ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಆಸ್ತಿಿಯ ಕಾನೂನು ಬದ್ಧ ಇ-ಖಾತಾ ಪಡೆಯಲು ಸಾಧ್ಯವಾಗುತ್ತದೆ ಎಂಬ ಸಂತೋಷದ ಸಂದೇಶ ರಾಯಚೂರು ಮಹಾನಗರ ಪಾಲಿಕೆ ನೀಡುತ್ತಿಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಆಸ್ತಿಿ ಕಣಜ ಅಧಾರವಾಗಿರಿಸಿಕೊಂಡು ಮಾದರಿ ಇ-ಖಾತಾ ಸರ್ಕಾರ ಪ್ರಕಟಿಸಿದೆ. ಇದನ್ನು ರಾಜ್ಯದ ಇ-ಆಸ್ತಿಿ ತಂತ್ರಾಾಂಶದ ಮೂಲಕ ಸಾರ್ವಜನಿಕರು ಅಗತ್ಯ ಕ್ರಮ ತೆಗೆದುಕೊಳ್ಳಬಹುದಾಗಿದೆ. ರಾಯಚೂರು ಮಹಾನಗರ ಪಾಲಿಕೆ ಈ ಪ್ರಕ್ರಿಿಯೆಯಲ್ಲಿ ನಾಗರಿಕರಿಗೆ ಪೂರ್ಣ ಮಾರ್ಗದರ್ಶನ ಮತ್ತು ಸಹಾಯ ನೀಡಲು ತಯಾರಾಗಿದೆ. ಈ ಸೇವೆಯ ಮೂಲಕ ಆಸ್ತಿಿ ದಾಖಲೆ ಪಾರದರ್ಶಕತೆ ಸಾಕಾರಗೊಳಿಸಲಾಗುತ್ತಿಿದೆ.
ದಾಖಲಾತಿಗಳು: ಮಾಲೀಕರ ಭಾವಚಿತ್ರ ಮತ್ತು ಆಧಾರ್ ಕಾರ್ಡ್, ಆಸ್ತಿಿ ತೆರಿಗೆ ಎಸ್.ಎ.ಎಸ್. ಚಲನ್ ಸಂಖ್ಯೆೆ, ಸ್ವತ್ತಿಿನ ಕ್ರಯ/ನೊಂದಾಯಿತ ಪತ್ರ ಸಂಖ್ಯೆೆ (ಕಾವೇರಿ ತಂತ್ರಾಾಂಶದಿಂದ ವಿದ್ಯುನ್ಮಾಾನವಾಗಿ ಪಡೆದುಕೊಳ್ಳುತ್ತದೆ)., ವಿದ್ಯುತ್ ಆರ್.ಆರ್.ಸಂಖ್ಯೆೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ), ಸ್ವತ್ತಿಿನ ಛಾಯಾಚಿತ್ರ., ಇಸಿ ನಮೂನೆ-15/16, ಸ್ವತ್ತಿಿಗೆ ಸಂಬಂಧಿಸಿದ ಇತರ ಪೂರಕ ಅಗತ್ಯ ದಾಖಲೆಗಳೊಂದಿಗೆ ಸಾರ್ವಜನಿಕರು ತಮ್ಮ ಮನೆಯಿಂದಲೇ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ, ಆನ್ಲೈನ್ ಅರ್ಜಿ ಸಲ್ಲಿಸಿ ನಿಗದಿತ ಸಮಯದೊಳಗೆ ಇ-ಖಾತಾ ಪಡೆಯಬಹುದಾಗಿದೆ. ಕೆ-1 ಕೇಂದ್ರಗಳಲ್ಲಿಯೂ ತಂತ್ರಾಾಂಶ ಬಳಸಿ ಸೇವೆ ಪಡೆಯಬಹುದಾಗಿದೆ. ಹೆಚ್ಚಿಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆೆ: 7259585959ಗೆ ಅಥವಾ ಇ-ಖಾತಾವನ್ನು ಆನ್ಲೈನ್ನಲ್ಲಿ ಕಾಲೋಚಿತಗೊಳಿಸಲು ಭೇಟಿ ನೀಡಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

