ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.10:
ರಸ್ತೆೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಾಯವಾಗಿ ಪಾಲಿಸಿ ಕಾನೂನು ಪಾಲನೆ ಮಾಡಬೇಕೆಂದು ಹರಪನಹಳ್ಳಿಿ ಉಪ ವಿಭಾಗದ ಡಿವೈಎಸ್ಪಿಿ ಸಂತೋಷ್ ಚೌಹಾಣ್ ಹೇಳಿದರು.
ನಗರದ ಹರಪನಹಳ್ಳಿಿ ಪೊಲೀಸ್ ಠಾಣೆಯ ಆವರಣದಲ್ಲಿ ಹರಪನಹಳ್ಳಿಿ ಪೊಲೀಸ್ ಠಾಣೆ ವತಿಯಿಂದ 37ನೇ ರಸ್ತೆೆ ಸುರಕ್ಷತಾ ಸಪ್ತಾಾಹ ಅಂಗವಾಗಿ ಆಯೋಜಿಸಿದ್ದ ರಸ್ತೆೆ ಸುರಕ್ಷಿತ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಅವರು ಮಾತನಾಡಿದರು.
ದ್ವಿಿಚಕ್ರ ವಾಹನ ಚಾಲನೆ ಮಾಡುವವರು ಕಡ್ಡಾಾಯವಾಗಿ ಹೆಲ್ಮೆೆಟ್ ಧರಿಸಿ, ಸಂಚಾರ ನಿಯಮಗಳನ್ನು ಅನುಸರಿಸಬೇಕು. ಚಾಲನಾ ಪರವಾನಗಿ, ಇನ್ಶೂರೆನ್ಸ್ ಸೇರಿ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು.ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಾಯ. ರಸ್ತೆೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಸಾರ್ವಜನಿಕರು ಸಾಕಷ್ಟು ಸಾವು ನೋವುಗಳನ್ನು ತಪ್ಪಿಿಸಬಹುದಾಗಿದೆ ಎಂದು ಅವರು ಅರಿವು ಮೂಡಿಸಿದರು.
ಇಲ್ಲಿನ ಹರಿಹರ ವೃತ್ತದಿಂದ್ದ ಸರ್ಕಾರಿ ಆಸ್ಪತ್ರೆೆಯ ಮುಖ್ಯ ರಸ್ತೆೆ ಸೇರಿದಂತೆ ನಗರದ ವಿವಿಧ ರಸ್ತೆೆಗಳಲ್ಲಿ ರಸ್ತೆೆ ಸುರಕ್ಷತಾ ಕಾನೂನಿನ ಬಗ್ಗೆೆ ವಿವಿಧ ಘೋಷ ವಾಕ್ಯಗಳೊಂದಿಗೆ ಪೊಲೀಸರು ಜಾಥಾ ನಡೆಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಹರಪನಹಳ್ಳಿಿ ಸಿಪಿಐ ಮಹಾಂತೇಶ್ ಸಜ್ಜನ್, ವಿವಿಧ ಠಾಣೆ ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ವಿಜಯ ಕೃಷ್ಣ,ಕಿರಣ್ ಕುಮಾರ್,ನಾಗರತ್ನ, ಕ್ರೈಮ್ ವಿಭಾಗದ ಮೀನಾಕ್ಷೀ , ಹಾಗೂ ಎಎಸ್ಐಗಳು ಸೇರಿದಂತ್ತೆೆ ಹರಪನಹಳ್ಳಿಿ ವೃತ್ತದ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪಾಲ್ಗೊೊಂಡಿದ್ದರು.
ರಸ್ತೆ ಸುರಕ್ಷತಾ ನಿಯಮ ಪಾಲನೆಗೆ ಡಿವೈಎಸ್ಪಿ ಸಲಹೆ

