ಸುದ್ದಿಮೂಲ ವಾರ್ತೆ ರಾಯಚೂರು, ಸೆ.30:
ರಾಯಚೂರು ಮಹಾನಗರ ಪಾಲಿಕೆ ಮತ್ತು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಬಹುಭಾಷಾ ಕವಿಗೋಷ್ಠಿಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತುಘಿ.
ಮಂಗಳವಾರ ಸಂಜೆ ರಾಯಚೂರಿನ ಬಸ್ ನಿಲ್ದಾಾಣ ಮುಂದಿನ ಮಕ್ಕಾಾ ದರ್ವಾಜ್ ಆವರಣದಲ್ಲಿ ಹಮ್ಮಿಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿಿಯನ್ನು ಪಾಲಿಕೆ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಉದ್ಘಾಾಟಿಸಿದರು.
ನಂತರ ಕವಿಗೊಷ್ಠಿಿಯಲ್ಲಿ ಪಾಲ್ಗೊೊಂಡಿದ್ದ ಕವಿಗಳು ಸಮಾಜದಲ್ಲಿನ ಸಮಸ್ಯೆೆಗಳು, ರಾಜಕಾರಣದಲ್ಲಿನ ಅರಾಜಕತೆ, ಭ್ರಷ್ಟಾಾಚಾರ, ಪ್ರಜಾಪ್ರಭುತ್ವದಲ್ಲಿನ ಜನರ ಬವಣೆ, ದಸರಾ ಹಬ್ಬದ ಆಚರಣೆ, ಮಹಿಳೆ, ಶೋಷಣೆ ಹೀಗೆ ಹತ್ತಾಾರು ವಿಷಯಗಳ ಮೇಲೆ ತಮ್ಮ ಕವನಗಳ ಮೂಲಕ ಬೆಳಕು ಚೆಲ್ಲಿ ವ್ಯವಸ್ಥೆೆಯ ಅನಾವರಣ ಮಾಡಿದರು.
ವೇದಿಕೆಯಲ್ಲಿ ಉಪ ಮೇಯರ್ ಸಾಜೀದ್ ಸಮೀರ್ , ಸದಸ್ಯರಾದ ಜಯಣ್ಣ,ಉಪ-ಆಯುಕ್ತರಾದ ಸಂತೋಷ ರಾಣಿ ಕೋಟೆ ಅಧ್ಯಯನ ಸಮಿತಿಯ ಕೆ. ಸತ್ಯನಾರಾಯಣ, ಆರ್ಡಿಎ ಸದಸ್ಯ ನರಸಿಂಹಲು ಮಾಡಗಿರಿ, ಮಣಿಕಂಠ, ಪರಮೇಶ್ವರ ಸಾಲಿಮಠ, ಬಾಬು ಭಂಡಾರಿಗಲ್, ವೆಂಕಟೇಶ ಬೇವಿನಬೆಂಚಿ, ಎಚ್.ಎಚ್.ಮ್ಯಾಾದಾರ್ ಕೋಟೆ ಅಧ್ಯಯನ ಸಮಿತಿಯ ಪದಾಧಿಕಾರಿಗಳು, ವಿವಿಧ ಭಾಷೆಗಳ ಕವಿಗಳು ಉಪಸ್ಥಿಿತರಿದ್ದರು.
ಪಾಲಿಕೆಯಿಂದ ದಸರಾ ಬಹುಭಾಷ ಕವಿಗೋಷ್ಠಿಿಗೆ ಚಾಲನೆ ಶೋಷಣೆ, ಜನರ ಬವಣೆ ಅನಾವರಣ
