ಸುದ್ದಿಮೂಲ ವಾರ್ತೆ
ಆನೇಕಲ್,ಜು.19 : ಇತ್ತೀಚೆಗೆ ಹಸುಗಳಲ್ಲಿ ಮಾರಕ ರೋಗ ಕಾಣಿಸಿಕೊಂಡಿದೆ. ಕಿವಿ ಸೋಂಕು ಕಾಣಿಸಿಕೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಹಲವು ಹಸುಗಳು ಸಾವಿಗೀಡಾಗಿದೆ. ಅಂತಹ ಮಾರಕ ರೋಗ ಕಿವಿ ಸೋಂಕು ಆನೇಕಲ್ ಗೂ ಲಗ್ಗೆ ಇಟ್ಟಿದೆ. ಹೀಗಾಗಿ, ರೈತರಿಗೆ ಹಸುಗಳ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೈನುಗಾರಿಕೆಯನ್ನು ನಂಬಿಕೊಂಡಿದ್ದ ರೈತರು ಕಂಗಲಾಗಿದ್ದಾರೆ
ಹೊಸ ಕಾಯಿಲೆ ಬಗ್ಗೆ ಸಿಬ್ಬಂದಿಗಳು ಮತ್ತು ವೈದ್ಯರು ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡಿ ಚಿಕಿತ್ಸೆಯ ನೀಡಲು ವೈದ್ಯರ ತಂಡ ಮುಂದಾಗಿದ್ದಾರೆ. ಹಸುಗಳಲ್ಲಿ ಪ್ರಮುಖವಾಗಿ ಜ್ವರ, ಎರಡನೇ ದಿನಕ್ಕೆ ಕಿವಿಯಲ್ಲಿ ಸೋಂಕು, ಕಿವಿಯಲ್ಲಿ ವಾಸನೆಯಂತಹ ಲಕ್ಷಣಗಳು ಹಸುಗಳಲ್ಲಿ ಪತ್ತೆ ಆಗುತ್ತಿದೆ. ಬಳಿಕ ರೋಗಗ್ರಸ್ಥ ಹಸುಗಳಿಗೆ ವೈದ್ಯರಿಂದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಕಿವಿ ಸೋಂಕು ಸುಮಾರು 15 ದಿನಗಳಿಂದ 30-40 ಹಸುಗಳಲ್ಲಿ ಕಾಣಿಸಿಕೊಂಡಿದ್ದು, ದಿನಕ್ಕೆ ಒಂದರಿಂದ ಎರಡು ಹಸುಗಳಲ್ಲಿ ಈ ಕಿವಿ ಸೋಂಕು ಪತ್ತೆ ಆಗಿದೆ. ಹೀಗಾಗಿ, ಬೆಂಗಳೂರಿನ ವೈದ್ಯ ಮತ್ತು ಸಂಶೋಧನಾ ವೈದ್ಯರ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.
ಕಿವಿ ಸೋಂಕು, ಗಂಟಲು ಮತ್ತು ಕುತ್ತಿಗೆ ಭಾಗದಲ್ಲಿ ಊತ ತರದ ಕಾಯಿಲೆ ಪತ್ತೆ ಆಗುತ್ತಿದೆ. ಪ್ರತ್ಯೇಕವಾಗಿ ಅವುಗಳಿಗೆ ಹಾರೈಕೆ ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಐದು ದಿನಗಳ ಕಾಲ ಚಿಕಿತ್ಸೆ ನೀಡಿದರೆ ಗುಣಮುಖ ಆಗುತ್ತದೆ ಎಂದು ಹಸುಗಳ ಮಾಲೀಕ ಹರೀಶ್ ಮಾಹಿತಿ ನೀಡಿದರು
ಕಿವಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರಿಗೆ ಹಸುಗಳನ್ನು ಮತ್ತು ಕೋಣೆಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು, ಹಸುಗಳನ್ನು ಆಗಾಗ ತೊಳೆದು ಸ್ವಚ್ಚವಾಗಿ ಇಟ್ಟುಕೊಳ್ಳುವುದು. ಕಿವಿ ಸೋಂಕಿಗೆ ರೈತರು ಆತಂಕ ಪಡುವಂತಿಲ್ಲ. ಅದಕ್ಕೆ ಬೇಕಾದ ಔಷಧಿಗಳನ್ನು ಐದು ದಿನಗಳ ಕಾಲ ನೀಡಿದರೆ, ಆ ಕಾಯಿಲೆಯನ್ನ ಹತೋಟಿಗೆ ತರಬಹುದು. ಯಾವುದೇ ಕಾರಣಕ್ಕೂ ರೈತರು ಭಯ ಪಡುವಂತಿಲ್ಲ. ಪಶುವೈದ್ಯ ಕೇಂದ್ರದಲ್ಲಿ ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಸಹಾಯಕ ನಿರ್ದೇಶಕ ಮೋಹನ್ ತಿಳಿಸಿದ್ದಾರೆ.