ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಅಮರಾಪುರ ಕ್ರಾಾಸ್ ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌೌಢಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು, ಮಲ್ಲೇಗೌಡರದೊಡ್ಡಿಿ ಉನ್ನತೀಕರಿಸಿದ ಹಿರಿಯ ಪ್ರಾಾಥಮಿಕ ಶಾಲೆಯನ್ನು ಮಂಜೂರು ಮಾಡಲು ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ವಿಧಾನಸಭೆಯ ಪ್ರಶ್ನೋೋತ್ತರ ಕಲಾಪದ ವೇಳೆ ಗುರುವಾರ ದೇವದುರ್ಗ ಶಾಸಕಿ ಕರೆಮ್ಮ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಅಮರಾಪುರ ಕ್ರಾಾಸ್ನಲ್ಲಿ ಕಿರಿಯ ಪ್ರಾಾಥಮಿಕ ಶಾಲೆ (1-5ನೇ ತರಗತಿ) ನಡೆಯುತ್ತಿಿದ್ದು, 66 ಮಕ್ಕಳಿದ್ದಾರೆ. ನವಿಲಗುಡ್ಡದ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ 1-8ನೇ ತರಗತಿ ನಡೆಯುತ್ತಿಿದ್ದು, 119 ಮಕ್ಕಳಿದ್ದಾರೆ. ಸುತ್ತಮುತ್ತಲ ಗ್ರಾಾಮಗಳಿಗೂ ಅನುಕೂಲವಾಗುವಂತೆ ಪರಿಶೀಲಿಸಿ ಅಮರಾಪುರ ಕ್ರಾಾಸ್ ಶಾಲೆಯನ್ನು ಪ್ರೌೌಢಶಾಲೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.
ಮಲ್ಲೇಗೌಡರದೊಡ್ಡಿಿಯಲ್ಲಿ ಹಿಂದಿನ ಸರ್ಕಾರ ಕೆಕೆಆರ್ಡಿಬಿ ಅನುದಾನದಡಿ ಶಾಲಾ ಕಟ್ಟಡ, ಅಡುಗೆ ಕೋಣೆ, ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ, ಇದು ಬುಂಕಲದೊಡ್ಡಿಿಯಿಂದ ಕೇವಲ 3ಕಿ.ಮೀ. ಅಂತರದಲ್ಲಿ ಇದ್ದು, ಮಲ್ಲೇಗೌಡರದೊಡ್ಡಿಿಯಲ್ಲಿ ಬ್ರ್ಯಾಾಂಚ್ ಶಾಲೆ ಪ್ರಾಾರಂಭಿಸಲಾಗಿದೆ. ಈ ಶಾಲೆಗೆ ಹುದ್ದೆಗಳಾಗಲೀ, ಡಯಾಸ್ಕೋೋಡ್ ಅಗಲೀ ಮಂಜೂರಾಗಿಲ್ಲ. ಈ ಬಗ್ಗೆೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸದ್ಯ 10 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಕ್ಕೆೆ ಟಿಇಟಿ ಪರೀಕ್ಷೆ ನಡೆಸಲಾಗುವುದು. ಹೊಸ ಶಿಕ್ಷಕರ ನೇಮಕಾತಿ ಬಳಿಕ ಕಲ್ಯಾಾಣ ಕರ್ನಾಟಕಕ್ಕೂ ಅಗತ್ಯ ಶಿಕ್ಷಕರನ್ನು ಒದಗಿಸಲಾಗುವುದು ಎಂದು ಸಚಿವ ಮಧುಬಂಗಾರಪ್ಪ ಇದೇ ವೇಳೆ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕಿ ಕರೆಮ್ಮ, ಮಲ್ಲೇಗೌಡದ ದೊಡ್ಡಿಿ ಶಾಲೆಯಲ್ಲಿ ತಾತ್ಕಾಾಲಿಕ ಶಿಕ್ಷಕರಿದ್ದು, ಇದಕ್ಕೆೆ ಅಧಿಕೃತ ಮಂಜೂರು ನೀಡುವ ಮೂಲಕ ಕಾಯಂ ಶಿಕ್ಷಕರನ್ನು ನೇಮಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಅಮರಾಪುರ ಕ್ರಾಾಸ್ ಶಾಲೆಯನ್ನು ಪ್ರೌೌಢಶಾಲೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಇಲ್ಲಿ ಸುತ್ತಮುತ್ತ ಐದಾರು ಗ್ರಾಾಮಗಳ ವಿದ್ಯಾಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದ ಶಾಸಕರು, ದೇವದುರ್ಗ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಾರ್ಥಿಗಳ ಸಂಖ್ಯೆೆ ವರ್ಷದಿಂದ ವರ್ಷಕ್ಕೆೆ ಹೆಚ್ಚಳ ಆಗುತ್ತಿಿದ್ದು, ಹೊಸ ಶಾಲೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ದೇವದುರ್ಗ ತಾಲ್ಲೂಕಿಗೆ ಒಟ್ಟು 1674 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು 639 ಕಾಯಂ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿಿದ್ದಾರೆ. ಉಳಿದ ಕಡೆ ಅತಿಥಿ ಶಿಕ್ಷಕರ ಸೇವೆ ಪಡೆಯಲಾಗುತ್ತಿಿದೆ. ಹೀಗಾಗಿ ಕಾಯಂ ಹುದ್ದೆ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕಿ ಕರೆಮ್ಮ ಪ್ರಶ್ನೆೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ಅಮರಾಪುರ ಕ್ರಾಾಸ್ ಶಾಲೆ ಪ್ರೌೌಢಶಾಲೆಯಾಗಿ ಮೇಲ್ದರ್ಜೆಗೆ

