ಸುದ್ದಿಮೂಲ ವಾರ್ತೆ ನವದೆಹಲಿ, ಅ.17
ಆಕ್ಟಾಾ ಎ್ಎಕ್ಸ್ ಪೊಂಜಿ ಹಗರಣದಲ್ಲಿ 2.385 ಕೋಟಿ ರೂ. ಮೌಲ್ಯದ ಕ್ರಿಿಪ್ಟೊೊ ಕರೆನ್ಸಿಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಪ್ರಕರಣದ ಸ್ಪ್ಯಾಾನಿಸ್ ಮಾಸ್ಟರ್ಮೈಂಡ್ ಅನ್ನು ಭಾರತದಲ್ಲೇ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ಟಾಾ ಎ್ಎಕ್ಸ್ವಿದೇಶಿ ವಿನಿಯಮ ವೇದಿಕೆ ಮೂಲಕ ಹೆಚ್ಚಿಿನ ಆದಾಯದ ಸುಳ್ಳು ಭರವಸೆ ನೀಡಿ ಹಲವು ಮಂದಿಯಿಂದ ಹಣ ಹೂಡಿಕೆ ಮಾಡಿಕೊಂಡು ಅವರಿಗೆ ವಂಚಿಸಿದೆ. ಹಣ ಹೂಡಿಕೆ ಮಾಡಿದವರು ಇಡಿಗೆ ದೂರು ಸಲ್ಲಿಸಿದ್ದರು.
ಅನಧಿಕೃತ ವಿದೇಶಿ ವಿನಿಮಯ ವೇದಿಕೆ ಆಕ್ಟಾಾ ಎ್ಎಕ್ಸ್ ವಿರುದ್ಧ ನಡೆಯುತ್ತಿಿರುವ ತನಿಖೆಗೆ ಸಂಬಂಧಿಸಿದಂತೆ 2,385 ಕೋಟಿ ರೂ. ಮೌಲ್ಯದ ಕ್ರಿಿಪ್ಟೊೊಕರೆನ್ಸಿಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆೆ ಆಡಿಯಲ್ಲಿ ತಾತ್ಕಾಾಲಿಕ ಆದೇಶವನ್ನು ನೀಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾವೆಲ್ ಬಂಧನ: ಪ್ರಕರಣದ ಪ್ರಮುಖ ಆರೋಪಿ ಪಾವೆಲ್ ಪ್ರೊೊಜೊರೊವ್ ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಅನೇಕ ದೇಶಗಳ ಮೇಲೆ ಪರಿಣಾಮ ಬೀರುವ ಸೈಬರ್ ಅಪರಾಧಗಳಲ್ಲಿ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆಕ್ಟಾಾಎ್ಎಕ್ಸ್ ಜುಲೈ 2022ರಿಂದ ಏಪ್ರಿಿಲ್ 2023ರವರೆಗೆ ಬಹು ದೇಶ ಕಾರ್ಯಾಚರಣೆ ಮೂಲಕ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಿ 1,875 ಕೋಟಿ ರೂ ಹಣವನ್ನು ವ್ಯವಸ್ಥಿಿತವಾಗಿ ವಂಚಿಸಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಂಪನಿ 2019-2024 ರವರೆಗೆ ಭಾರತದಿಂದ ಒಟ್ಟು 5000 ಕೋಟಿಗೂ ರೂ. ಹೆಚ್ಚು ಲಾಭಗಳಿಸಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಇದರಲ್ಲಿ ಹೆಚ್ಚಿಿನ ಅಕ್ರಮವಾಗಿ ವಿದೇಶಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.