ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ಅ: 14:ಮಹದೇವಪುರ ಸಮೀಪದ ಜೈನ್ ಹೆರಿಟೇಜ್ ಶಾಲೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಮಕ್ಕಳಿಗೆ ದಸರಾ ಅಂತರ ಸ್ಪರ್ಧೆ ಏರ್ಪಡಿಸಲಾಗಿತ್ತು.
ರಾಮಲೀಲಾ ನೃತ್ಯ, ಮುಖದ ಮೇಲೆ ಪೆಂಟಿಂಗ್ ಬಳಿಯುವುದು, ಬೊಂಬೆ ಪ್ರದರ್ಶನ, ಮಕ್ಕಳ ಸಾಹಿತ್ಯ, ಮಕ್ಕಳ ಆಟಗಳು, ಮಹಿಷಾಸುರ ಮರ್ದಿನಿ ನೃತ್ಯ, ನವದುರ್ಗೆಯ ನೃತ್ಯ ಪ್ರದರ್ಶನ ಗಮನ ಸೆಳೆದವು.
ಜೈನ್ ಹೆರಿಟೇಜ್ ಶಾಲೆಯ ಮುಖ್ಯಸ್ಥ ಶಾಶ್ವತ್ ಮಾತನಾಡಿ, ದಸರಾ ಹಬ್ಬ ಒಂದೊಂದು ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಹಬ್ಬದ ಆಚರಣೆ ಹೇಗೆ ನಡೆಯುತ್ತದೆ ಎನ್ನುವ ಮಹತ್ವವನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ತಿಳಿಸುವ ಉದ್ದೇಶದಿಂದ ಅಂತರ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಮಧುಮಿತಾ ಬ್ಯಾನರ್ಜಿ, ನಮ್ಮ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಹಾಗೂ ಉಳಿಸಿ ಬೆಳೆಸುವ ಸಲುವಾಗಿ ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಅಡಳಿತ ಅಧಿಕಾರಿ ಪ್ರಶಾಂತ್ ಇದ್ದರು.