ಸುದ್ದಿಮೂಲ ವಾರ್ತೆ ರಾಯಚೂರು, ಸೆ.30:
ರಾಯಚೂರು ಮಹಾನಗರ ಪಾಲಿಕೆಯಿಂದ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋೋಬರ್ 02ರ ಮಧ್ಯಾಾಹ್ನ 1 ಗಂಟೆಗೆ ಪಾಲಿಕೆ ಜೋನಲ್ 1ರ ಕಚೇರಿಯಿಂದ ಮಾಣಿಕಪ್ರಭು ಬನ್ನಿಿ ಮಂಟಪದವರೆಗೆ ನಾಡದೇವಿಯ ಮೆರವಣಿಗೆ ಹಮ್ಮಿಿಕೊಳ್ಳಲಾಗಿದೆ.
ಕಿಲ್ಲೇ ಬೃಹನ್ಮಠದ 108 ಸಾವಿರ ದೇವರ ಸಂಸ್ಥಾಾನದ ಷ//ಬ್ರ//ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಾಮೀಜಿ ಕಾರ್ಯಕ್ರವ್ಮದ ಸಾನ್ನಿಿಧ್ಯ ವಹಿಸಲಿದ್ದಾರೆ.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಾಭಿವೃದ್ಧಿಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಉದ್ಘಾಾಟಿಸುವರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಘನ ಉಪಸ್ಥಿಿತಿ ವಹಿಸುವರು.
ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್ ಅವರು ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ.
ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷ ನರಸಮ್ಮ ನರಸಿಂಹಲು ಮಾಡಗಿರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಉಪಮೇಯರ್ ಸಾಜೀದ್ ಸಮೀರ್ ಸೇರಿ ಜಿಲ್ಲೆೆಯ ಸಂಸದರು, ಶಾಸಕರು , ಪಾಲಿಕೆ ಸದಸ್ಯರು ಭಾಗವಹಿಸಲಿದ್ದಾಾರೆ ಎಂದು ಪಾಲಿಕೆ ಆಯುಕ್ತ ಜುಬೀನ್ ಮೊಹಾಪಾತ್ರ ತಿಳಿಸಿದ್ದಾಾರೆ.