರ್ಕಾರ. ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮುಂದೆ ಕರ್ನಾಟಕದಲ್ಲಿ ರೈತ ಪರವಾದ ಬಿಜೆಪಿ – ಜೆಡಿಎಸ್ ಪಕ್ಷ ಅಧಿಕಾರಕ್ಕೆೆ ಬರುತ್ತದೆ. ಆಗ ರೈತರಿಗೆ ಒಳ್ಳೆೆಯ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಆರ್. ಅಶೋಕ್ ಹೇಳಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಾಮಿ, ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

